ನವ ದೆಹಲಿ: ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ( United Arab Emirates-UAE) 2022-23ರಲ್ಲಿ ಹೊರಹೊಮ್ಮಿದೆ. (UAE investment in India) ಯುಎಇ 2021-22ರಲ್ಲಿ 7ನೇ ಸ್ಥಾನದಲ್ಲಿತ್ತು. ಸಿಂಗಾಪುರ ಅತಿ ಹೆಚ್ಚು ಹೂಡಿಕೆಯನ್ನು ಮಾಡಿದ ದೇಶವಾಗಿ ಹೊರಹೊಮ್ಮಿದೆ. ಮಾರಿಷಸ್ ಎರಡನೇ ಸ್ಥಾನದಲ್ಲಿದ್ದರೆ ಅಮೆರಿಕ ಮೂರನೇ ಸ್ಥಾನ ಗಳಿಸಿದೆ.
ಭಾರತದಲ್ಲಿ 2022-23ರಲ್ಲಿ ಹೆಚ್ಚು ಹೂಡಿಕೆ ಮಾಡಿರುವ ದೇಶಗಳು ಮತ್ತು ಹೂಡಿಕೆಯ ಪಟ್ಟಿ ಹೀಗಿದೆ. ಸಿಂಗಾಪುರ: 17 ಶತಕೋಟಿ ಡಾಲರ್ ಹೂಡಿಕೆ (1.39 ಲಕ್ಷ ಕೋಟಿ ರೂ.) ಮಾರಿಷಷ್ : 6 ಶತಕೋಟಿ ಡಾಲರ್ (49,200 ಕೋಟಿ ರೂ.) ಅಮೆರಿಕ: 6 ಶತಕೋಟಿ ಡಾಲರ್ ( 49,200 ಕೋಟಿ ರೂ.) ಯುಎಇ: 3.35 ಶತಕೋಟಿ ಡಾಲರ್ ( 27,470 ಕೋಟಿ ರೂ.)
ಕಳೆದೊಂದು ವರ್ಷದಲ್ಲಿ ಯುಎಇ ಭಾರತದಲ್ಲಿ ಮಾಡಿರುವ ನೇರ ಹೂಡಿಕೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಯುಎಇ ಭಾರತದ ಮೂಲಭೂತ ಸೌಕರ್ಯ ವಲಯದಲ್ಲಿ ಭಾರಿ ಹೂಡಿಕೆ ಮಾಡಲು ಬದ್ಧವಾಗಿದೆ. ಅದು ಇಲ್ಲಿನ ಮೂಲಸೌಕರ್ಯಕ್ಕೆ 6.15 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಬದ್ಧವಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲೂ ಹೂಡಿಕೆಗೆ ಮುಂದಾಗಿದೆ.
ಭಾರತ ಮತ್ತು ಯುಎಇ ದ್ವಿಪಕ್ಷೀಯ ವ್ಯಾಪಾರ ಸಹಕಾರ ಒಪ್ಪಂದವನ್ನು ಹೊಂದಿದ್ದು, ಉಭಯ ದೇಶಗಳ ನಡುವೆ ಹಲವು ಸರಕುಗಳು ಶೂನ್ಯ ಸುಂಕದಲ್ಲಿ ಸಾಗಣೆಯಾಗುತ್ತಿದೆ. ಇದು ಮಾರುಕಟ್ಟೆ ವಹಿವಾಟನ್ನು ಹೆಚ್ಚಿಸಿದೆ. ಭಾರತಕ್ಕೆ ಹರಿದು ಬರುತ್ತಿರುವ ಒಟ್ಟು ಎಫ್‌ಡಿಐನಲ್ಲಿ ಯುಎಇ ಪಾಲು 2.5% ಇದೆ.
