Site icon Vistara News

M-seal case | ಎಂ-ಸೀಲ್ ಟ್ರೇಡ್‌ ಮಾರ್ಕ್‌ ಉಲ್ಲಂಘನೆ ಕೇಸ್‌ನಲ್ಲಿ ಆರ್-ಸೀಲ್‌ಗೆ ತಾತ್ಕಾಲಿಕ ನಿರ್ಬಂಧ

Qualified, Capable To Earn: Court Rejects Wife's Demand For Maintenance

Qualified, Capable To Earn: Court Rejects Wife's Demand For Maintenance

ಮುಂಬಯಿ: ಎಂ-ಸೀಲ್‌ ಕೇಸ್‌ನಲ್ಲಿ ಬಾಂಬೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಲ್ಲಿ, ಬೆಂಗಳೂರು ಮೂಲದ ರಿಯಾ ಕೆಮಿ ಕಂಪನಿಗೆ, R-Seal ಎಂಬ ಟ್ರೇಡ್‌ ಮಾರ್ಕ್‌ ಅನ್ನು ತಾತ್ಕಾಲಿಕವಾಗಿ ಬಳಸದಿರುವಂತೆ ನಿರ್ಬಂಧಿಸಿದೆ. ಆರ್-ಸೀಲ್‌ ಹೆಸರಿನಲ್ಲಿ ಅಂಟಿನ ಉತ್ಪನ್ನದ ಮಾರಾಟಕ್ಕೂ ನಿಷೇಧಿಸಿದೆ. ಹೀಗಾಗಿ M-Seal ಉತ್ಪಾದಕ ಪಿಡಿಲೈಟ್ಸ್‌ ಕಂಪನಿಗೆ ನಿರಾಳವಾಗಿದೆ.

ಪಿಡಿಲೈಟ್‌ ಇಂಡಸ್ಟೀಸ್‌, ಫೆವಿಕಾಲ್‌, ಫೆವಿಕ್ವಿಕ್‌, ಎಂ-ಸೀಲ್‌ ಮುಂತಾದ ಜನಪ್ರಿಯ ಬ್ರಾಂಡಿನ ಉತ್ಪನ್ನವನ್ನು ಮಾರಾಟ ಮಾಡುತ್ತಿದೆ.

ರಿಯಾ ಕೆಮಿ ಕಂಪನಿಯ ಆರ್-ಸೀಲ್‌ ಅಂಟಿನ ಉತ್ಪನ್ನವು ತನ್ನ ಎಂ-ಸೀಲ್‌ ಉತ್ಪನ್ನವನ್ನು ಹೋಲುತ್ತದೆ. ಹೀಗಾಗಿ ಗ್ರಾಹಕರ ದಾರಿ ತಪ್ಪಿಸುವಂತಿದೆ. ಇದರಿಂದಾಗಿ ಟ್ರೇಡ್‌ ಮಾರ್ಕ್‌ ಕಾಯಿದೆಯ ಉಲ್ಲಂಘನೆ ಆಗಿದೆ ಎಂದು ಪಿಡಿಲೈಟ್‌ ಇಂಡಸ್ಟ್ರೀಸ್‌ ಆರೋಪಿಸಿದೆ. ಉತ್ಪನ್ನದ ಹೆಸರು ಮತ್ತು ಪ್ಯಾಕೇಜಿಂಗ್‌ನಲ್ಲಿ ಕಾಪಿರೈಟ್‌ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ತಿಳಿಸಿದೆ.

ಎಂ-ಸೀಲ್‌ ಟ್ರೇಡ್‌ ಮಾರ್ಕ್‌ ಅನ್ನು 1968ರಿಂದ ಬಳಸಲಾಗುತ್ತಿದ್ದು, ಇದರ ಮೇಲಿನ ಹಕ್ಕು ತನ್ನದಾಗಿದೆ. ಆದರೆ 2020ರಿಂದ ರಿಯಾ ಕೆಮಿ ಕಂಪನಿಯು ಆರ್-ಸೀಲ್‌ ಹೆಸರಿನಲ್ಲಿ ಎಂ-ಸೀಲ್‌ ಅನ್ನೇ ಹೋಲುವ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ ಎಂದು ಪಿಡಿಲೈಟ್‌ ಆರೋಪಿಸಿದೆ. ಮುಂದಿನ ಆದೇಶ ಹೊರಡಿಸುವ ತನಕ ಕಾಯುವಂತೆ ರಿಯಾ ಕೆಮಿ ಕಂಪನಿಗೆ ಕೋರ್ಟ್‌ ಸೂಚಿಸಿದೆ.

Exit mobile version