Site icon Vistara News

New expressway | ಬೆಂಗಳೂರಿನಿಂದ ಮುಂಬಯಿಗೆ 5 ಗಂಟೆಯಲ್ಲಿ ಪ್ರಯಾಣ? ನಿತಿನ್‌ ಗಡ್ಕರಿ ಭರವಸೆ

way

ಪುಣೆ: ಬೆಂಗಳೂರಿನಿಂದ ಮುಂಬಯಿಗೆ ಭವಿಷ್ಯದ ದಿನಗಳಲ್ಲಿ ರಸ್ತೆ ಮೂಲಕ ಕಾರಿನಲ್ಲಿ ಪ್ರಯಾಣಿಸುವುದಿದ್ದರೆ, ಕೇವಲ 5 ಗಂಟೆಗಳಲ್ಲಿ ತಲುಪಬಹುದು! (New expressway) ಹೀಗಾಗಿ ರೈಲು ಅಥವಾ ವಿಮಾನದ ಬದಲು ಕಾರಿನಲ್ಲಿ ಪ್ರಯಾಣಿಸುವ ಆಯ್ಕೆಯೂ ನಿಮ್ಮದಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ.

ಬೆಂಗಳೂರು-ಮುಂಬಯಿ ನಡುವೆ ಗ್ರೀನ್‌ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಯೋಜನೆ ಪೂರ್ಣವಾದ ಬಳಿಕ ಉಭಯ ನಗರಗಳ ನಡುವೆ ರಸ್ತೆ ಮೂಲಕ ಪ್ರಯಾಣಕ್ಕೆ 5 ಗಂಟೆ ಸಾಕು ಎಂದು ಸಚಿವರು ತಿಳಿಸಿದ್ದಾರೆ. ಈಗ 15 ಗಂಟೆ ಬೇಕಾಗುತ್ತದೆ.

ನೂತನ ಎಕ್ಸ್‌ಪ್ರೆಸ್‌ವೇ (Green express highway) ಬಗ್ಗೆ ಯೋಜಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನವಾಗಲಿದೆ ಎಂದರು. ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ತನ್ನ ಮಹತ್ತ್ವಾಕಾಂಕ್ಷೆಯ ರಸ್ತೆ ನೆಟ್‌ ವರ್ಕ್‌ ಯೋಜನೆಯ ಅಡಿಯಲ್ಲಿ ಹೊಸ ಎಕ್ಸ್‌ಪ್ರೆಸ್‌ ವೇಯನ್ನು ಕಾರ್ಯಗತಗೊಳಿಸಲಿದೆ.

ಎಕ್ಸ್‌ಪ್ರೆಸ್‌ ವೇ ಹೇಗೆ? ಮುಂಬಯಿ-ಪುಣೆಯ ನಡುವೆ ಎಕ್ಸ್‌ಪ್ರೆಸ್‌ವೇ ಈಗಾಗಲೇ ಇದ್ದು, ಪುಣೆಯಿಂದ ಬೆಂಗಳೂರಿಗೆ ವಿಸ್ತರಣೆಯಾಗಲಿದೆ. ಮುಂಬಯಿ-ಬೆಂಗಳೂರು ನಡುವೆ 985 ಕಿ.ಮೀ ದೂರ ಇದೆ. ಈಗ ರಾಷ್ಟ್ರೀಯ ಹೆದ್ದಾರಿ 48 ಅಥವಾ ರಾಷ್ಟ್ರೀಯ ಹೆದ್ದಾರಿ 50 ಮೂಲಕ ತಲುಪಬಹುದು. ಆದರೆ 15 ಗಂಟೆಗಳ ಸಮಯ ತಗಲುತ್ತದೆ. ಹೊಸ ಎಕ್ಸ್‌ಪ್ರೆಸ್‌ವೇ ಪರಿಣಾಮ ಪ್ರಯಾಣದ ಅವಧಿ ಗಣನೀಯ ಇಳಿಕೆಯಾಗಿದೆ. ಉಭಯ ನಗರಗಳ ನಡುವೆ ಹಲವು ನಗರಗಳಿಗೆ ರಸ್ತೆ ಸಂಪರ್ಕ ಸಿಗಲಿದೆ. ಬೆಂಗಳೂರು-ಪುಣೆ ನಡುವಣ ಪ್ರಯಾಣದ ಅವಧಿ ಕೂಡ ಮೂರೂವರೆ ಗಂಟೆಗೆ ಇಳಿಕೆಯಾಗಲಿದೆ.

ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 26 ಗ್ರೀನ್‌ ಎಕ್ಸ್‌ಪ್ರೆಸ್‌ವೇ ಹೆದ್ದಾರಿಗಳು ನಿರ್ಮಾಣವಾಗಲಿದೆ. ಇದರಿಂದ ಪ್ರಯಾಣದ ಅವಧಿಯಲ್ಲಿ ಇಳಿಕೆಯಾಗಲಿದೆ ಎಂದು ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಈ 26 ಎಕ್ಸ್‌ಪ್ರೆಸ್‌ವೇಗಳಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದೆ. ಹಾಗೂ ಎರಡೂ ನಗರಗಳ ಪ್ರಯಾಣ ಅವಧಿ 2 ಗಂಟೆಗೆ ಇಳಿಯಲಿದೆ ಎಂದಿದ್ದಾರೆ.

Exit mobile version