Site icon Vistara News

Tax Free Income: ತೆರಿಗೆ ಮುಕ್ತವಾಗಿರುವ ಆದಾಯ ಮೂಲಗಳಿವು; ಇದರ ಪ್ರಯೋಜನ ಪಡೆಯುವುದು ಹೇಗೆ?

Tax Free Income

ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರತಿ ವರ್ಷ ತಮ್ಮ ಆದಾಯದ (income) ಲೆಕ್ಕ ಪತ್ರಗಳನ್ನು ತೋರಿಸಬೇಕು. ಆದರೆ ಹೆಚ್ಚಿನವರಿಗೆ ಯಾವುದು ಆದಾಯ (Tax Free Income) ತೆರಿಗೆ (tax) ವ್ಯಾಪ್ತಿಯೊಳಗೆ ಬರುತ್ತದೆ, ಯಾವುದು ಬರುದಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಹೀಗಾಗಿ ಆದಾಯ ತೆರಿಗೆ ರಿಟರ್ನ್ (ITR) ಫೈಲ್ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಆದಾಯ ತೆರಿಗೆ ಮುಕ್ತ ವಿನಾಯಿತಿಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ಭಾರತದಲ್ಲಿ 1961 ರ ಆದಾಯ ತೆರಿಗೆ (ಐಟಿ) ಕಾಯಿದೆಯ ಅಡಿಯಲ್ಲಿ ಕೆಲವು ಆದಾಯ ಮೂಲಗಳು ತೆರಿಗೆಯಿಂದ ವಿನಾಯಿತಿ ಪಡೆದಿವೆ. ಈ ತೆರಿಗೆ ಮುಕ್ತ ಆದಾಯಗಳು ವ್ಯಕ್ತಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ ತೆರಿಗೆಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ವಿಶೇಷವಾಗಿ 2023- 24ರ ಹಣಕಾಸು ವರ್ಷದಿಂದ ಪರಿಚಯಿಸಲಾದ ಹೊಸ ತೆರಿಗೆ ಪದ್ಧತಿಯಲ್ಲಿ ಈ ವಿನಾಯಿತಿಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಈ ವಿನಾಯಿತಿಗಳನ್ನು ಅರ್ಥಮಾಡಿಕೊಳ್ಳುವುದರಿಂದ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಅವರ ತೆರಿಗೆ ಉಳಿತಾಯವನ್ನು ಮಾಡಲು ಸಹಾಯ ಮಾಡುತ್ತದೆ.

2024- 25ರಲ್ಲಿ ಭಾರತದಲ್ಲಿನ ವಿವಿಧ ತೆರಿಗೆ ಮುಕ್ತ ಆದಾಯ ಮೂಲಗಳ ವಿವರ ಇಲ್ಲಿದೆ.


ಕೃಷಿ ಆದಾಯ

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(1) ಅಡಿಯಲ್ಲಿ ಕೃಷಿ ಮತ್ತು ಕೃಷಿಯಿಂದ ಬರುವ ಆದಾಯವು ತೆರಿಗೆ ಮುಕ್ತವಾಗಿದೆ. ರೈತರ ಕಲ್ಯಾಣ ಮತ್ತು ಕೃಷಿ ಬೆಳವಣಿಗೆಯನ್ನು ಬೆಂಬಲಿಸಲು 1961ರಲ್ಲಿ ಕಾಯಿದೆಯ ಅನುಷ್ಠಾನದ ಅನಂತರ ಈ ವಿನಾಯಿತಿ ಜಾರಿಯಲ್ಲಿದೆ.

ಕೃಷಿ ಆದಾಯದಲ್ಲಿ ಹಣ್ಣು, ತರಕಾರಿ, ಬೇಳೆಕಾಳು, ಧಾನ್ಯಗಳು ಮತ್ತು ಮಸಾಲೆಗಳಂತಹ ಕೃಷಿ ಬೆಳೆಗಳ ಮಾರಾಟದಿಂದ ಆದಾಯ, ಕೃಷಿ ಭೂಮಿ ಅಥವಾ ಕಟ್ಟಡಗಳಿಂದ ಬಾಡಿಗೆ ಆದಾಯ, ಕೃಷಿ ಭೂಮಿ ಮಾರಾಟದಿಂದ ಲಾಭ ಸೇರಿದಂತೆ ನಿವ್ವಳ ಕೃಷಿ ಆದಾಯವು 5,000 ರೂ. ಮೀರಿದರೆ ಮತ್ತು ಕೃಷಿಯೇತರ ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರಿದರ ಮಾತ್ರ ತೆರಿಗೆಗಳು ಅನ್ವಯವಾಗುತ್ತದೆ.

