Site icon Vistara News

‌Tokenisation | ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಸುರಕ್ಷತೆ ಹೆಚ್ಚಿಸಲು ಅಕ್ಟೋಬರ್‌ 1ರಿಂದ ಟೋಕನ್‌ ವ್ಯವಸ್ಥೆ

card

ನವ ದೆಹಲಿ: ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಸುರಕ್ಷತೆಯನ್ನು ಹೆಚ್ಚಿಸಲು ಅಕ್ಟೋಬರ್‌ 1ರಿಂದ ನಿಯಮಾವಳಿಗಳು ಬದಲಾಗಲಿವೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಲ್ಲ ಬ್ಯಾಂಕ್‌ಗಳಿಗೆ ಕಾರ್ಡ್‌ ವಿವರಗಳಿಗೆ ಟೋಕನ್‌ ವ್ಯವಸ್ಥೆಯನ್ನು ಕೊಡುವಂತೆ ತಿಳಿಸಿದೆ. ಇದರಿಂದ ಎಲ್ಲ ಆನ್‌ಲೈನ್‌, ಪಾಯಿಂಟ್‌ ಆಫ್‌ ಸೇಲ್‌ಗಳಲ್ಲಿನ ವರ್ಗಾವಣೆಗಳಲ್ಲಿ ಟೋಕನ್‌ ಬಳಕೆಯಾಗಲಿದೆ. ‌( Tokenisation) ಕಾರ್ಡ್‌ಗಳ ಡೇಟಾಗಳ ರಕ್ಷಣೆಯ ದೃಷ್ಟಿಯಿಂದ ಸಹಕಾರಿಯಾಗಲಿದೆ.

ಟೋಕನೈಸೇಶನ್‌ನಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ವಿವರಗಳ ಬದಲು ಟೋಕನ್‌ ಬಳಕೆಯಾಗಲಿದೆ. ಕಾರ್ಡ್‌ ಸಂಖ್ಯೆ, ಅವಧಿ ಇತ್ಯಾದಿ ವಿವರಗಳನ್ನು ಯಾರಿಗೂ ನೀಡಬೇಕಾಗುವುದಿಲ್ಲ. ಅದು ವರ್ತಕರ ಪೇಮೆಂಟ್‌ ವ್ಯವಸ್ಥೆಯಲ್ಲೂ ಸಂಗ್ರಹವಾಗುವುದಿಲ್ಲ. ಬದಲಿಗೆ ಬ್ಯಾಂಕ್‌ ನೀಡುವ ಟೋಕನ್‌ ಬಳಕೆಯಾಗುತ್ತದೆ. ಹೀಗಾಗಿ ಬಳಕೆದಾರರ ಕಾರ್ಡ್‌ ಮಾಹಿತಿಗಳು ಸುರಕ್ಷಿತವಾಗಿರುತ್ತದೆ.

ಕಡ್ಡಾಯವಲ್ಲ, ಹಳೆಯ ವ್ಯವಸ್ಥೆ ಮುಂದುವರಿಯಲಿದೆ: ಕಾರ್ಡ್‌ ಟೋಕನೈಸೇಶನ್‌ ಕಡ್ಡಾಯವಲ್ಲ. ಹೀಗಾಗಿ ಹಳೆಯ ಪದ್ಧತಿ ಮುಂದುವರಿಯಲಿದೆ. ಟೋಕನ್‌ ಬೇಡ ಎನ್ನುವವರು ಎಂದಿನಂತೆ ತಮ್ಮ ಕಾರ್ಡ್‌ ಮಾಹಿತಿಗಳನ್ನು ಬಳಸಿ ಹಣಕಾಸು ವರ್ಗಾವಣೆ ನಡೆಸಬಹುದು.

ಇದನ್ನೂ ಓದಿ: ವಿಸ್ತಾರ Money Guide | ನಿಮ್ಮ ಡೆಬಿಟ್‌, ಕ್ರೆಡಿಟ್ ಕಾರ್ಡ್‌ ಸುರಕ್ಷತೆಗೆ ಆರ್‌ಬಿಐ ಟೋಕನ್‌ ಶೀಘ್ರ, ಏನಿದು?

Exit mobile version