ನವ ದೆಹಲಿ: ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಸೋಮವಾರ ತನ್ನ ಪ್ರತಿ ಷೇರಿಗೆ 75 ರೂ.ಗಳ ಡಿವಿಡೆಂಡ್ (TCS Dividend) ಘೋಷಿಸಿದೆ.
ಪ್ರತಿ ಷೇರಿಗೆ 8 ರೂ. ಡಿವಿಡೆಂಡ್ ಜತೆಗೆ 67 ರೂ. ವಿಶೇಷ ಡಿವಿಡೆಂಡ್ ಅನ್ನೂ 2022-23ರ ಸಾಲಿಗೆ ಘೋಷಿಸಿದೆ. 2023ರ ಜನವರಿ 17ರಂದು ಡಿವಿಡೆಂಡ್ ವಿತರಣೆಯಾಗಲಿದೆ.
ಕಳೆದ ಒಂದು ವರ್ಷದಲ್ಲಿ ಕಂಪನಿ ಪ್ರತಿ ಷೇರಿಗೆ 45 ರೂ. ಡಿವಿಡೆಂಡ್ ಪ್ರಕಟಿಸಿತ್ತು. ಜನವರಿ 18ರಂದು ಕಂಪನಿಯ ಷೇರು ದರ 4,045 ರೂ.ಗೆ ಜಿಗಿದಿತ್ತು. 52 ವಾರಗಳಲ್ಲಿನ ಗರಿಷ್ಠ ಮಟ್ಟ ದಾಖಲಿಸಿತ್ತು. ಸೋಮವಾರ ಟಿಸಿಎಸ್ ಷೇರು ದರ 3,319 ರೂ.ಗಳಾಗಿತ್ತು.
10,846 ಕೋಟಿ ರೂ. ತ್ರೈಮಾಸಿಕ ಲಾಭ: ಟಿಸಿಎಸ್ ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 10,846 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 10% ಏರಿಕೆ ದಾಖಲಿಸಿದೆ. ವರ್ಸದ ಹಿಂದೆ ಇದೇ ಅವಧಿಯಲ್ಲಿ 9806 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ 58,229 ಕೋಟಿ ರೂ. ಆದಾಯ ಪಡೆದಿತ್ತು. 11% ಹೆಚ್ಚಳವಾಗಿದೆ. ಹೀಗಿದ್ದರೂ, ಆದಾಯ ನಿರೀಕ್ಷೆಗಿಂತ ಕಡಿಮೆಯಾಗಿದೆ.