ಉಡುಗೊರೆಗಳು

ಆದಾಯ ತೆರಿಗೆ ಕಾಯಿದೆ ಸೆಕ್ಷನ್ 56ರ ಪ್ರಕಾರ ಸಂಬಂಧಿಕರು ಮದುವೆಯ ಸಂದರ್ಭದಲ್ಲಿ ಅಥವಾ ಉತ್ತರಾಧಿಕಾರಿಗಳಿಗೆ ನೀಡುವ ಉಯಿಲು ಇದರಲ್ಲಿ ಸ್ಥಳೀಯ ಅಧಿಕಾರ, ಟ್ರಸ್ಟ್‌, ಶಿಕ್ಷಣ, ವೈದ್ಯಕೀಯ ಸಂಸ್ಥೆಗಳ ಉಡುಗೊರೆಗಳು ತೆರಿಗೆ ಮುಕ್ತವಾಗಿರುತ್ತವೆ. ಇದು ಹಣ, ಆಸ್ತಿ, ಆಭರಣ, ಕಲೆ, ಡಿಜಿಟಲ್ ಸ್ವತ್ತುಗಳನ್ನು ಒಳಗೊಂಡಿರುತ್ತದೆ. ಸಂಬಂಧಿಗಳಲ್ಲದವರ ಉಡುಗೊರೆಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 50,000 ರೂ. ವರೆಗೆ ತೆರಿಗೆ ವಿನಾಯಿತಿ ಇದೆ.

ವಿದ್ಯಾರ್ಥಿ ವೇತನ ಮತ್ತು ಬಹುಮಾನಗಳು

ಖಾಸಗಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಒದಗಿಸಲಾದ ವಿದ್ಯಾರ್ಥಿ ವೇತನಗಳು ತೆರಿಗೆ-ಮುಕ್ತವಾಗಿರುತ್ತವೆ. ಸೆಕ್ಷನ್ 10 (17A) ಪ್ರಕಾರ, ಸರ್ಕಾರ ಅಥವಾ ಮಾನ್ಯತೆ ಪಡೆದ ಅಧಿಕಾರಿಗಳಿಂದ ಬರುವ ಪ್ರಶಸ್ತಿಗಳು ತೆರಿಗೆಯಿಂದ ವಿನಾಯಿತಿ ಪಡೆದಿವೆ. ಹೆಚ್ಚುವರಿಯಾಗಿ, ಪರಮ ವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರದಂತಹ ಶೌರ್ಯ ಪ್ರಶಸ್ತಿಗಳ ಪಿಂಚಣಿ ಸ್ವೀಕರಿಸುವವರು ತಮ್ಮ ಪಿಂಚಣಿಗಳ ಮೇಲಿನ ತೆರಿಗೆಯಿಂದ ವಿನಾಯಿತಿ ಪಡೆದಿದ್ದಾರೆ.

ಗ್ರಾಚ್ಯುಟಿ

ಸರ್ಕಾರಿ ನೌಕರರು ಪಡೆಯುವ ಗ್ರಾಚ್ಯುಟಿಯು ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಗ್ರಾಚ್ಯುಟಿ ಕಾಯಿದೆ 1972 ರ ಅಡಿಯಲ್ಲಿ ಸರ್ಕಾರೇತರ ಸಂಸ್ಥೆಗಳ ಉದ್ಯೋಗಿಗಳಿಗೆ ಗ್ರಾಚ್ಯುಟಿ 20 ಲಕ್ಷ ರೂ. ವರೆಗೆ ಕನಿಷ್ಠ ತೆರಿಗೆ ವಿನಾಯಿತಿ ಇದೆ. ಕಾಯಿದೆಯ ಅಡಿಯಲ್ಲಿ ಒಳಪಡದ ಸಂಸ್ಥೆಗಳಿಗೆ ಕನಿಷ್ಠ ವಿನಾಯಿತಿ ಮೊತ್ತವು ಗ್ರಾಚ್ಯುಟಿ 10 ಲಕ್ಷ ರೂ. ಗಳ ವರೆಗೆ ಇದೆ. ಸರ್ಕಾರಿ ನೌಕರರ ನಿವೃತ್ತಿ ಅಥವಾ ಮರಣದ ಗ್ರಾಚ್ಯುಟಿಗೆ ಸಂಪೂರ್ಣ ವಿನಾಯಿತಿ ಇದೆ.

