Site icon Vistara News

Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ

Tata Motors launched two programs Vidyadhana and Utkarsha to facilitate higher education of technician children

ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ಸಂಸ್ಥೆಯು (Tata Motors) ಪುಣೆ, ಲಕ್ನೋ, ಜಮ್‌ಶೆಡ್‌ಪುರ, ಧಾರವಾಡ, ಸನಂದ್ ಮತ್ತು ಪಂತ್ ನಗರ ಸೇರಿದಂತೆ ಭಾರತದಾದ್ಯಂತ ಇರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ತಂತ್ರಜ್ಞರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ‘ವಿದ್ಯಾಧನ’ ಮತ್ತು ‘ಉತ್ಕರ್ಷ’ ಎಂಬ ಎರಡು ವಿಶೇಷ ಧನಸಹಾಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದಾಗಿ ಇಂದು ಘೋಷಿಸಿದೆ. ಈ ಮೂಲಕ ಕಂಪನಿಯು ಮಹತ್ವಾಕಾಂಕ್ಷೆ ಮತ್ತು ಅದನ್ನು ಸಾಧಿಸುವ ಪ್ರಕ್ರಿಯೆ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ʼವಿದ್ಯಾಧನʼ ಕಾರ್ಯಕ್ರಮದ ಅಡಿಯಲ್ಲಿ 10ನೇ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ರಿಯಾಯಿತಿ ದರದಲ್ಲಿ ಶಿಕ್ಷಣ ಸಾಲಗಳನ್ನು ಒದಗಿಸಲಾಗುತ್ತದೆ. ‘ಉತ್ಕರ್ಷ’ ಕಾರ್ಯಕ್ರಮದಲ್ಲಿ ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳಿಗೆ ಹೆಚ್ಚುವರಿ ವಾರ್ಷಿಕ ವಿದ್ಯಾರ್ಥಿವೇತನ ಪ್ರಯೋಜನ ನೀಡಲಾಗುತ್ತದೆ.

ವಿದ್ಯಾಧನ ಮತ್ತು ಉತ್ಕರ್ಷ ಕಾರ್ಯಕ್ರಮ ಆರಂಭವನ್ನು ಘೋಷಿಸಿದ ಟಾಟಾ ಮೋಟಾರ್ಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಓ) ಸೀತಾರಾಮ್ ಕಂಡಿ ಮಾತನಾಡಿ, “ಪ್ರಗತಿ ಮತ್ತು ಅಭಿವೃದ್ಧಿ ಸಾಧಿಸಲು ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ. ಈ ಕಾರ್ಯಕ್ರಮಗಳು ಸುಲಭವಾಗಿ ಉನ್ನತ ಶಿಕ್ಷಣ ಪಡೆಯುವಂತೆ ಮಾಡುತ್ತದೆ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಹಾದಿಯನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಆ.3ರಂದು ‘ಬೌದ್ಧ ಸಾಹಿತ್ಯ-ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣ

ನಮ್ಮ ಸಂಸ್ಥೆಯಲ್ಲಿ ಕಷ್ಟಪಟ್ಟು ದುಡಿಯುವ ತಂತ್ರಜ್ಞರ ಮಕ್ಕಳು ತಮ್ಮ ಸ್ವಂತ ಕನಸುಗಳನ್ನು ಮತ್ತು ಅವರ ಹೆತ್ತವರ ಕನಸುಗಳನ್ನು ಈ ಕಾರ್ಯಕ್ರಮಗಳ ಮುಖಾಂತರ ಈಡೇರಿಸಲಿದ್ದಾರೆ. ಇನ್ನು ನಮ್ಮ ತಂತ್ರಜ್ಞರ ಮಕ್ಕಳು 10 ಮತ್ತು 12 ನೇ ತರಗತಿ ನಂತರ ತಮ್ಮ ಆಯ್ಕೆಯ ಯಾವುದೇ ವಿಷಯದಲ್ಲಿ ಅಧ್ಯಯನ ಮಾಡಲು ಮುಂದಾಗಬಹುದು. ಪೋಷಕರು ಅದಕ್ಕೆ ಅಗತ್ಯವಿರುವ ಹಣಕಾಸಿನ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾದ ಅಗತ್ಯ ಇರುವುದಿಲ್ಲ. ಸೂಕ್ತ ರೀತಿಯ ಕ್ವಾಲಿಫಿಕೇಷನ್ ಮತ್ತು ಕೌಶಲ್ಯಗಳನ್ನು ಹೊಂದುವುದರ ಮೂಲಕ ಯಶಸ್ವಿಯಾಗಿ ವೃತ್ತಿ ರೂಪಿಸಲು ಮತ್ತು ಜೀವನವನ್ನು ನಿರ್ಮಿಸಲು ಅವರಿಗೆ ಈ ಕಾರ್ಯಕ್ರಮಗಳು ಉತ್ತಮ ಅವಕಾಶವಾಗಿದೆ” ಎಂದು ತಿಳಿಸಿದರು.

