ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಮಂಗಳವಾರ ಮಧ್ಯಂತರ ವಹಿವಾಟಿನಲ್ಲಿ ೧,564 ಅಂಕಗಳ ಭಾರಿ ಜಿಗಿತ ದಾಖಲಿಸಿದೆ. ಸೋಮವಾರ ೮೬೧ ಅಂಕ ಕುಸಿದಿದ್ದ ಸೆನ್ಸೆಕ್ಸ್, ಮರುದಿನ ಈ ಎತ್ತರಕ್ಕೇರಿದೆ.
ಸೆನ್ಸೆಕ್ಸ್ ೫೯,೫೩೭ ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ ೪೪೬ ಅಂಕ ಏರಿಕೊಂಡು ೧೭,೭೫೯ಕ್ಕೆ ಸ್ಥಿರವಾಯಿತು.
ಬಿಎಸ್‌ಇನಲ್ಲಿ ನೋಂದಾಯಿತ ಎಲ್ಲ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ೫.೭೩ ಲಕ್ಷ ಕೋಟಿ ರೂ. ಏರಿಕೆಯಾಗಿದ್ದು, ೨೭೪ ಲಕ್ಷ ಕೋಟಿ ರೂ.ಗಳಿಂದ ೨೮೦ ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ಸೆನ್ಸೆಕ್ಸ್ ೫೯,೫೩೭ಕ್ಕೆ ವೃದ್ಧಿಸಿದೆ. ನಿಫ್ಟಿ ೪೩೧ ಅಂಕ ಜಿಗಿದಿದ್ದು, ೧೭,೭೪೪ ಅಂಕಗಳಿಗೆ ಏರಿಕೆ ದಾಖಲಿಸಿತು.
ಬ್ಯಾಂಕಿಂಗ್, ಹಣಕಾಸು ಷೇರುಗಳ ದರಗಳು ಜಿಗಿಯಿತು. ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಷೇರುಗಳ ದರ ಲಾಭ ಗಳಿಸಿತು. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಷೇರುಗಳು ಲಾಭ ಗಳಿಸಿದ್ದರಿಂದ ಸೆನ್ಸೆಕ್ಸ್ ಏರಿಕೆಗೆ ೨೫೦ಕ್ಕೂ ಹೆಚ್ಚು ಅಂಕಗಳು ಲಭಿಸಿತು.
ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವೇನು?
- ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳ ದರ ಏರಿಕೆ
- ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳ ಚೇತರಿಕೆ
- ಕಚ್ಚಾ ತೈಲ ದರ ೧೦೨ ಡಾಲರ್ಗೆ ಇಳಿಕೆ