Site icon Vistara News

Good News: ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆ ದರದಲ್ಲಿ 10-15 ರೂ. ಇಳಿಕೆ

eadible oil

ನವದೆಹಲಿ: ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆ ದರದಲ್ಲಿ ಲೀಟರ್‌ಗೆ ೧೦-೧೫ ರೂ. ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ನೆಲಗಡಲೆ ಹೊರತುಪಡಿಸಿ, ಇತರ ಪ್ಯಾಕೇಜ್ಡ್‌ ಖಾದ್ಯ ತೈಲಗಳ ದರಗಳಲ್ಲಿ ಇಳಿಕೆ ಕಂಡು ಬಂದಿದೆ. ಪ್ರಸ್ತುತ ದರಗಳು ಪ್ರತಿ ಕೆ.ಜಿಗೆ ೧೫೦ ರೂ.೧೯೦ ರೂ.ಗಳ ಶ್ರೇಣಿಯಲ್ಲಿದೆ.

ಸರ್ಕಾರದ ಮಧ್ಯಪ್ರವೇಶದ ಪರಿಣಾಮ ಅಡುಗೆ ಎಣ್ಣೆ ದರಗಳು ಇಳಿಕೆಯಾಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ತಿಳಿಸಿದ್ದಾರೆ.

ಕಳೆದ ವಾರ ಅದಾನಿ ವಿಲ್ಮರ್‌ ಮತ್ತು ಮದರ್‌ ಡೇರಿ ನಾನಾ ಖಾದ್ಯ ತೈಲಗಳ ದರದಲ್ಲಿ ಲೀಟರ್‌ಗೆ ೧೦-೧೫ ರೂ. ಇಳಿಕೆ ಮಾಡಿದ್ದವು. ಖಾದ್ಯ ತೈಲಗಳ ದರ ಇಳಿಕೆ ಸಕಾರಾತ್ಮಕವಾಗಿದೆ. ಖಾದ್ಯ ತೈಲ ಮಾತ್ರವಲ್ಲದೆ ಖಾದ್ಯ ತೈಲ ಮತ್ತು ರಿಟೇಲ್‌ ಗೋಧಿಯ ದರ ಕೂಡ ನಿಯಂತ್ರಣದಲ್ಲಿದೆ ಎಂದು ಪಾಂಡೆ ತಿಳಿಸಿದರು.

ಖಾದ್ಯ ತೈಲ ದರ ಇಳಿಕೆ ಹೀಗೆ

ಖಾದ್ಯತೈಲಹಳೆ ದರ (ರೂ.ಗಳಲ್ಲಿ)ಹೊಸ ದರ
ತಾಳೆ ಎಣ್ಣೆ156 ರೂ. (ಕೆ.ಜಿ)152
ಸೋಯಾ ಎಣ್ಣೆ169167
ಸೂರ್ಯಕಾಂತಿ193189

ಸರ್ಕಾರ ದಿನ ಬಳಕೆಯ ೨೨ ಆಹಾರ ವಸ್ತುಗಳ ಬೆಲೆಯನ್ನು ಪರಿಶೀಲಿಸುತ್ತಿರುತ್ತದೆ. ಅಕ್ಕಿ, ಗೋಧಿ, ತೊಗರಿ, ಉದ್ದು, ಹೆಸರು ಬೇಳೆ, ವನಸ್ಪತಿ, ಸೂರ್ಯಕಾಂತಿ ಎಣ್ಣೆ, ಸೋಯಾ, ತಾಳೆ ಎಣ್ಣೆ, ಆಲೂಗಡ್ಡೆ, ಹಾಲು, ಆಲೂಗಡ್ಡೆ, ಈರುಳ್ಳಿ, ಉಪ್ಪು ಇತ್ಯಾದಿಗಳ ದರದ ಏರಿಳಿತಗಳ ಮೇಲೆ ನಿಗಾ ವಹಿಸುತ್ತದೆ.

೨೨ ವಸ್ತುಗಳ ದಿನವಹಿ ದರಗಳನ್ನು ೧೬೭ ಕೇಂದ್ರಗಳಿಂದ ಸಂಗ್ರಹಿಸಲಾಗುತ್ತದೆ.

Exit mobile version