ಮುಂಬಯಿ: ಟಾಟಾ ಸಮೂಹದ ಐಟಿ ದಿಗ್ಗಜ ಕಂಪನಿಯಾದ ಟಿಸಿಎಸ್, ( TCS ) ತನ್ನ ೬ ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕಳೆದ ಏಪ್ರಿಲ್-ಜೂನ್ ಅವಧಿಯ ೧೦೦% ವೆರಿಯೆಬಲ್ ಪೇಯನ್ನು ವಿತರಿಸುವುದಾಗಿ ಮಂಗಳವಾರ ತಿಳಿಸಿದೆ. ಟಿಸಿಎಸ್‌ನಲ್ಲಿ ಕೆಲ ಉದ್ಯೋಗಿಗಳಿಗೆ ವೆರಿಯೆಬಲ್ ಪೇ ವಿತರಣೆಯಲ್ಲಿ ವಿಳಂಬವಾಗಲಿದೆ ಎಂಬ ವರದಿಗಳನ್ನು ಕಂಪನಿ ನಿರಾಕರಿಸಿದೆ.
ಅಸಿಸ್ಟೆಂಟ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್, ಕನ್ಸಲ್ಟೆಂಟ್ ಮಟ್ಟದ ಸಿಬ್ಬಂದಿಗೆ ವೆರಿಯೆಬಲ್ ಪೇ ವಿತರಣೆಯಲ್ಲಿ ೧ ತಿಂಗಳಿನ ಕಾಲ ವಿಳಂಬವಾಗಲಿದೆ ಎಂದು ವರದಿಯಾಗಿತ್ತು. ಇನ್ಫೋಸಿಸ್ ಮತ್ತು ವಿಪ್ರೊದಲ್ಲಿ ವೆರಿಯೆಬಲ್ ಪೇ ವಿತರಣೆಯಲ್ಲಿ ವಿಳಂಬವಾಗಲಿದೆ. ಲಾಭಾಂಶದ ಮೇಲೆ ಒತ್ತಡ ಉಂಟಾಗಿರುವುದು ಇದಕ್ಕೆ ಕಾರಣ.
ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ವೆರಿಯೆಬಲ್ ಪೇ ವಿತರಣೆಯಲ್ಲು ೭೦%ಕ್ಕೆ ಕಡಿತಗೊಳಿಸಿದೆ. ವಿಪ್ರೊ ಕೂಡ ಮ್ಯಾನೇಜರ್‌ನಿಂದ ಸಿ-ಸೂಟ್ ಮಟ್ಟದ ಉದ್ಯೋಗಿಗಳಿಗೆ ವೆರಿಯೆಬಲ್ ಪೇ ನೀಡದಿರಲು ನಿರ್ಧರಿಸಿದೆ.
ಇದನ್ನೂ ಓದಿ: IT Jobs | ವಿಪ್ರೊದಲ್ಲಿ ಸಂಬಳದ ಪ್ಯಾಕೇಜ್‌ಗೆ ಬಿತ್ತು ಕತ್ತರಿ, ಐಟಿ ಕಂಪನಿಗಳ ಲಾಭ ಇಳಿಕೆ?