ನವ ದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮತ್ತೊಮ್ಮೆ ೮೦ ರೂ.ಗಳ ಮಟ್ಟಕ್ಕೆ ಸೋಮವಾರ ಬೆಳಗ್ಗೆ ಪತನವಾಯಿತು. (Rupee @80) ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ತಗ್ಗಿಸಲು ಬಡ್ಡಿ ದರ ಏರಿಸಲಾಗುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರೂಪಾಯಿ ಪತನವಾಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ೮೦.೦೭ಕ್ಕೆ ವಹಿವಾಟು ಆರಂಭಿಸಿದ ರೂಪಾಯಿ ಮಧ್ಯಂತರದಲ್ಲಿ ೮೦.೧೫ಕ್ಕೆ ಕುಸಿಯಿತು.
ಹೀಗಿದ್ದರೂ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೂಪಾಯಿಯ ಚಲನವಲನಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಮುಂದಿನ ೧-೨ ವಾರಗಳ ಕಾಲ ರೂಪಾಯಿ ಮೌಲ್ಯ ಸರಾಸರಿ ೭೯.೭೦-೮೦.೫೦ರ ಶ್ರೇಣಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ಜಾಕ್ಸನ್ ಹೋಲ್ ವಿಚಾರಸಂಕಿರಣದಲ್ಲಿ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಭಾಷಣ ಅಲ್ಲೋಲಕಲ್ಲೋಲ ಉಂಟು ಮಾಡಿತು.
ಪರಿಣಾಮವೇನು? ಡಾಲರ್ ಎದುರು ರೂಪಾಯಿಯ ಕುಸಿತದಿಂದ ಉಂಟಾಗುವ ಅತಿ ದೊಡ್ಡ ಅನಾನುಕೂಲ ಏನು ಎಂದರೆ ಆಮದು ವೆಚ್ಚ ದುಬಾರಿಯಾಗುತ್ತದೆ. ಮುಖ್ಯವಾಗಿ ಕಚ್ಚಾ ತೈಲ, ಬಂಗಾರ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಇತರ ಉತ್ಪನ್ನಗಳ ಆಮದು ದುಬಾರಿಯಾಗುತ್ತದೆ. ಬೆಲೆ ಏರಿಕೆ ಅಥವಾ ಹಣದುಬ್ಬರ ಉಂಟಾಗುತ್ತದೆ. ಈಗಾಗಲೇ ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಹಣದುಬ್ಬರ ಮೀರಿದೆ
ಇದನ್ನೂ ಓದಿ: ವಿಸ್ತಾರ Explainer | ಡಾಲರ್ ಎದುರು ರೂಪಾಯಿ 80ಕ್ಕೆ ಕುಸಿದಿದ್ದೇಕೆ? ಇದರ ಪರಿಣಾಮವೇನು?