Site icon Vistara News

TATA | ಟಾಟಾ ಸನ್ಸ್‌ ಅಧ್ಯಕ್ಷ, ಟಾಟಾ ಟ್ರಸ್ಟ್‌ ಅಧ್ಯಕ್ಷರಾಗುವಂತಿಲ್ಲ, ಮಿಸ್ತ್ರಿ ಪ್ರಕರಣ ಮರುಕಳಿಸದಿರಲು ಕ್ರಮ

ratan tata

ನವ ದೆಹಲಿ: ಟಾಟಾ ಸನ್ಸ್‌ ಹಾಗೂ ಟಾಟಾ ಸಮೂಹದ (TATA) ಅಧ್ಯಕ್ಷರು ಏಕಕಾಲದಲ್ಲಿ ಟಾಟಾ ಟ್ರಸ್ಟ್‌ ಅಧ್ಯಕ್ಷರೂ ಆಗುವಂತಿಲ್ಲ ಎಂದು ಸಮೂಹವು ತೀರ್ಮಾನಿಸಿದೆ. ಈ ಸಂಬಂಧ ಕಾನೂನಾತ್ಮಕ ವಿಭಜನೆಯನ್ನು ಟಾಟಾ ಸಮೂಹ ಇದೀಗ ಮಾಡಿಕೊಂಡಿದೆ.

ಟಾಟಾ ಸನ್ಸ್‌ ಮತ್ತು ಟಾಟಾ ಟ್ರಸ್ಟ್‌, ಟಾಟಾ ಸಮೂಹದಲ್ಲಿ ೬೬% ಷೇರುಗಳನ್ನು ಹೊಂದಿವೆ. ೨೦೧೨ರ ಬಳಿಕ ಟಾಟಾ ಸನ್ಸ್‌ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಮತ್ತು ಎನ್‌.ಚಂದ್ರಶೇಖರನ್‌ ಅವರು ಟಾಟಾ ಟ್ರಸ್ಟ್‌ ಅಧ್ಯಕ್ಷರೂ ಆಗಿರಲಿಲ್ಲ. ಆದರೆ ಈ ಪ್ರತ್ಯೇಕತೆಗೆ ಯಾವುದೇ ಕಾನೂನು ಚೌಕಟ್ಟು ಇರಲಿಲ್ಲ.

೨೦೧೨ರ ತನಕ ರತನ್‌ ಟಾಟಾ ಅವರು ಟಾಟಾ ಸನ್ಸ್‌ ಮತ್ತು ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿದ್ದರು. ಚಂದ್ರಶೇಖರನ್‌ ಅವರು ೨೦೧೭ರಲ್ಲಿ ಟಾಟಾ ಸನ್ಸ್‌ ಅಧ್ಯಕ್ಷರಾಗಿದ್ದರು. ಟಾಟಾ ಸಮೂಹ ತನ್ನ ಇತ್ತೀಚಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಈ ಕುರಿತ (Articles of association) ನಿಯಮಾವಳಿಗೆ ತಿದ್ದುಪಡಿ ಮಾಡಿದೆ. ಸಭೆಯಲ್ಲಿ ಅವಿರೋಧವಾಗಿ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

ಟಾಟಾ ಸನ್ಸ್‌ನಲ್ಲಿ ಟಾಟಾ ಟ್ರಸ್ಟ್‌ ೬೬% ಷೇರುಗಳನ್ನು ಹೊಂದಿದ್ದರೆ, ಸೈರಸ್‌ ಇನ್ವೆಸ್ಟ್‌ಮೆಂಟ್ಸ್‌ ಮತ್ತು ಸ್ಟರ್ಲಿಂಗ್‌ ಇನ್ವೆಸ್ಟ್‌ಮೆಂಟ್‌ ಕಾರ್ಪ್‌ ೧೮.೪% ಷೇರುಗಳನ್ನು ಒಳಗೊಂಡಿದೆ. ಸೈರಸ್‌ ಮಿಸ್ತ್ರಿ ಹಾಗೂ ಟಾಟಾ ಆಡಳಿತಮಂಡಳಿ ನಡುವೆ ಉಂಟಾಗಿದ್ದ ಬಿಕ್ಕಟ್ಟಿನ ಬಳಿಕ ಟಾಟಾ ಟ್ರಸ್ಟ್‌ ಮತ್ತು ಟಾಟಾ ಸನ್ಸ್‌ ಅಧ್ಯಕ್ಷರ ಹುದ್ದೆಗಳನ್ನು ಬೇರ್ಪಡಿಸುವ ಅಗತ್ಯ ತಲೆದೋರಿತ್ತು.

Exit mobile version