ಮುಂಬಯಿ: ಟಾಟಾ (TATA) ಸಮೂಹುವು ಕನಿಷ್ಠ 20 ಬ್ಯೂಟಿ ಟೆಕ್ ಸ್ಟೋರ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ಸ್ಟೋರ್‌ಗಳಲ್ಲಿ ವರ್ಚುವಲ್ ಮೇಕಪ್ ಕಿಯೋಸ್ಕ್‌ಗಳು ಇರಲಿವೆ. ಡಿಜಿಟಲ್ ಸ್ಕಿನ್ ಟೆಸ್ಟ್ ಸೌಲಭ್ಯ ಸಿಗಲಿದೆ. ಗ್ರಾಹಕರು ಪ್ರೀಮಿಯಂ ಕಾಸ್ಮೆಟಿಕ್ ಉತ್ಪನ್ನಗಳನ್ನು ಇಲ್ಲಿ ಪಡೆಯಬಹುದು.
2023ರ ಮಾರ್ಚ್ ವೇಳೆಗೆ ಟಾಟಾ ಬ್ಯೂಟಿ ಟೆಕ್ ಸ್ಟೋರ್‌ಗಳು ಆರಂಭವಾಗುವ ನಿರೀಕ್ಷೆ ಇದೆ. ಭಾರತದಲ್ಲಿ 18ರಿಂದ 45 ವರ್ಷ ವಯಸ್ಸಿನ ಯುವ ಜನತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡಲು ಟಾಟಾ ಯೋಜಿಸಿದೆ.
ಕಾರುಗಳಿಂದ ಜ್ಯುವೆಲ್ಲರಿ ತನಕ ನಾನಾ ವಲಯಗಳಲ್ಲಿ ಬಿಸಿನೆಸ್ ಮಾಡುತ್ತಿರುವ ಟಾಟಾ ಗ್ರೂಪ್ ಇದೀಗ ಸೌಂದರ್ಯವರ್ಧಕ ವಲಯದಲ್ಲಿ ಕೂಡ ಬ್ಯೂಟಿನಟೆಕ್ ಸ್ಟೋರ್ ಮೂಲಕ ವಹಿವಾಟು ವಿಸ್ತರಣೆಗೆ ಉದ್ದೇಶಿಸಿದೆ.