Site icon Vistara News

Tax saving fixed deposit : ತೆರಿಗೆ ಉಳಿಸಿಕೊಡುವ ಬ್ಯಾಂಕ್‌ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ ಯಾವುದು?

Money Guide, If you want more return on bank FD and then use Bank FD laddering

ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಅನೇಕ ಮಂದಿ ನಿಶ್ಚಿತ ಠೇವಣಿಗಳು ಅಥವಾ ಫಿಕ್ಸೆಡ್‌ ಡಿಪಾಸಿಟ್‌ ಮಾಡಿ ಹಣವನ್ನು ಉಳಿತಾಯ ಮಾಡುತ್ತಾರೆ. ಹಾಗೂ ಅದಕ್ಕೆ ಬಡ್ಡಿ ಸಿಗುತ್ತದೆ.( Tax saving fixed deposit ) ಆದರೆ ಒಂದು ಕಡೆ ಬಡ್ಡಿಯ ಜತೆಗೆ ಮತ್ತೊಂದು ಕಡೆ ತೆರಿಗೆಯನ್ನೂ ಉಳಿಸಿಕೊಡುವ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ ಕೂಡ ಲಭ್ಯವಿದೆ. ಹೀಗಾಗಿ ಒಂದೇ ಕಡೆ ನೀವು ಎರಡು ಲಾಭಗಳನ್ನು ಪಡೆಯಬಹುದು. ಇಂಥ ಠೇವಣಿ ಯೋಜನೆಗಳನ್ನು ಟ್ಯಾಕ್ಸ್‌ ಸೇವಿಂಗ್‌ ಫಿಕ್ಸೆಡ್‌ ಡೆಪಾಸಿಟ್‌ಗಳೆಂದು ಕರೆಯುತ್ತಾರೆ. ಈಗ ಇದರ ವಿವರಗಳನ್ನು ತಿಳಿಯೋಣ.

ಟ್ಯಾಕ್ಸ್-ಸೇವಿಂಗ್‌ ಫಿಕ್ಸೆಡ್‌ ಡೆಪಾಸಿಟ್‌ಗಳು ರೆಗ್ಯುಲರ್‌ ಫಿಕ್ಸೆಡ್‌ ಡೆಪಾಸಿಟ್‌ಗಳಂತೆ ಇರುತ್ತವೆ. ಆದರೆ ಐದು ವರ್ಷಗಳ ಲಾಕ್‌ ಇನ್‌ ಅವಧಿಯನ್ನು ಒಳಗೊಂಡಿರುತ್ತವೆ. ಭಾರತೀಯ ನಾಗರಿಕರು ಇದರಲ್ಲಿ ಹೂಡಿಕೆ ಮಾಡಬಹುದು. ಇಲ್ಲೂ ಬಡ್ಡಿ ಆದಾಯದ ಮೇಲೆ ತೆರಿಗೆ ಇರುತ್ತದೆ. ಹೀಗಿದ್ದರೂ, ಇವುಗಳಲ್ಲಿ ವಾರ್ಷಿಕ 1.5 ಲಕ್ಷ ರೂ. ತನಕದ ಹೂಡಿಕೆಗೆ ತೆರಿಗೆ ಕಡಿತದ ಅನುಕೂಲ ಸಿಗುತ್ತದೆ. ಈ ಯೋಜನೆಯ ಮುಖ್ಯಾಂಶಗಳು ಇಂತಿವೆ:

