Site icon Vistara News

Tata Group : ಟಾಟಾ ಗ್ರೂಪ್‌ನಿಂದ ಮೊದಲ ಬಾರಿಗೆ ಕೋಲಾರದಲ್ಲಿ ಐಫೋನ್‌ ಉತ್ಪಾದನೆ

From next year iphones will have RCS support Says Apple

ನವ ದೆಹಲಿ: ಟಾಟಾ ಸಮೂಹವು (Tata Group) ಐಫೋನ್‌ ಉತ್ಪಾದನೆ ಮಾಡುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಲಿದೆ. ಕೋಲಾರ ಬಳಿಯ ವಿಸ್ಟ್ರಾನ್‌ ಕಾರ್ಖಾನೆಯಲ್ಲಿ ಟಾಟಾ ಸಮೂಹವು ಮುಂಬರುವ ಆಗಸ್ಟ್‌ನಿಂದ ಐಫೋನ್‌ಗಳನ್ನು ತಯಾರಿಸಲಿದೆ ಎಂದು ವರದಿಯಾಗಿದೆ. ತೈವಾನ್‌ ಮೂಲದ ವಿಸ್ಟ್ರಾನ್‌ ಕಂಪನಿಯು ಸದ್ಯಕ್ಕೆ ಕೋಲಾರದ ನರಸಾಪುರದಲ್ಲಿರುವ ಘಟಕದಲ್ಲಿ ಐಫೋನ್‌ಗಳನ್ನು (iphone) ತಯಾರಿಸುತ್ತಿದೆ.

ಟಾಟಾ ಗ್ರೂಪ್‌ ಆ್ಯಪಲ್‌ ಕಂಪನಿ ಜತೆಗೆ ಈ ಸಂಬಂಧ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಐಫೋನ್‌ ತಯಾರಿಸುವ ಮೊದಲ ಭಾರತೀಯ ಕಂಪನಿಯಾಗಿ ಟಾಟಾ ಗ್ರೂಪ್‌ ಹೊರಹೊಮ್ಮಲಿದೆ. ಸುಮಾರು 4,000 ಕೋಟಿ ರೂ.ಗೆ ಘಟಕವನ್ನು ಟಾಟಾ ಖರೀದಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ವಿಸ್ಟ್ರಾನ್‌ ಗ್ರೂಪ್‌ 2023-24ರಲ್ಲಿ ಕನಿಷ್ಠ 1.8 ಶತಕೋಟಿ ಡಾಲರ್‌ ಮೌಲ್ಯದ ಐಫೋನ್‌ಗಳನ್ನು ಉತ್ಪಾದಿಸಲು ಬದ್ಧವಾಗಿದೆ. ಇದೀಗ ಟಾಟಾ ಗ್ರೂಪ್‌ ಕೋಲಾರದಲ್ಲಿನ ಘಟಕವನ್ನು ಖರೀದಿಸುವುದರಿಂದ, ಈ ಬದ್ಧತೆಯನ್ನು ಟಾಟಾ ಮುಂದುವರಿಸುವ ನಿರೀಕ್ಷೆ ಇದೆ. ಚೀನಾದಿಂದ ಹೊರಗೆ ಐಫೋನ್‌ ಉತ್ಪಾದನೆಯಲ್ಲಿ ವೈವಿಧ್ಯತೆ ತರಲು ಆ್ಯಪಲ್‌ ಕಂಪನಿಗೆ ಇದರಿಂದ ಸಹಕಾರಿಯಾಗಲಿದೆ.

ಕೋಲಾರದ ನರಸಾಪುರದಲ್ಲಿರುವ ಘಟಕದಲ್ಲಿ ವಿಸ್ಟ್ರಾನ್‌ ಕಳೆದ 5 ವರ್ಷಗಳಿಂದ ಐಫೋನ್‌ಗಳನ್ನು ತಯಾರಿಸುತ್ತಿದೆ. ಐಫೋನ್‌ ಎಸ್‌ಇ, ಐಫೋನ್‌ 12, ಐಫೋನ್‌ 14 ಅನ್ನು ತಯಾರಿಸುತ್ತಿದೆ. ಸುಮಾರು 10,000 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ‌

ಆ್ಯಪಲ್‌ ಕಂಪನಿಯ ಐಫೋನ್‌ ಉತ್ಪಾದನೆಯ ಪ್ರಮುಖ ಗುತ್ತಿಗೆದಾರ ಕಂಪನಿ ಫಾಕ್ಸ್‌ಕಾನ್‌ ಬೆಂಗಳೂರಿನ ಹೊರ ವಲಯದಲ್ಲಿ 1.3 ಕೋಟಿ ಚದರ ಅಡಿ ಭೂಮಿಯನ್ನು ಖರೀದಿಸಿದೆ. ಚೀನಾದಿಂದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವುದಾಗಿ ತೈವಾನ್‌ ಮೂಲದ ಫಾಕ್ಸ್‌ಕಾನ್‌ ತಿಳಿಸಿದೆ. ( iPhone production ) ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್‌ ದಿಗ್ಗಜ ಫಾಕ್ಸ್‌ಕಾನ್‌ (Foxconn), ಬೆಂಗಳೂರಿನ ದೇವನಹಳ್ಳಿಯಲ್ಲಿ 1.3 ಚದರ ಅಡಿ ( 13 million square foot) ಜಾಗವನ್ನು ಖರೀದಿಸಿದೆ.

ಇದನ್ನೂ ಓದಿ: Nothing Phone: ಐಫೋನ್ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಕಂಪನಿಯಿಂದ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ

ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಠಿಣ ಕೋವಿಡ್‌ ನಿಯಮಾವಳಿಗಳು ಜಾರಿಯಾಗಿರುವುದರಿಂದ ಹಾಗೂ ಚೀನಾ-ಅಮೆರಿಕ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆ್ಯಪಲ್‌ ಕಂಪನಿಯು ಚೀನಾದಿಂದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ. ಫಾಕ್ಸ್‌ಕಾನ್‌ ಕಂಪನಿಯು ಭೂಮಿ ಖರೀದಿಸುವ ಸಲುವಾಗಿ ತನ್ನ ಅಧೀನ ಸಂಸ್ಥೆಯಾಗಿರುವ ಫಾಕ್ಸ್‌ಕಾನ್‌ ಹೋನ್‌ ಹೈ ಟೆಕ್ನಾಲಜಿಗೆ (Foxconn Honn Hai Technology India) 303 ಕೋಟಿ ರೂ.ಗಳನ್ನು ನೀಡಿತ್ತು. ಫಾಕ್ಸ್‌ಕಾನ್‌ನ ಮತ್ತೊಂದು ಘಟಕ 480,000 ಚದರ ಮೀಟರ್‌ ಪ್ರದೇಶವನ್ನು ವಿಯೆಟ್ನಾಂನಲ್ಲಿ ಖರೀದಿಸುತ್ತಿದೆ.

Exit mobile version