Site icon Vistara News

TCS mass resignation : ಟಿಸಿಎಸ್‌ನಲ್ಲಿ ಮಹಿಳಾ ಟೆಕ್ಕಿಗಳ ಸಾಮೂಹಿಕ ರಾಜೀನಾಮೆ‌, ಕಾರಣವೇನು?

TCS Company

IT company TCS fires 16 employees, bars 6 vendors In Hiring Scam

ನವ ದೆಹಲಿ: ಭಾರತದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (Tata Consultancy Service-TCS) ತನ್ನ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಮುಗಿಸಿ ಕಚೇರಿಗೆ ಮರಳುವಂತೆ ಸೂಚಿಸಿದೆ. ಈ ನಡುವೆ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆಯ ಪ್ರವೃತ್ತಿಯೂ ಹೆಚ್ಚುತ್ತಿದೆ. ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಯನ್ನು ಅಂತ್ಯಗೊಳಿಸಿರುವುದೇ ಇದಕ್ಕೆ ಕಾರಣ.

ಈ ಹಿಂದೆ ಟಿಸಿಎಸ್‌ ಕಂಪನಿಯಲ್ಲಿ ಲಿಂಗ ಸಮಾನತೆ ತರಲು ಮಹಿಳೆಯರಿಗೂ ಹೆಚ್ಚಿನ ಉದ್ಯೋಗಾವಕಾಶ ನೀಡಿತ್ತು. 6 ಲಕ್ಷ ಉದ್ಯೋಗಿಗಳಲ್ಲಿ 35% ಮಹಿಳೆಯರಿದ್ದಾರೆ. ಉನ್ನತ ಮಟ್ಟದ ಹುದ್ದೆಗಳಲ್ಲಿ ಕೂಡ ಸಾಕಷ್ಟು ಗಮನಾರ್ಹ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಆದರೆ ಟಿಸಿಎಸ್‌ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್‌ ಲಕ್ಕಡ್‌ ಪ್ರಕಾರ ಕಂಪನಿಯು ವರ್ಕ್‌ ಫ್ರಮ್‌ ಹೋಮ್‌ ಪದ್ಧತಿ ಅಂತ್ಯಗೊಳಿಸಿದ ಬಳಿಕ ಮಹಿಳಾ ಉದ್ಯೋಗಿಗಳ ರಾಜೀನಾಮೆ ಹೆಚ್ಚಿದೆ. ಸಾಮಾನ್ಯವಾಗಿ ಟಿಸಿಎಸ್‌ನಲ್ಲಿ ಮಹಿಳೆಯರು ಉದ್ಯೋಗ ಬಿಟ್ಟು ಹೋಗುವುದು ಕಡಿಮೆ. ಇಲ್ಲಿ ಅವರಿಗೆ ಯಾವುದೇ ತಾರತಮ್ಯ ಇರುವುದಿಲ್ಲ. ಆದರೆ ವರ್ಕ್‌ ಫ್ರಮ್‌ ಹೋಮ್‌ ಕೊನೆಯಾದ ಬಳಿಕ ಮಹಿಳೆಯರ ರಾಜೀನಾಮೆ ಹೆಚ್ಚಿದೆ ಎಂದು ಮಿಲಿಂದ್‌ ಲಕ್ಕಡ್‌ ಹೇಳಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸೋಮವಾರ ಗೂಗಲ್ ಕ್ಲೌಡ್‌ನೊಂದಿಗೆ (Google Cloud) ವಿಸ್ತೃತ ಪಾಲುದಾರಿಕೆಯನ್ನು ಘೋಷಿಸಿದ್ದು, ಟಿಸಿಎಸ್ ಜನರೇಟಿವ್ ಎಐ (Generative AI) ಆರಂಭಿಸಿದೆ. ಇದು ಗೂಗಲ್ ಕ್ಲೌಡ್‌ನ ಉತ್ಪಾದಕ ಎಐ ಸೇವೆಗಳನ್ನು ನಿಯಂತ್ರಿಸಲಿದೆ ಮತ್ತು ಕಸ್ಟಮ್-ಟೈಲರ್ಡ್ ವ್ಯಾಪಾರ ಪರಿಹಾರಗಳನ್ನು ಒದಗಿಸಲಿದೆ. ಅನೇಕ ಕ್ಷೇತ್ರ ಮತ್ತು ಹೂಡಿಕೆಗಳಲ್ಲಿ ತನ್ನ ಡೊಮೇನ್ ನಾಲ್ಡೆಜ್ ನಿರ್ಮಿಸುವ ಮೂಲಕ ಟಿಸಿಎಸ್, ಕೃತಕ ಬುದ್ಧಿಮತ್ತೆ ಚಾಲಿತ ಪರಿಹಾರಗಳು ಮತ್ತು ಎಐಒಪಿಎಸ್, ಆಲ್ಗೋ ರಿಟೇಲ್, ಸ್ಮಾರ್ಟ್ ಉತ್ಪಾದನೆ, ಡಿಜಿಟಲ್ ಟ್ವಿನ್ಸ್ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ಬೌದ್ಧಿಕ ಆಸ್ತಿಯ ದೊಡ್ಡ ಪೋರ್ಟ್ಫೋಲಿಯೊವನ್ನು ಅಭಿವೃದ್ಧಿಪಡಿಸಿದೆ.‌

ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (TaTa Consultancy Services) ಚಾಟ್‌ಜಿಪಿಟಿ ಮಾದರಿಯಲ್ಲಿ (ChatGPT) ತನ್ನದೇ ಆದ ಕೃತಕಬುದ್ದಿಮತ್ತೆಯ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ. ಚಾಟ್‌ಜಿಪಿಟಿಯನ್ನು ಓಪನ್‌ ಎಐ (OpenAI) ತಯಾರಿಸಿದೆ. ಎಂಟರ್‌ಪ್ರೈಸ್‌ ಕೋಡ್‌ ಸೃಷ್ಟಿಗೆ (enterprise code ) ಟಿಸಿಎಸ್‌ ಸೃಷ್ಟಿಸುವ ಎಐ ಸಾಫ್ಟ್‌ವೇರ್‌ ಬಳಕೆಯಾಗಲಿದೆ (artificial intelligence) ಎಂದು ಕಂಪನಿಯ ಚೀಫ್‌ ಆಪರೇಟಿಂಗ್‌ ಆಫೀಸರ್‌ ಎನ್.ಗಣಪತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

ಟಿಸಿಎಸ್‌ನ ಪ್ರಾಜೆಕ್ಟ್‌ ಆರಂಭಿಕ ಹಂತದಲ್ಲಿದ್ದು, ಆಂತರಿಕ ಕೋಡ್‌, ಡೇಟಾ ಮತ್ತು ರಿಸೋರ್ಸ್‌ ವಿಭಾಗ ಈ ಬಗ್ಗೆ ಸಕ್ರಿಯವಾಗಿದೆ. ಟಿಸಿಎಸ್‌ ಕಳೆದ ಹಲವಾರು ವರ್ಷಗಳಿಂದಲೂ ಕೋಡ್‌, ಡೇಟಾ ಅನುಭವವನ್ನು ಹೊಂದಿದೆ. ಈ ಎಲ್ಲ ಜ್ಞಾನವನ್ನು ಬಳಸಿಕೊಳ್ಳಲಾಗುವುದು. ಭವಿಷ್ಯದಲ್ಲಿ ಕಂಪನಿಯು ತನ್ನ ಗ್ರಾಹಕರ ಪ್ರಾಜೆಕ್ಟ್‌ಗಳನ್ನು ವಹಿಸುವ ಸಂದರ್ಭದಲ್ಲಿ ತನ್ನದೇ ಎಐ ಸಲ್ಯೂಷನ್ಸ್‌ ಅನ್ನು ಬಳಸುವುದು ಉತ್ತಮ. ಇದಕ್ಕಾಗಿ ಹಲವಾರು ಇತರ ಪೂರೈಕೆದಾರರ ಅವಲಂಬನೆ ಒಳ್ಳೆಯದಲ್ಲ ಎಂದು ಸಿಒಒ ಎನ್‌ ಗಣಪತಿ ಹೇಳಿದ್ದಾರೆ.

ಇದನ್ನೂ ಓದಿ: TCS: ಗೂಗಲ್‌ ಕ್ಲೌಡ್ ಜತೆಗೂಡಿ ಜನೆರೇಟಿವ್ ಎಐ ಆರಂಭಿಸಿದ ಟಿಸಿಎಸ್

Exit mobile version