ಟ್ಯಾಕ್ಸ್‌ ಸೇವಿಂಗ್‌ ಫಿಕ್ಸೆಡ್‌ ಡೆಪಾಸಿಟ್‌ಗಳು 5 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಒಳಗೊಂಡಿವೆ. ಕನಿಷ್ಠ ಹೂಡಿಕೆ 100 ರೂ.ಗಳಾಗಿದೆ. ಗರಿಷ್ಠ ಹೂಡಿಕೆ ವಾರ್ಷಿಕ 1.5 ಲಕ್ಷ ರೂ. ವರ್ಷಕ್ಕೆ 1.5 ಲಕ್ಷ ರೂ. ಹೂಡಿಕೆಗೆ ತೆರಿಗೆ ಉಳಿತಾಯ ಮಾಡಬಹುದು. ಅವಧಿಗೆ ಮುನ್ನ ವಿತ್‌ ಡ್ರಾವಲ್‌ಗೆ ಅನುಮತಿ ಇರುವುದಿಲ್ಲ. ಒಂದೇ ಸಲ ಇಡಿಯಾಗಿ ಹೂಡಿಕೆಗೆ ಅನುಮತಿ ಇದೆ. ಖಾತೆಯ ಮೇಲೆ ಸಾಲ ಸಿಗುವುದಿಲ್ಲ. ಬಡ್ಡಿಗೆ ತೆರಿಗೆ ಅನ್ವಯ. ಪ್ಯಾನ್‌ ವಿವರ ನೀಡದಿದ್ದರೆ 20% ಟಿಡಿಎಸ್.‌ ನೀಡಿದರೆ 10%. ವರ್ಷ ಪೂರ್ತಿ ಯಾವಾಗ ಬೇಕಾದರೂ ಇವುಗಳಲ್ಲಿ ಇನ್ವೆಸ್ಟ್‌ ಮಾಡಬಹುದು. ಮಾಸಿಕ, ತ್ರೈಮಾಸಿಕ ಆಧಾರದಲ್ಲಿ ಬಡ್ಡಿ ವಿತರಿಸುತ್ತಾರೆ. ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ದರ ಸಿಗುತ್ತದೆ. ಟ್ಯಾಕ್ಸ್‌ ಸೇವಿಂಗ್‌ ಎಫ್‌ ಡಿಗಳು ಮ್ಯೂಚುವಲ್‌ ಫಂಡ್‌ ಯೋಜನೆಗೆ ಹೋಲಿಸಿದರೆ ಹೆಚ್ಚು ಆದಾಯ ನೀಡದು. ಆದರೆ ಹೂಡಿಕೆಗೆ ಸುರಕ್ಷತೆ ಹೆಚ್ಚು. ಬಹುತೇಕ ಎಲ್ಲ ಸಾರ್ವಜನಿಕ-ಖಾಸಗಿ ಬ್ಯಾಂಕ್‌ ಗಳಲ್ಲಿ ಇವು ಸಿಗುತ್ತವೆ. ಸಹಕಾರ ಬ್ಯಾಂಕ್‌ಗಳಲ್ಲಿ ವಿತರಣೆಯಾಗುವುದಿಲ್ಲ. ಜಂಟಿ ಖಾತೆಯಲ್ಲೂ ಟ್ಯಾಕ್ಸ್‌ ಸೇವಿಂಗ್‌ ಎಫ್‌ ಡಿ ಠೇವಣಿ ಇಡಬಹುದು. ಟ್ಯಾಕ್ಸ್‌ ಸೇವಿಂಗ್‌ ಎಫ್‌ಡಿ ಖಾತೆ ತೆರೆಯಲು ಬೇಕಾಗುವ ದಾಖಲೆಗಳು: ಪ್ಯಾನ್‌ ಕಾರ್ಡ್‌, ಸರ್ಕಾರಿ ಮಾನ್ಯತೆ ಪಡೆದ ಐಡಿ ಪ್ರೂಫ್-‌ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ರೇಶನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು.

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಎಸ್‌ಬಿಐ ಟ್ಯಾಕ್ಸ್‌ ಸೇವಿಂಗ್‌ ಎಫ್‌ಡಿಯನ್ನು ಆಫರ್‌ ಮಾಡುತ್ತದೆ. ಇದರದಲ್ಲಿ ಸಾಮಾನ್ಯ ನಾಗರಿಕರಿಗೆ ವಾರ್ಷಿಕ 6.50% ಬಡ್ಡಿ ದರ ಇದೆ. ಹಿರಿಯ ನಾಗರಿಕರಿಗೆ 7.50% ಬಡ್ಡಿ ದರ ಇದೆ.

Exit mobile version