ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಏರೊ ಇಂಡಿಯಾ 2023 ವೈಮಾನಿಕ ಶೋ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅತಿ ದೊಡ್ಡ ಸಾರಿಗೆ ನಿರ್ವಹಣಾ ಸಂಸ್ಥೆಯಾದ ಟ್ರಾವೆಲ್ಸ್ ವರ್ಲ್ಡ್ (Travels world) ತನ್ನ ವಿಶಿಷ್ಟ ಸಾಧನೆಯೊಂದಿಗೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಏರೋ ಇಂಡಿಯಾ ಶೋದಲ್ಲಿ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವ ಮೂಲಕ ಟ್ರಾವೆಲ್ಸ್ ವರ್ಲ್ಡ್ ಗಮನ ಸೆಳೆಯುವ ಸಾಧನೆ ಮಾಡಿತ್ತು.
ಏರೋ ಇಂಡಿಯಾದಲ್ಲಿ 100 ವಿದೇಶಿ ಮತ್ತು 700 ಭಾರತೀಯ ಕಂಪನಿಗಳು ಸೇರಿದಂತೆ ಒಟ್ಟು 800 ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಐದು ದಿನಗಳ ಕಾರ್ಯಕ್ರಮದಲ್ಲಿ ಸ್ವದೇಶಿ ಸಾಧನಗಳು, ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು.
ಸಂಸ್ಥೆಯ ತಂಡವು ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ರಕ್ಷಣಾ ಇಲಾಖೆಯ ಸಿಬ್ಬಂದಿ, ನಾನಾ ರಾಷ್ಟ್ರಗಳ ಪ್ರತಿನಿಧಿಗಳು, ಗಣ್ಯಾತಿಗಣ್ಯರು, ಏರೋ ಇಂಡಿಯಾ ವ್ಯವಸ್ಥಾಪನೆಯ ಅಧಿಕಾರಿ ವರ್ಗದವರನ್ನು ಕರೆದೊಯ್ಯಲು ಪ್ರತಿ ದಿನ 912 ವಾಹನಗಳ ವ್ಯವಸ್ಥೆಯನ್ನು ಟ್ರಾವೆಲ್ಸ್ ವರ್ಲ್ಡ್ ವತಿಯಿಂದ ಮಾಡಲಾಗಿತ್ತು. ಇದಕ್ಕಾಗಿ ಏರೋ ಇಂಡಿಯಾದಲ್ಲಿ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಗಿತ್ತು ಎಂದು ಟ್ರಾವೆಲ್ಸ್ ವರ್ಲ್ಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಧ ಶರಶ್ಚಂದ್ರ ಸನಿಲ್ ಅವರು ತಿಳಿಸಿದ್ದಾರೆ.