ಮುಂಬಯಿ: ಟಾಟಾ ಗ್ರೂಪ್‌ನ ಟಾಟಾ ಟೆಕ್ನಾಲಜೀಸ್ (Tata Technologies) ಐಪಿಒ ಮೂಲಕ ಷೇರು ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ. ಇದು ಪ್ರವರ್ತಕರಾದ ಟಾಟಾ ಮೋಟಾರ್ಸ್ ಮತ್ತು ಎರಡು ಇತರ ಹಾಲಿ ಷೇರುದಾರರ ಷೇರು ವಿಕ್ರಯವಾಗಿರುವುದರಿಂದ ಹೊಸ ಷೇರುಗಳ ಬಿಡುಗಡೆ ಇರುವುದಿಲ್ಲ.
ಟಾಟಾ ಮೋಟಾರ್ಸ್‌ನ ಅಧೀನದಲ್ಲಿರುವ ಟಾಟಾ ಟೆಕ್ನಾಲಜೀಸ್ ಮಾರ್ಚ್ 9ರಂದು ಐಪಿಒ ಸಂಬಂಧ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಕರಡು ಅರ್ಜಿಯನ್ನು ಸಲ್ಲಿಸಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಈ ಐಪಿಒದಲ್ಲಿ 95,708,984 ಈಕ್ವಿಟಿ ಷೇರುಗಳು ಮಾರಾಟಕ್ಕೆ ಸಿಗಲಿದೆ. ಪ್ರಸ್ತುತ ಟಾಟಾ ಮೋಟಾರ್ಸ್, ಟಾಟಾ ಟೆಕ್ನಾಲಜೀಸ್‌ನಲ್ಲಿ 74.42% ಷೇರುಗಳನ್ನು ಹೊಂದಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ಆಡಳಿತ ಮಂಡಳಿಯು ಟಾಟಾ ಟೆಕ್‌ನಿಂದ ಭಾಗಶಃ ಬಂಡವಾಳ ಹಿಂತೆಗೆತಕ್ಕೆ ಅನುಮೋದಿಸಿತ್ತು.