ನವ ದೆಹಲಿ: ಭಾರತದ ರಫ್ತು ಮತ್ತು ಆಮದು ಫೆಬ್ರವರಿಯಲ್ಲಿ 8% ಇಳಿಕೆಯಾಗಿದೆ ಎಂದು ಸರ್ಕಾರ ಬುಧವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿವೆ. (Trade data) 2023ರ ಫೆಬ್ರವರಿಯಲ್ಲಿ ರಫ್ತು ಮೌಲ್ಯ 2.77 ಲಕ್ಷ ಕೋಟಿ ರೂ.ನಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 3.04 ಲಕ್ಷ ಕೋಟಿ ರೂ.ನಷ್ಟಿತ್ತು.
ಭಾರತದ ಆಮದು ಕಳೆದ ಅಕ್ಟೋಬರ್‌ನಲ್ಲಿ 4.20 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.58 ಲಕ್ಷ ಕೋಟಿ ರೂ. ಆಮದಾಗಿತ್ತು. ಸತತ ಎರಡು ತಿಂಗಳುಗಳಿಂದ ಆಮದು, ರಫ್ತು ಇಳಿಕೆಯಾಗಿದೆ.
ಭಾರತದ ರಫ್ತು ಪ್ರಸಕ್ತ ಸಾಲಿನಲ್ಲಿ 61 ಲಕ್ಷ ಕೋಟಿ ರೂ.ಗಳ ಗಡಿ ದಾಟಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಇತ್ತೀಚೆಗೆ ತಿಳಿಸಿದ್ದಾರೆ.