ವಿದ್ಯಾಧನ

‘ವಿದ್ಯಾಧನ’ ಎಂಬುದು ಶಿಕ್ಷಣ ಸಾಲ ಕಾರ್ಯಕ್ರಮವಾಗಿದ್ದು, ಅದು ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಪಡೆದು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಅರಿತುಕೊಳ್ಳಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅರ್ಹ ತಂತ್ರಜ್ಞರು ದೇಶೀಯ ಶಿಕ್ಷಣದ ಶುಲ್ಕದ 95% ವರೆಗೆ ಅಥವಾ ಅಂತಾರಾಷ್ಟ್ರೀಯ ಶಿಕ್ಷಣ ಶುಲ್ಕದ 85% ವರೆಗೆ ಕಟ್ಟುವ ಸಲುವಾಗಿ 7.5 ಲಕ್ಷ ರೂ.ವರೆಗೆ ಸಾಲವನ್ನು ಪಡೆಯಬಹುದು. ಈ ಶಿಕ್ಷಣ ಸಾಲಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಿಂದ ಒದಗಿಸಲಾಗುತ್ತದೆ ಮತ್ತು ಟಾಟಾ ಮೋಟಾರ್ಸ್ ಎಸ್‌ಬಿಐ ವಿಧಿಸುತ್ತಿರುವ ಬಡ್ಡಿದರದ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಹುಡುಗರಿಗೆ 50% ಕಡಿಮೆ ಬಡ್ಡಿದರ ಮತ್ತು ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳು 70% ಬಡ್ಡಿ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಯೋಜನ ಪಡೆಯಲು ವಿದ್ಯಾರ್ಥಿಯು ಕನಿಷ್ಠ 2 ವರ್ಷಗಳ ಅವಧಿಯುಳ್ಳ ಫುಲ್ ಟೈಮ್ ಪದವಿ ಕೋರ್ಸಿಗೆ ಅಥವಾ ಸ್ನಾತಕೋತ್ತರ ಕೋರ್ಸ್‌ಗೆ ದಾಖಲಾಗಿರಬೇಕು ಮತ್ತು ಆ ಸಂಸ್ಥೆಗಳು ಭಾರತ ಅಥವಾ ವಿದೇಶದಲ್ಲಿರುವ ಮಾನ್ಯತೆ ಪಡೆದ ಎಐಸಿಟಿಇ- ಸಮಾನ ಸಂಸ್ಥೆಗಳು ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜತೆ ಸಂಯೋಜಿತಗೊಂಡಿರಬೇಕು.

ಇದನ್ನೂ ಓದಿ: Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

ಉತ್ಕರ್ಷ ವಿದ್ಯಾರ್ಥಿವೇತನ

‘ಉತ್ಕರ್ಷʼ ಕಾರ್ಯಕ್ರಮವು 10ನೇ ಅಥವಾ 12ನೇ ತರಗತಿಯನ್ನು ಪೂರ್ಣಗೊಳಿಸಿದ ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಪ್ರತೀ ವರ್ಷ ರೂ.25,000/- ವಿದ್ಯಾರ್ಥಿವೇತನ ಒದಗಿಸುವ ಕಾರ್ಯಕ್ರಮವಾಗಿದೆ. ಇದಕ್ಕೆ ಅರ್ಹತೆ ಪಡೆಯಲು ಅರ್ಜಿದಾರರು ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು ಮತ್ತು ಭಾರತ ಅಥವಾ ವಿದೇಶದಲ್ಲಿರುವ ಮಾನ್ಯತೆ ಪಡೆದ ಎಐಸಿಟಿಇ- ಸಮಾನ ಸಂಸ್ಥೆಗಳು ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪಡೆದುಕೊಂಡಿರಬೇಕು.

Exit mobile version