ನವದೆಹಲಿ: ಜಿಎಸ್‌ಟಿ ಮಂಡಳಿಯ ೪೭ನೇ ಸಭೆ ಚಂಡಿಗಢದಲ್ಲಿ ಇಂದು ಆರಂಭವಾಗಲಿದೆ. ಎರಡು ದಿನ ನಡೆಯಲಿರುವ ಸಭೆಯಲ್ಲಿ ಹಲವು ವಸ್ತುಗಳು ಮತ್ತು ಸೇವೆಗಳ ಜಿಎಸ್‌ಟಿ ದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ:3 ದಿನ ಸಿಎಂ ಬೊಮ್ಮಾಯಿ ಚಂಡೀಗಢ ಪ್ರವಾಸ: ಜಿಎಸ್‌ಟಿ ಮಧ್ಯಂತರ ವರದಿ ಸಲ್ಲಿಕೆ ಸಾಧ್ಯತೆ
ರಾಜ್ಯಗಳಿಗೆ ಪರಿಹಾರ ವಿಸ್ತರಣೆ
ರಾಜ್ಯಗಳಿಗೆ ಜಿಎಸ್‌ಟಿ ನಷ್ಟ ಪರಿಹಾರದ ಬಾಬ್ತು ಸಾಲ ಮರು ಪಾವತಿಗೆ ಹಣ ಹೊಂದಿಸಲು ಸರ್ಕಾರ ೨೦೨೬ರ ತನಕ ಸೆಸ್ ಸಂಗ್ರಹಿಸಲು ನಿರ್ಧರಿಸಿದೆ. ಮತ್ತೊಂದು ಕಡೆ ಹಲವು ರಾಜ್ಯಗಳು ಜಿಎಸ್‌ಟಿ ನಷ್ಟ ಪರಿಹಾರವನ್ನು ಕನಿಷ್ಠ ೨ ವರ್ಷ ವಿಸ್ತರಿಸಲು ಒತ್ತಾಯಿಸಿವೆ. ಜಿಎಸ್‌ಟಿ ಅನುಷ್ಠಾನದಲ್ಲಿ ರಾಜ್ಯಗಳಿಗೆ ಉಂಟಾಗುವ ಕಂದಾಯ ನಷ್ಟ ಪರಿಹಾರ ವಿತರಣೆ ಇದೇ ಜೂನ್ ೩೦ಕ್ಕೆ ಅಂತ್ಯವಾಗುತ್ತಿದೆ.
ಇದನ್ನೂ ಓದಿ: GST ಮಂಡಳಿ ಸಭೆ ಜೂನ್ 28-29ಕ್ಕೆ, ಕುದುರೆ ರೇಸ್, ಆನ್‌ಲೈನ್ ಗೇಮಿಂಗ್‌ಗೆ 28% ಜಿಎಸ್‌ಟಿ ನಿರೀಕ್ಷೆ