Site icon Vistara News

TaTa acquire Bisleri | ಟಾಟಾ ತೆಕ್ಕೆಗೆ ಬಿಸ್ಲೇರಿ, 7,000 ಕೋಟಿ ರೂ. ಡೀಲ್

Bisleri

ಮುಂಬಯಿ: ಟಾಟಾ ಗ್ರೂಪ್‌‌, ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು (TaTa acquire Bisleri ) ಖರೀದಿಸಿದೆ. ಒಟ್ಟು 7,000 ಕೋಟಿ ರೂ.ಗೆ ಈ ಡೀಲ್‌ ನಡೆದಿದೆ ಎಂದು ವರದಿಯಾಗಿದೆ.

ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ.

ಟಾಟಾ ಸಮೂಹವು ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ.

ಹಿಮಾಲಯನ್‌ ಮತ್ತು ಟಾಟಾ ಕಾಪ್ಪರ್‌ ಪ್ಲಸ್‌ ವಾಟರ್‌, ಟಾಟಾ ಗ್ಲೊಕೊ+ ಎಂಬ ಬ್ರಾಂಡ್‌ಗಳಲ್ಲಿ ಪ್ಯಾಕೇಜ್ಡ್‌ ಕುಡಿಯುವ ನೀರಿನ ಬಾಟಲಿಗಳ ಮಾರಾಟ ನಡೆಸುತ್ತಿದೆ.

ಟಾಟಾ ಸಮೂಹವು ಬಿಸ್ಲೇರಿಯನ್ನು ಖರೀದಿಸುವುದರೊಂದಿಗೆ, ಅದಕ್ಕೆ ದಿನ ಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ದೊಡ್ಡ ಮುನ್ನಡೆ ಲಭಿಸಿದೆ. ಭಾರತದಲ್ಲಿ ಬಾಟಲಿಗಳಲ್ಲಿನ ಕುಡಿಯುವ ನೀರಿನ ಮಾರಾಟ ವಹಿವಾಟು ವಾರ್ಷಿಕ 19,315 ಕೋಟಿ ರೂ.ಗಳಾಗಿವೆ. ಸದ್ಯಕ್ಕೆ ಮಾರುಕಟ್ಟೆ ಪ್ರಾಬಲ್ಯವನ್ನು ಬಿಸ್ಲೇರಿ ಹೊಂದಿದೆ.

ಬಿಸ್ಲೇರಿ ಇಂಟರ್‌ನ್ಯಾಶನಲ್‌ ಭಾರತದ ಅತಿ ದೊಡ್ಡ ಬಾಟಲಿ ಕುಡಿಯುವ ನೀರಿನ ಉತ್ಪಾದಕ ಕಂಪನಿಯಾಗಿದ್ದು, 150 ಉತ್ಪಾದನಾ ಘಟಕಗಳನ್ನು ಹಾಗೂ 4,000 ವಿತರಕರು, 4,000 ಟ್ರಕ್‌ಗಳ ನೆಟ್‌ ವರ್ಕ್‌ ಅನ್ನು ಹೊಂದಿದೆ.

Exit mobile version