Site icon Vistara News

Retail Inflation | ಕೊನೆಗೂ ಇಳಿಯುತ್ತಿದೆ ಬೆಲೆ ಏರಿಕೆಯ ಹೊರೆ, ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ 5.7%ಕ್ಕೆ ಇಳಿಕೆ

Retail inflation

ನವ ದೆಹಲಿ: ಭಾರತದ ರಿಟೇಲ್‌ ಹಣದುಬ್ಬರ ಡಿಸೆಂಬರ್‌ನಲ್ಲಿ (Retail Inflation) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸುರಕ್ಷತಾ ಮಟ್ಟಕ್ಕೆ (2%-6%) ಸತತ ಎರಡನೇ ತಿಂಗಳು ಇಳಿಕೆಯಾಗಿದೆ. ಚಿಲ್ಲರೆ ಹಣದುಬ್ಬರ 5.7%ಕ್ಕೆ ತಗ್ಗಿದೆ ಎಂದು ಅಧಿಕೃತ ಅಂಕಿ ಅಂಶಗಳು ಗುರುವಾರ ತಿಳಿಸಿವೆ.

ಗ್ರಾಹಕ ದರ ಆಧರಿತ ರಿಟೇಲ್‌ ಹಣದುಬ್ಬರವು ನವೆಂಬರ್‌ನಲ್ಲಿ 5.88%, ಅಕ್ಟೋಬರ್‌ನಲ್ಲಿ 6.77%ರಷ್ಟಿತ್ತು. ಆಹಾರ ವಸ್ತುಗಳ ದರ ಇಳಿಕೆ, ಮುಖ್ಯವಾಗಿ ತರಕಾರಿಗಳ ದರ ತಗ್ಗಿರುವುದು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಆರ್‌ಬಿಐ ಪ್ರಕಾರ ಹಣದುಬ್ಬರ ಶೇ.4ಕ್ಕಿಂತ 2% ಹೆಚ್ಚು ಅಥವಾ ಕಡಿಮೆ ಇರಬಹುದು.

ಕಾರ್ಖಾನೆಗಳಲ್ಲಿ ಉತ್ಪಾದನೆ ಏರಿಕೆ: ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಬಿಂಬಿಸುವ ಐಐಪಿ ಸೂಚ್ಯಂಕ ಕಳೆದ ನವೆಂಬರ್‌ನಲ್ಲಿ 7.1%ಕ್ಕೆ ಏರಿಕೆಯಾಗಿದೆ. ನವೆಂಬರ್‌ನಲ್ಲಿ 4% ಪ್ರಗತಿಶೀಲವಾಗಿತ್ತು.

Exit mobile version