ರಜೆ ವೇತನ

ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ನಿವೃತ್ತಿಯ ಅನಂತರ ಪಡೆಯುವ ರಜೆಯ ವೇತನಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಖಾಸಗಿ ವಲಯದ ಉದ್ಯೋಗಿಗಳಿಗೆ, ಯೂನಿಯನ್ ಬಜೆಟ್ 2023 ರ ಪ್ರಕಾರ ರಜೆ ಎನ್‌ಕ್ಯಾಶ್‌ಮೆಂಟ್‌ಗೆ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಹೆಚ್ ಯು ಎಫ್ ರಶೀದಿ

ಹಿಂದೂ ಅವಿಭಜಿತ ಕುಟುಂಬದ (ಹೆಚ್ ಯು ಎಫ್ ) ಸದಸ್ಯರು ಪಡೆದ ರಸೀದಿಗಳು ಐಟಿ ಕಾಯಿದೆಯಡಿಯಲ್ಲಿ ಹೆಚ್ ಯು ಎಫ್ ಅನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಿದ್ದರೆ ತೆರಿಗೆ ಮುಕ್ತವಾಗಿರುತ್ತದೆ. ಈ ವಿನಾಯಿತಿಯ ಪ್ರಯೋಜನ ಪಡೆಯಲು ಹೆಚ್ ಯುಎಫ್ ತನ್ನ ಸದಸ್ಯರಿಗೆ ಅಗತ್ಯವಾದ ತೆರಿಗೆಗಳನ್ನು ಪಾವತಿಸಿರಬೇಕು.

ಎಲ್ ಎಲ್ ಪಿ ಅಥವಾ ಪಾಲುದಾರಿಕೆ

ಆದಾಯ ತೆರಿಗೆಗಾಗಿ ಪ್ರತ್ಯೇಕವಾಗಿ ನಿರ್ಣಯಿಸಲಾದ ಎಲ್‌ಎಲ್‌ಪಿ ಅಥವಾ ಪಾಲುದಾರಿಕೆ ಸಂಸ್ಥೆಯ ಪಾಲುದಾರರು ತಮ್ಮ ಲಾಭದ ಪಾಲಿನ ತೆರಿಗೆಗಳಿಂದ ವಿನಾಯಿತಿ ಪಡೆದಿರುತ್ತಾರೆ. ಆದಾಗ್ಯೂ, ಸಂಬಳ ಅಥವಾ ಬಡ್ಡಿಯಂತಹ ಇತರ ರಸೀದಿಗಳು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತವೆ.

ಪಿಂಚಣಿ

ಕೆಲವು ಷರತ್ತುಗಳ ಅಡಿಯಲ್ಲಿ ಕಮ್ಯೂಟ್ ಮಾಡಿದಾಗ ಪಿಂಚಣಿ ಪಾವತಿಗಳನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಸರ್ಕಾರಿ ನೌಕರರಿಗೆ ಸಂಪೂರ್ಣ ವಿನಾಯಿತಿ ಇದೆ. ಇತರರಿಗೆ, ಅವರು ಗ್ರಾಚ್ಯುಟಿಯನ್ನು ಸ್ವೀಕರಿಸುತ್ತಾರೆಯೇ ಎಂಬುದರ ಆಧಾರದ ಮೇಲೆ ವಿನಾಯಿತಿ ಮೊತ್ತವು ಬದಲಾಗುತ್ತದೆ. ವಿಶ್ವಸಂಸ್ಥೆಯಂತಹ ಸಂಸ್ಥೆಗಳ ಪಿಂಚಣಿಗಳು ತೆರಿಗೆ ಮುಕ್ತವಾಗಿವೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಸದಸ್ಯರ ಅವಲಂಬಿತರು ಪಡೆಯುವ ಕುಟುಂಬ ಪಿಂಚಣಿಗಳು ಸಹ ತೆರಿಗೆ ಮುಕ್ತವಾಗಿವೆ.


