ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors), ದೇಶದ ಅತ್ಯಂತ ಜನಪ್ರಿಯ ವ್ಯಾನ್ ಟಾಟಾ ಮ್ಯಾಜಿಕ್ (Tata Magic) ಅನ್ನು 4 ಲಕ್ಷ ಗ್ರಾಹಕರು ಖರೀದಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ (Magic Bi Fuel) ಅನ್ನು ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ವಿಶ್ವಾಸಾರ್ಹತೆ, ಕಾರ್ಯದಕ್ಷತೆ ಮತ್ತು ಕೈಗೆಟುಕುವ ದರಕ್ಕೆ ಹೆಸರುವಾಸಿಯಾಗಿರುವ ಟಾಟಾ ಮೋಟರ್ಸ್ ಅತ್ಯುತ್ತಮ ಸೇವೆಯನ್ನು ನೀಡುವ ಬದ್ಧತೆಯನ್ನು ಹೊಂದಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ. ಸ್ಲೀಕ್ ಡಿಸೈನ್, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಟಾಟಾ ಮ್ಯಾಜಿಕ್ ಕಳೆದ ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ಸಾಗಿದೆ.
ಇದನ್ನೂ ಓದಿ: Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!
ಇಕೋ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಚಾಲಕರಿಗೆ ಅನುಕೂಲದಾಯಕ ಅಂಶಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ವೈಶಿಷ್ಟ್ಯತೆಗಳನ್ನು ಈ ಟಾಟಾ ಮ್ಯಾಜಿಕ್ ಹೊಂದಿದೆ. ಇದಲ್ಲದೇ, ಕೈಗೆಟುಕುವ ದರದಲ್ಲಿ ಈ ವಾಹನ ಲಭ್ಯವಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಕ್ಕೆ ಸೂಕ್ತವಾದ ವಾಹನವಾಗಿರುವ ಟಾಟಾ ಮ್ಯಾಜಿಕ್, ಕಟ್ಟಕಡೆಯ ಮೈಲಿಯವರೆಗೆ ಸಾರಿಗೆ ಸೌಲಭ್ಯ ಒದಗಿಸುವ ವಾಹನವಾಗಿದೆ.
ಟಾಟಾ ಮ್ಯಾಜಿಕ್ –ಬೈ-ಫ್ಯುಯೆಲ್ ವಾಹನವು 694 ಸಿಸಿ ಎಂಜಿನ್ ಮತ್ತು 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಟ್ಯಾಂಕ್ ಹಾಗೂ 5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಒಂದು ಬಾರಿ ಸಿಎನ್‌ಜಿ ಟ್ಯಾಂಕ್ ತುಂಬಿಸಿದರೆ 380 ಕಿಲೋಮೀಟರ್‌ವರೆಗೆ ಸಾಗಬಹುದಾಗಿದೆ. ಸರಿಸಾಟಿಯಿಲ್ಲದ ಕಾರ್ಯದಕ್ಷತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚದಿಂದ ಕೂಡಿರುವ ಈ ಮ್ಯಾಜಿಕ್ ವಾಹನಕ್ಕೆ 2 ವರ್ಷಗಳ ಅಥವಾ 72,000 ಕಿಲೋಮೀಟರ್‌ಗಳ ವಾರಂಟಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: Leopard Attack: ನೂರಕ್ಕೂ ಹೆಚ್ಚು ಕುರಿಗಳ ಜತೆಯೇ ಎರಡು ಗಂಟೆ ಇದ್ದ ಚಿರತೆ!
ಈ ಕುರಿತು ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ವಿಭಾಗದ ಪ್ಯಾಸೆಂಜರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಆನಂದ್ ಎಸ್., ನಮ್ಮ ವಿನೂತನವಾದ ಮ್ಯಾಜಿಕ್ ಬ್ರ್ಯಾಂಡ್ ಅನ್ನು 4 ಲಕ್ಷ ಗ್ರಾಹಕರಿಗೆ ತಲುಪಿಸಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಮೈಲಿಗಲ್ಲು ಸ್ಥಾಪಿಸಿರುವ ಸವಿನೆನಪಿಗಾಗಿ ನಾವು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮ್ಯಾಜಿಕ್ ಬೈ-ಫ್ಯುಯೆಲ್ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದು ಪೆಟ್ರೋಲ್‌ನೊಂದಿಗೆ ಸಿಎನ್‌ಜಿ ಚಾಲಿತ ವಾಹನವಾಗಿದೆ. ಸಾರಿಗೆ ಅಗತ್ಯತೆಗಳನ್ನು ಪೂರೈಸುವುದು ಮತ್ತು ನಮ್ಮ ಗ್ರಾಹಕರ ಲಾಭದ ಪ್ರಮಾಣ ಹಾಗೂ ಅನುಕೂಲವನ್ನು ಸುಧಾರಣೆ ಮಾಡುವುದಕ್ಕೆ ಪೂರಕವಾಗಿ ಈ ಹೊಸ ಶ್ರೇಣಿಯ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.