ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್, ಬಿಲಿಯನೇರ್ ಉದ್ಯಮಿ, ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ವಿರುದ್ಧ ಮೊಕದ್ದಮೆ ದಾಖಲಿಸಿದೆ.
ಸಾಮಾಜಿಕ ಜಾಲ ತಾಣ ಟ್ವಿಟರ್ ಕಂಪನಿಯನ್ನು ಖರೀದಿಸುವ ೪೪ ಶತಕೋಟಿ ಡಾಲರ್ ಮೊತ್ತದ (ಅಂದಾಜು ೩೪ ಲಕ್ಷ ಕೋಟಿ ರೂ.) ಡೀಲ್ ಅನ್ನು ಎಲಾನ್ ಮಸ್ಕ್ ಇತ್ತೀಚೆಗೆ ರದ್ದುಪಡಿಸಿದ್ದರು. ಆದರೆ ಈ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಟ್ವಿಟರ್ ಆರೋಪಿಸಿದೆ.
ಟ್ವಿಟರ್ ತನ್ನಲ್ಲಿರುವ ನಕಲಿ ಖಾತೆಗಳ ಲೆಕ್ಕವನ್ನು ಸ್ಪಷ್ಟವಾಗಿ ಕೊಟ್ಟಿಲ್ಲ ಎಂದು ವಿಶ್ವದ ನಂ.೧ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಆರೋಪಿಸಿದ್ದಾರೆ. ಡೀಲ್ ಮುರಿದು ಬೀಳಲು ಇದೇ ಕಾರಣ ಎಂದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಟ್ವಿಟರ್ ಷೇರಿನ ದರ ೫೦ ಡಾಲರ್‌ನ ಎತ್ತರದಿಂದ ೩೪ ಡಾಲರ್‌ಗೆ ಕುಸಿದಿದೆ.
ಇದನ್ನೂ ಓದಿ:ಟ್ವಿಟರ್ ಖರೀದಿಸುವ 34 ಲಕ್ಷ ಕೋಟಿ ರೂ. ಡೀಲ್ ರದ್ದುಪಡಿಸಿದ ಎಲಾನ್ ಮಸ್ಕ್