Site icon Vistara News

Tata projects | ಟಾಟಾ ಪ್ರಾಜೆಕ್ಟ್ಸ್‌ನಿಂದ 400 ಹೊಸಬರ ನೇಮಕ, ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ

tata projects

ನವ ದೆಹಲಿ: ಟಾಟಾ ಸಮೂಹದ ಎಂಜಿನಿಯರಿಂಗ್‌ ಮತ್ತು ನಿರ್ಮಾಣ ವಿಭಾಗದ ಟಾಟಾ ಪ್ರಾಜೆಕ್ಟ್ಸ್‌ (Tata projects)ಕಂಪನಿಯು 400 ಹೊಸಬರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ದೇಶದ ಪ್ರಮುಖ ಎಂಜಿನಿಯರಿಂಗ್‌ ಕಾಲೇಜುಗಳಿಂದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಂಪನಿಯು ನೀಡಲಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಟೆಕ್ನಾಲಜಿ (IIT), ನ್ಯಾಶನಲ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಟೆಕ್ನಾಲಜಿ (NIT) ಹಾಗೂ ಇತರ ಪ್ರಮುಖ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ನೇಮಕ ಮಾಡಿಕೊಳ್ಳಲಿದೆ.

2021-22ರಲ್ಲಿ ಕಂಪನಿ 250 ಪದವೀಧರರನ್ನು ನೇಮಕಾತಿ ಮಾಡಿಕೊಂಡಿತ್ತು. ಕಂಪನಿ ಒಟ್ಟು 5,700 ಉದ್ಯೋಗಿಗಳನ್ನು ಒಳಗೊಂಡಿದೆ.

Exit mobile version