ಮುಂಬಯಿ: ಏರ್ ಇಂಡಿಯಾದ ವಿಮಾನಗಳ (Air India) ಸಂಖ್ಯೆ ಮುಂಬರುವ ದಿನಗಳಲ್ಲಿ ಗಣನೀಯವಾಗಿ ಹೆಚ್ಚಲಿದೆ. ಟಾಟಾ ಗ್ರೂಪ್, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಒಟ್ಟು ೨೦೦ ಹೊಚ್ಚ ಹೊಸ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಇದರೊಂದಿಗೆ ಐತಿಹಾಸಿಕ ಬೃಹತ್ ಡೀಲ್‌ಗೆ ಟಾಟಾ ಸಜ್ಜಾಗಿದೆ.
ಏರ್ ಇಂಡಿಯಾವು ೬ ಬೋಯಿಂಗ್ ೭೭೭-೨೦೦ ವಿಮಾನ, ೨೫ ಏರ್‌ಬಸ್ ಎ೩೨೦ ನಿಯೋ ವಿಮಾನಗಳನ್ನು ೨೦೨೩ರ ಜನವರಿ-ಮಾರ್ಚ್ ಅವಧಿಯಲ್ಲಿ ಖರೀದಿಸಲಿದೆ. ಏರ್ ಬಸ್ ಎ೩೫೦ ದೊಡ್ಡ ಇಂಧನ ಟ್ಯಾಂಕ್ ಹೊಂದಿದ್ದು, ಭಾರತ- ಅಮೆರಿಕ ಮೊದಲಾದ ಸುದೀರ್ಘ ಸಂಚಾರಕ್ಕೆ ಅನುಕೂಲಕರವಾಗಲಿದೆ.
ಟಾಟಾ ಗ್ರೂಪ್ ಜನವರಿ ೨೭ರಂದು ಏರ್ ಇಂಡಿಯಾದ ನಿಯಂತ್ರಣವನ್ನು ತೆಗೆದುಕೊಂಡಿತ್ತು. 78ನೇ ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ಸಮಾವೇಶದ ನೇಪಥ್ಯದಲ್ಲಿ, ಏರ್ ಇಂಡಿಯಾ ೨೦೦ ಹೊಸ ವಿಮಾನಗಳನ್ನು ಖರೀದಿಸಲು ಮಾತುಕತೆ ಅಂತಿಮಪಡಿಸುತ್ತಿರುವ ಬಗ್ಗೆ ಮೂಲಗಳು ತಿಳಿಸಿವೆ.