Site icon Vistara News

Toll plazas : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಪ್ಲಾಜಾ ತೆರವು ಸಂಭವ, ಶುಲ್ಕ ಸಂಗ್ರಹ ಹೇಗೆ?

Expressway Ban on bike and auto traffic on Bangalore-Mysore expressway soon, what is the reason?

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ಪ್ಲಾಜಾಗಳನ್ನು ಎನ್‌ಎಚ್‌ಎಐ ತೆರವುಗೊಳಿಸುವ ಸಾಧ್ಯತೆ ಇದೆ. ಹಾಗಾದರೆ ಟೋಲ್‌ ಸಂಗ್ರಹ ಇರುವುದಿಲ್ಲ ಎಂದು ಭಾವಿಸುತ್ತೀರಾ? ಟೋಲ್‌ ಸಂಗ್ರಹ ನಡೆಯಲಿದೆ. ಆದರೆ ಅದಕ್ಕಾಗಿ ಆಟೊಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನಿಶನ್‌ ತಂತ್ರಜ್ಞಾನ (Automatic Number Plate Recognition) ಬಳಸಿಕೊಂಡು ಟೋಲ್‌ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (National Highways Authority of India) ಈಗ ಈ ಎಎನ್‌ಪಿಆರ್‌ ತಂತ್ರಜ್ಞಾನವನ್ನು ದಿಲ್ಲಿ-ಮೀರತ್‌ ಎಕ್ಸ್‌ಪ್ರೆಸ್‌ವೇನಲ್ಲಿ ಬಳಸುತ್ತಿದೆ. ಕ್ರಮೇಣ ಇತರ ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಸ್ತರಿಸಲಿದೆ. ಬೆಂಗಳೂರು-ಮೂಸೂರು ಎಕ್ಸ್‌ಪ್ರೆಸ್‌ವೇನಲ್ಲೂ ಈ ತಂತ್ರಜ್ಞಾನ ಅಳವಡಿಕೆಯಾಗುವ ನಿರೀಕ್ಷೆ ಇದೆ.

ಈ ತಂತ್ರಜ್ಞಾನದ ಅಡಿಯಲ್ಲಿ ಟೋಲ್‌ ಶುಲ್ಕವು ಫಾಸ್ಟ್ಯಾಗ್‌ ಮೂಲಕ ಕಡಿತವಾಗಲಿದೆ. ವಾಹನದ ಪ್ರವೇಶ ಮತ್ತು ನಿರ್ಗಮನದ ವೇಳೆ ಎಎನ್‌ಪಿಆರ್‌ ಕ್ಯಾಮೆರಾಗಳು ಬಳಕೆಯಾಗಲಿವೆ. ಎನ್‌ಎಚ್‌ಎಐ ಹೆದ್ದಾರಿಗಳ 89 ಎಂಟ್ರಿ ಮತ್ತು ಎಕ್ಸಿಟ್‌ ಪಾಯಿಂಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಿದೆ.

ಬೆಂಗಳೂರು-ನಿಡಘಟ್ಟ ಎಕ್ಸ್‌ವೇ ಸೆಕ್ಷನ್‌ನಲ್ಲಿ ಎರಡು ಟೋಲ್‌ ಪ್ಲಾಜಾಗಳು ಇವೆ. ನಿಡಘಟ್ಟ-ಮೈಸೂರು ಸೆಕ್ಷನ್‌ನಲ್ಲಿ ಇನ್ನೆರಡು ಟೋಲ್‌ ಪ್ಲಾಜಾಗಳನ್ನು ಎನ್‌ಎಚ್‌ಎಐ ಅಳವಡಿಸಲಿದೆ.

ಟೋಲ್‌ ರಹಿತ ಸರ್ವೀಸ್‌ ರಸ್ತೆ:

ಬಿಡದಿ, ಚನ್ನಪಟ್ಟಣ ಮತ್ತು ರಾಮನಗರಕ್ಕೆ ತೆರಳುವವರಿಗೆ ಉಂಟಾಗುವ ಅನಾನುಕೂಲದ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಎಚ್‌ಎಐ ಅಧಿಕಾರಿಗಳು, ಎಕ್ಸ್‌ಪ್ರೆಸ್‌ ವೇಯ ಇಕ್ಕೆಲಗಳಲ್ಲೂ ಎರಡು ಲೇನ್‌ಗಳ ಸರ್ವೀಸ್‌ ರಸ್ತೆ ಇದ್ದು, ಅದರಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.

Exit mobile version