ಭವಿಷ್ಯ ನಿಧಿಯಿಂದ ಆದಾಯ

ಸರ್ಕಾರಿ ನೌಕರರು ಶಾಸನಬದ್ಧ ಭವಿಷ್ಯ ನಿಧಿಯಿಂದ ಪಡೆದ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ಮಾನ್ಯತೆ ಪಡೆದ ಭವಿಷ್ಯ ನಿಧಿಯಿಂದ ಖಾಸಗಿ ಉದ್ಯೋಗಿಗಳು ಐದು ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದರೆ ಅವರ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿನ ಠೇವಣಿ ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಜೀವ ವಿಮಾ ಪಾಲಿಸಿಯಿಂದ ಮೆಚ್ಯೂರಿಟಿ ಮೊತ್ತ

ಸೆಕ್ಷನ್ 10(10D) ಅಡಿಯಲ್ಲಿ 2012ರ ಏಪ್ರಿಲ್ 1ರ ಅನಂತರ ನೀಡಲಾದ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂ ಮೊತ್ತದ ವಿಮಾ ಮೊತ್ತದ ಶೇಕಡಾ 10 ರಷ್ಟು ಮತ್ತು ಮೊದಲು ನೀಡಲಾದ ಪಾಲಿಸಿಗಳಿಗೆ ಶೇ. 20ರಷ್ಟನ್ನು ಮೀರದಿದ್ದರೆ ಜೀವ ವಿಮಾ ಪಾಲಿಸಿ ಮೆಚ್ಯೂರಿಟಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.

ಇದನ್ನೂ ಓದಿ: Anant Radhika Wedding: ಅನಂತ್ ಅಂಬಾನಿ ಮದುವೆ ಊಟಕ್ಕೆ 2500 ಬಗೆಯ ಖಾದ್ಯಗಳು! ಏನ್ ತಿಂದ್ರೋ ಏನ್ ಬಿಟ್ರೋ!

ಬಡ್ಡಿ ಆದಾಯ

ಕೆಲವು ಬಡ್ಡಿ ಆದಾಯಗಳಿಗೆ ಸೆಕ್ಷನ್ 10(15) ಅಡಿಯಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಅವುಗಳೆಂದರೆ ಸುಕನ್ಯಾ ಸಮೃದ್ಧಿ ಯೋಜನೆ, ಚಿನ್ನದ ಠೇವಣಿ ಬಾಂಡ್‌ಗಳ ಮೇಲಿನ ಬಡ್ಡಿ, ಸ್ಥಳೀಯ ಪ್ರಾಧಿಕಾರದ ಬಾಂಡ್‌ಗಳ ಮೇಲಿನ ಬಡ್ಡಿ, ಭೋಪಾಲ್ ಗ್ಯಾಸ್ ಸಂತ್ರಸ್ತರ ಠೇವಣಿಗಳಿಗೆ ಬಡ್ಡಿ, ತೆರಿಗೆ-ಮುಕ್ತ ಮೂಲಸೌಕರ್ಯ ಬಾಂಡ್‌ಗಳಿಂದ ಬಡ್ಡಿ, ಎರವಲು ಪಡೆದ ಹಣಕ್ಕೆ ಸ್ಥಳೀಯ ಅಧಿಕಾರಿಗಳು ಅಥವಾ ಸರ್ಕಾರದಿಂದ ಪಾವತಿಸಿದ ಬಡ್ಡಿ, ವಾರ್ಷಿಕವಾಗಿ 2.5 ಲಕ್ಷ ರೂ. ಗಿಂತ ಕಡಿಮೆ ಇಪಿಎಫ್ ಮತ್ತು ಪಿಪಿಎಫ್ ಕೊಡುಗೆಗಳ ಮೇಲಿನ ಬಡ್ಡಿ, ಎನ್ ಆರ್ ಇ ಖಾತೆಗಳಿಂದ ಬಡ್ಡಿ, ತೆರಿಗೆ-ಮುಕ್ತ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಇದರಲ್ಲಿ ಒಳಪಟ್ಟಿರುತ್ತದೆ.

Exit mobile version