ನವ ದೆಹಲಿ: ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಫೆಬ್ರವರಿಯಲ್ಲಿ 7.14%ರಿಂದ 7.45%ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ( Centre for monitoring Indian economy) ತಿಳಿಸಿದೆ.
ನಗರ ಮಟ್ಟದ ನಿರುದ್ಯೋಗ ದರ 8.55ರಿಂದ 7.93%ಕ್ಕೆ ಇಳಿಕೆಯಾಗಿದೆ. ಆದರೆ ಗ್ರಾಮೀಣ ನಿರುದ್ಯೋಗ ದರ 6.48%ರಿಂದ 7.23%ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತ ಸಂಭವಿಸಿದೆ. ಸ್ಟಾರ್ಟಪ್ ವಲಯದಲ್ಲಿ ಕೂಡ ಉದ್ಯೋಗ ನಷ್ಟ ಸಂಭವಿಸಿದೆ.