Site icon Vistara News

TCS ತ್ರೈಮಾಸಿಕ ಲಾಭ 9,478 ರೂ, ಉದ್ಯೋಗಿಗಳ ಸಂಖ್ಯೆ 6 ಲಕ್ಷಕ್ಕೆ ಏರಿಕೆ

tcs

ಮುಂಬಯಿ: ದೇಶದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್‌ ಶುಕ್ರವಾರ ತನ್ನ ಏಪ್ರಿಲ್-ಜೂನ್‌ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, 9478 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ೯೦೦೮ ಕೋಟಿ ರೂ. ನಿವ್ವಳ ಲಾಭ ಪಡೆದಿತ್ತು. ಅಂದರೆ ೫.೨೧% ಹೆಚ್ಚಳವಾಗಿದೆ.

ಟಿಸಿಎಸ್‌ ಇದೇ ಅವಧಿಯಲ್ಲಿ ೫೨,೭೫೮ ಕೋಟಿ ರೂ. ಆದಾಯ ಗಳಿಸಿದೆ. ಟಿಸಿಎಸ್‌ ಪ್ರತಿ ಷೇರಿಗೆ ೮ ರೂ. ಮಧ್ಯಂತರ ಡಿವಿಡೆಂಡ್‌ ಅನ್ನು ಪ್ರಕಟಿಸಿದೆ.

ಹೊಸ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವನ್ನು ಅತ್ಯುತ್ತಮ ಸಾಧನೆಯೊಂದಿಗೆ ಆರಂಭಿಸಿದ್ದೇವೆ. ಎಲ್ಲ ವಲಯಗಳಲ್ಲೂ ಕಂಪನಿಯ ವಹಿವಾಟು ವೃದ್ಧಿಸಿದೆ ಎಂದು ಸಿಇಒ ರಾಜೇಶ್‌ ಗೋಪಿನಾಥನ್‌ ತಿಳಿಸಿದ್ದಾರೆ.

ಉದ್ಯೋಗಿಗಳ ಸಂಖ್ಯೆ ೬ ಲಕ್ಷಕ್ಕೆ ಏರಿಕೆ

ಟಿಸಿಎಸ್‌ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ೧೪,೧೩೬ ಹೊಸ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಇದರೊಂದಿಗೆ ಒಟ್ಟು ಉದ್ಯೋಗಿಗಳ ಸಂಖ್ಯೆ ೬ ಲಕ್ಷಕ್ಕೆ ಏರಿಕೆಯಾಗಿದೆ (೬೦೬,೩೩೧) ಟಿಸಿಎಸ್‌ನಲ್ಲಿ ೧೫೩ ರಾಷ್ಟ್ರಗಳ ಉದ್ಯೋಗಿಗಳಿದ್ದಾರೆ. ಮಹಿಳೆಯರ ಸಂಖ್ಯೆ ೩೫.೫% ಆಗಿದೆ.

Exit mobile version