Site icon Vistara News

Note in Circulation | ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 32 ಲಕ್ಷ ಕೋಟಿ ರೂ, ವಾರ್ಷಿಕ 8% ಹೆಚ್ಚಳ

cash

ನವ ದೆಹಲಿ: ದೇಶದಲ್ಲಿ 2022ರ ಡಿಸೆಂಬರ್‌ 2ರ ವೇಳೆಗೆ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 31.92 ಲಕ್ಷ ಕೋಟಿ ರೂ.ಗಳಾಗಿದ್ದು, ವಾರ್ಷಿಕ 7.98% ಬೆಳವಣಿಗೆ ದಾಖಲಾಗಿದೆ (Note in Circulation) ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ನಗದು ಚಲಾವಣೆ ಹೆಚ್ಚಳಕ್ಕೆ ಕಾರಣವೇನು?

ಆರ್ಥಿಕತೆಯ ಬೆಳವಣಿಗೆ, ಬಡ್ಡಿ ದರದ ಮಟ್ಟ, ಆರ್ಥಿಕತೆಯ ಸ್ವರೂಪ ಮೊದಲಾದ ಕಾರಣಗಳಿಂದ ನಗದು ಚಲಾವಣೆಯಲ್ಲಿ ಹೆಚ್ಚಳ ಉಂಟಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ನೋಟು ಅಮಾನ್ಯತೆಯ ಆರು ವರ್ಷಗಳ ಬಳಿಕವೂ ನಗದು ಈಗಲೂ ಪ್ರಾಬಲ್ಯವನ್ನು ಮುಂದುವರಿಸಿದೆ. 2016ರ ನವೆಂಬರ್‌ 4ರ ವೇಳೆಗೆ 17 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿ ಇತ್ತು.

ಜಿಡಿಪಿಗೆ ಹೋಲಿಸಿದರೆ, ಅದರ ಬೆಳವಣಿಗೆಗೆ ತಕ್ಕಂತೆ ನಗದು ಚಲಾವಣೆ ಏರಿಕೆ ಆಗಿರುವುದನ್ನು ಗಮನಿಸಬಹುದು. 2016ರಲ್ಲಿ ಜಿಡಿಪಿಯ 12% ನಷ್ಟು ನಗದು ಚಲಾವಣೆಯಲ್ಲಿತ್ತು. 2020ರಲ್ಲಿ 13%ನಷ್ಟಿತ್ತು. ಹೀಗಿದ್ದರೂ, ಡಿಜಿಟಲ್‌ ಎಕಾನಮಿಯೂ ಗಮನಾರ್ಹ ಪ್ರಗತಿ ದಾಖಲಿಸಿರುವುದನ್ನು ಕಾಣಬಹುದು.

Exit mobile version