Site icon Vistara News

Track mobile phone : ನಿಮ್ಮ ಮೊಬೈಲ್‌ ಕಳುವಾದರೆ ಮೇ 17ರಿಂದ ನೀವೇ ಬ್ಲಾಕ್‌, ಟ್ಯ್ರಾಕ್‌ ಮಾಡಬಹುದು; ಇಲ್ಲಿದೆ ಡಿಟೇಲ್ಸ್

Track mobile phone Track and block lost mobile phone from May 17 here are the details

#image_title

ನವ ದೆಹಲಿ: ಮೊಬೈಲ್‌ ಫೋನ್‌ ಬಳಕೆದಾರರು 2023ರ ಮೇ 17ರಿಂದ ಕಳೆದುಹೋದ ತಮ್ಮ ಮೊಬೈಲ್‌ ಫೋನ್‌ಗಳನ್ನು ಭಾರತದಾದ್ಯಂತ ಎಲ್ಲೇ ಇದ್ದರೂ, ಅವರೇ ಟ್ರ್ಯಾಕ್‌ ಮಾಡಬಹುದು, ಜತೆಗೆ ಅದನ್ನು ಬ್ಲಾಕ್‌ ಮಾಡಲೂ ಸಾಧ್ಯವಿದೆ. (Track mobile phone) ಕೇಂದ್ರ ಸರ್ಕಾರ ಈ ಸಂಬಂಧ ಸುಧಾರಿತ ಟ್ರ್ಯಾಕಿಂಗ್‌ ಸಿಸ್ಟಮ್‌ ಅನ್ನು (tracking system) ಜಾರಿಗೊಳಿಸುತ್ತಿದೆ.

ದೂರಸಂಪರ್ಕ ಇಲಾಖೆಯ ಟೆಕ್ನಾಲಜಿ ಡೆವಲಪ್‌ಮೆಂಟ್‌ ಬಾಡಿ ಸೆಂಟರ್‌ ಫಾರ್‌ ಡಿಪಾರ್ಟ್‌ಮೆಂಟ್‌ ಆಫ್‌ ಟೆಲಿಮ್ಯಾಟಿಕ್ಸ್‌ (Technology development body Centre for department of Telematics) ವಿಭಾಗವು, ಸೆಂಟ್ರಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟ್ರಾರ್‌ (Central Equipment Identity Register – CEIR) ವ್ಯವಸ್ಥೆಯನ್ನು ಕಲ್ಪಿಸಿದೆ. ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ, ಈಶಾನ್ಯ ರಾಜ್ಯ ಸೇರಿದಂತೆ ನಾನಾ ವೃತ್ತಗಳಲ್ಲಿ ಈ ಸೇವೆ ಲಭಿಸಲಿದೆ.

ಮೇ 17ರಿಂದ ಸಿಇಐಆರ್‌ ಸಿಸ್ಟಮ್‌ ಅಖಿಲ ಭಾರತ ಮಟ್ಟದಲ್ಲಿ ಚಾಲನೆಯಾಗಲಿದೆ ಎಂದಯ ದೂರಸಂಪರ್ಕ ಇಲಾಖೆ ತಿಳಿಸಿದೆ. ಇದರಿಂದಾಗಿ ದೇಶಾದ್ಯಂತ ಜನತೆ ತಮ್ಮ ಮೊಬೈಲ್‌ ಫೋನ್‌ ಕಳೆದು ಹೋದರೆ ತಾವೇ ಟ್ರ್ಯಾಕ್‌ ಮಾಡಬಹುದು, ಜತೆಗೆ ಇತರರಿಂದ ದುರುಪಯೋಗ ಆಗದಂತೆ ಬ್ಲಾಕ್‌ ಮಾಡಬಹುದು ಎಂದು ದೂರಸಂಪರ್ಕ ಇಲಾಖೆ ಮಂಡಳಿ ಅಧ್ಯಕ್ಷ ರಾಜ್‌ಕುಮಾರ್‌ ತಿಳಿಸಿದ್ದಾರೆ.‌

ಇದನ್ನೂ ಓದಿ: iPhone production : ಚೀನಾದಿಂದ ಐಫೋನ್‌ ಉತ್ಪಾದನೆ ಶಿಫ್ಟ್‌, ಫಾಕ್ಸ್‌ಕಾನ್‌ನಿಂದ ಬೆಂಗಳೂರಿನಲ್ಲಿ ಭಾರಿ ಭೂಮಿ ಖರೀದಿ

ಮೊಬೈಲ್‌ ನೆಟ್‌ ವರ್ಕ್‌ಗಳು ಮಾನ್ಯತೆ ಪಡೆದ ಐಎಂಇಐ (IMEI) ಸಂಖ್ಯೆಯ ಪಟ್ಟಿಗೆ ಲಿಂಕ್‌ ಪಡೆದಿರುತ್ತವೆ. ಹೀಗಾಗಿ ಐಎಂಇಐ ಸಂಖ್ಯೆ ಮೂಲಕ ಮೊಬೈಲ್‌ ಎಲ್ಲಿದ್ದರೂ ಪತ್ತೆ ಹಚ್ಚಬಹುದು. ಜತೆಗೆ ಅದನ್ನು ಬ್ಲಾಕ್‌ ಮಾಡಬಹುದು.

ಐಎಂಇಐ ಸಂಖ್ಯೆ ಪತ್ತೆ ಹೇಗೆ? ನಿಮ್ಮ ಆಂಡ್ರಾಯ್ಡ್‌ ತಂತ್ರಜ್ಞಾನ ಆಧರಿತ ಮೊಬೈಲ್‌ ಫೋನ್‌ನಲ್ಲಿ ಸೆಟ್ಟಿಂಗ್‌ ಅನ್ನು ಕ್ಲಿಕ್ಕಿಸಿ. ಸ್ಟ್ರಾಲ್‌ ಡೌನ್‌ ಮಾಡಿ ಎಬೌಟ್‌ ಫೋನ್‌ (about phone) ಟ್ಯಾಪ್‌ ಮಾಡಿ. ಅಲ್ಲಿ ಐಎಂಇಐ ಸಂಖ್ಯೆ ಪತ್ತೆ ಹಚ್ಚಬಹುದು.

Exit mobile version