Site icon Vistara News

ITR Deadline | ಐಟಿಆರ್‌ ವೆರಿಫಿಕೇಶನ್‌ಗೆ ಇಂದು ಕೊನೆಯ ದಿನ, ಮರೆಯದಿರಿ

ITR

ನವ ದೆಹಲಿ: ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ಪ್ರಕಾರ, ಆದಾಯ ತೆರಿಗೆ ವಿವರ ಸಲ್ಲಿಕೆಯ( ಐಟಿಆರ್-ವಿ) ವೆರಿಫಿಕೇಶನ್‌ಗೆ ಇಂದು ಕೊನೆಯ ದಿನವಾಗಿದೆ. ಆಗಸ್ಟ್‌ ೧ ಮತ್ತು ಬಳಿಕ ಐಟಿಆರ್‌ ಸಲ್ಲಿಸಿದವರು ಆಗಸ್ಟ್‌ ೩೧ರೊಳಗೆ ಐಟಿಆರ್-ವಿ ಪ್ರಕ್ರಿಯೆಯನ್ನು (ITR Deadline) ಪೂರ್ಣಗೊಳಿಸಬೇಕು. ಐಟಿಆರ್-ವಿ ಪೂರ್ಣಗೊಳಿಸದಿದ್ದರೆ ಐಟಿಆರ್‌ ಸಲ್ಲಿಕೆ ಪೂರ್ಣವಾಗುವುದಿಲ್ಲ.

ಈ ಸಂಬಂಧ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ೨೦೨೨ರ ಜುಲೈ ೨೯ರಂದು ಅಧಿಸೂಚನೆ ಹೊರಡಿಸಿತ್ತು. ಇದು ೨೦೨೨ರ ಆಗಸ್ಟ್‌ ೧ರಿಂದ ಅನ್ವಯವಾಗಲಿದೆ. ಈ ಹಿಂದೆ ಐಟಿಆರ್-ವಿ ಪೂರ್ಣಗೊಳಿಸಲು ೧೨೦ ದಿನಗಳ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ ಈಗ ೩೦ ದಿನಕ್ಕೆ ಇಳಿಸಲಾಗಿದೆ. ಇ-ವೆರಿಫಿಕೇಶನ್‌ ಅಥವಾ ಐಟಿಆರ್-ವಿ ಸಲ್ಲಿಕೆಗೆ ಈ ಗಡುವು ಅನ್ವಯವಾಗಲಿದೆ.

ಒಂದು ವೇಳೆ ನಿಮ್ಮ ಆದಾಯ ತೆರಿಗೆ ರಿಟರ್ನ್‌ನ ವೆರಿಫಿಕೇಶನ್‌ ಮಾಡದಿದ್ದರೆ, ಗಡುವು ತಪ್ಪಿದರೆ ಬಳಿಕ ೫,೦೦೦ ರೂ. ತನಕ ದಂಡ ಪಾವತಿಸಬೇಕಾಗಿ ಬರಬಹುದು. ಐಟಿಆರ್-ವೆರಿಫಿಕೇಶನ್‌ ಅನ್ನು ಆನ್‌ಲೈನ್‌ ಮೂಲಕ ಇಲ್ಲವೇ ಆಫ್‌ಲೈನ್‌ನಲ್ಲಿ ಮಾಡಬಹುದು. ಆಫ್‌ಲೈನ್‌ನಲ್ಲಿ ಮಾಡುವುದಿದ್ದರೆ ನಿಗದಿತ ಅರ್ಜಿ ನಮೂನೆಯಲ್ಲಿ, ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಸೆಂಟ್ರಲೈಸ್ಡ್‌ ಪ್ರೊಸೆಸಿಂಗ್‌ ಸೆಂಟರ್‌ಗೆ ಸಲ್ಲಿಸಬೇಕು. ಆಧಾರ್‌ ಆಧಾರಿತ ಒಟಿಪಿ, ನೆಟ್‌ ಬ್ಯಾಂಕಿಂಗ್‌ ಮೂಲಕವೂ ಐಟಿಆರ್‌ ವೆರಿಫಿಕೇಶನ್‌ ಮಾಡಬಹುದು.

ಇದನ್ನೂ ಓದಿ: ITR filing| ಗಡುವು ವಿಸ್ತರಣೆಗೆ ಕೊನೆಗೂ ನಕಾರ, 5.5 ಕೋಟಿ ಐಟಿ ರಿಟರ್ನ್ಸ್‌ ಸಲ್ಲಿಕೆ

Exit mobile version