ಭೋಪಾಲ್: ಭಾರತ್ ಬಯೊಟೆಕ್ ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ ಲಸಿಕೆಯನ್ನು ( Lumpi-ProVacInd ) ಜನವರಿ 26ರಿಂದ ಮಾರಾಟಕ್ಕೆ ಬಿಡುಗಡೆ ಮಾಡುವ (Covid vaccine) ನಿರೀಕ್ಷೆ ಇದೆ.
ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಕೃಷ್ಣ ಎಲ್ಲಾ ಶನಿವಾರ ಈ ವಿಷಯ ತಿಳಿಸಿದ್ದಾರೆ. ಭೋಪಾಲ್‌ನಲ್ಲಿ ಮೌಲಾನಾ ಅಜಾದ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು ಈ ವಿಷಯ ತಿಳಿಸಿದ್ದಾರೆ.
ಪ್ರತಿ ಡೋಸ್ ಖರೀದಿಗೆ ಸರ್ಕಾರಗಳಿಗೆ 325 ರೂ. ವೆಚ್ಚವಾಗುವ ಸಾಧ್ಯತೆ ಇದೆ. ಕ್ಲಿನಿಕ್‌ಗಳಲ್ಲಿ ವಾಣಿಜ್ಯ ಬಳಕೆಯ ಡೋಸ್‌ಗೆ 800 ರೂ. ತಗಲುವ ನಿರೀಕ್ಷೆ ಇದೆ. 18 ವರ್ಷ ಮೇಲ್ಪಟ್ಟವರು 28 ದಿನಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬಹುದು.
ಇದು ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ iNCOVACC ಅಥವಾ BBV154 ಲಸಿಕೆಯು ಪಾತ್ರವಾಗಿದೆ. ಭಾರತ್ ಬಯೋಟೆಕ್ ಈ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರ ಈ ಕುರಿತ ಸಂಶೋಧನೆಗೆ ಅನುದಾನ ನೆರವು ನೀಡಿದೆ.
ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ (ಮೂಗಿನ ಮೂಲಕ ನೀಡುವ) ಕೊರೊನಾ ನಿರೋಧಕ ಬೂಸ್ಟರ್ ಡೋಸ್ ಲಸಿಕೆಯ (Intranasal Vaccine) ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ.
ಅನುಕೂಲಗಳೇನು?
ಮೂಗಿನ ಮೂಲಕವೇ ಕೊರೊನಾ ಸೋಂಕು ದೇಹವನ್ನು ಪ್ರವೇಶಿಸುವುದರಿಂದ ಈ ಲಸಿಕೆಯನ್ನು ಮೂಗಿನಿಂದ ನೀಡಲಾಗುತ್ತದೆ. ಇದಕ್ಕಾಗಿ ಸೂಜಿಯನ್ನು ಬಳಸದ ಕಾರಣ ಲಸಿಕೆ ನೀಡಿಕೆಯು ಸುಲಭವಾಗಿದೆ. ಹಾಗೆಯೇ, ಇದು ಸೋಂಕು ನಿಗ್ರಹಿಸುವಲ್ಲಿ ಪ್ರಭಾವಶಾಲಿ ಎಂಬುದು ಕ್ಲಿನಿಕಲ್ ಪ್ರಯೋಗಗಳಿಂದ ದೃಢಪಟ್ಟಿದೆ.