ನವ ದೆಹಲಿ: ಇ-ಕಾಮರ್ಸ್ ವಲಯದ ಇಬೇ ಕಂಪನಿಯಲ್ಲಿ 500 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಗೂಗಲ್, ಅಮೆಜಾನ್, ಮೆಟಾ, ಮೈಕ್ರೊಸಾಫ್ಟ್ ಮತ್ತು ಇತರ ಕಂಪನಿಗಳಲ್ಲಿ ಈಗಾಗಲೇ ಸಾಮೂಹಿಕ ಉದ್ಯೋಗ ಕಡಿತವನ್ನು ಘೋಷಿಸಲಾಗಿದೆ. ಇದೀಗ ಇಬೇ ಸರದಿ ಬಂದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಇಬೇ ಸಿಇಒ ಜ್ಯಾಮಿ ಲ್ಯಾನೋನ್ ತಿಳಿಸಿದ್ದಾರೆ. ಈ ಉದ್ಯೋಗ ಕಡಿತದಿಂದ ಇಬೇಗೆ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಉದ್ಯೋಗ ಕಡಿತದ ಘೋಷಣೆಯ ಬಳಿಕ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ದರ ಚೇತರಿಸಿತು. ಝೂಮ್ ಕಂಪನಿ ಇತ್ತೀಚೆಗೆ 1,300 ಉದ್ಯೋಗ ಕಡಿತವನ್ನು ಪ್ರಕಟಿಸಿತ್ತು.