Maiden #India–#France–#UAE trilateral #MaritimePartnershipExercise commenced #07Jun in Gulf of Oman.#INSTarkash & French Ship #FSSurcouf both with integral helos, French Rafale aircraft & UAE Navy MPA are participating in the exercise.@MarineNationale @DefenceMinIndia @IN_WNC pic.twitter.com/tnLTFaO663
— SpokespersonNavy (@indiannavy) June 8, 2023
ಭಾರತ ತನ್ನ ವಿದೇಶಿ ನೇರ ಬಂಡವಾಳ ಹೂಡಿಕೆಯ ನೀತಿಗಳನ್ನು ಉದಾರೀಕರಣಗೊಳಿಸಿದೆ. ಭಾರತದ ಹಲವಾರು ಸ್ಟಾರ್ಟಪ್‌ಗಳು ಯುಎಇನಲ್ಲಿ ವಹಿವಾಟು ವಿಸ್ತರಿಸಿವೆ. ಯುಎಇ ಕೂಡ ಡೇಟಾ, ನೆಟ್‌ವರ್ಕ್, ಲೈಸೆನ್ಸಿಂಗ್, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್ ವಲಯದ ಸ್ಟಾರ್ಟಪ್‌ಗಳನ್ನು ನೆರವು ಕೊಟ್ಟು ಉತ್ತೇಜಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರುಪೇ ಪ್ರಿಪೇಯ್ಡ್ ಫೊರೆಕ್ಸ್ ಕಾರ್ಡ್ (Rupay Prepaid Forex card) ಅನ್ನು ಬಿಡುಗಡೆ ಮಾಡಲು ಭಾರತದಲ್ಲಿನ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಇದನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳ ಎಟಿಎಂ, ಪಿಒಎಸ್ ಮೆಶೀನ್‌ಗಳಲ್ಲಿ, ಆನ್‌ಲೈನ್ ಹಣ ವರ್ಗಾವಣೆಗೆ, ಶಾಪಿಂಗ್‌ಗೆ ಬಳಸಬಹುದು. ರುಪೇ ಡೆಬಿಟ್ ಕಾರ್ಡ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳ ಜತೆಗೆ ಹೆಚ್ಚುವರಿಯಾಗಿ ರುಪೇ ಫೊರೆಕ್ಸ್ ಕಾರ್ಡ್ ಬಿಡುಗಡೆಯಾಗಲಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಇದನ್ನು ಬಳಸಬಹುದು. ಜಗತ್ತಿನಾದ್ಯಂತ ರುಪೇ ಕಾರ್ಡ್ ಬಳಕೆ ಹೆಚ್ಚಿಸಲಿದೆ. ಆರ್‌ಬಿಐ ಗವರ್ವರ್ ಶಕ್ತಿಕಾಂತ ದಾಸ್ ಅವರು ಜೂನ್ 8ರ ಹಣಕಾಸು ನೀತಿ ಪರಾಮರ್ಶೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಭಾರತೀಯ ಬ್ಯಾಂಕ್‌ಗಳು ಬಿಡುಗಡೆ ಮಾಡುತ್ತಿರುವ ರುಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು (RuPay Debit and Credit cards) ದ್ವಿಪಕ್ಷೀಯ ವ್ಯವಸ್ಥೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸ್ವೀಕೃತಿಯಾಗುತ್ತಿದೆ. ಅಂತಾರಾಷ್ಟ್ರೀಯ ಕಾರ್ಡ್ ಸಿಸ್ಟಮ್‌ಗಳಲ್ಲಿ ಜನಪ್ರಿಯವಾಗುತ್ತಿವೆ. ಭಾರತೀಯರಿಗೆ ತವರಿನಲ್ಲಿ ಹಾಗೂ ವಿದೇಶಗಳಲ್ಲಿ ಪ್ರಯಾಣ ಮಾಡುವಾಗ ಹೆಚ್ಚಿನ ಅನುಕೂಲಕ್ಕಾಗಿ ರುಪೇ ಪ್ರಿಪೇಯ್ಡ್ ಫೊರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ ಎಂದು ಆರ್‌ಬಿಐ ವಿವರಿಸಿದೆ.
ಆರ್‌ಬಿಐನ ಪೇಮೆಂಟ್ಸ್ ವಿಶನ್ ಡಾಕ್ಯುಮೆಂಟ್ 2025 (RBI Payments vision document 2025) ಈಗಾಗಲೇ ರಚನೆಯಾಗಿದೆ. ಇದರ ಅಡಿಯಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಅನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಲು ನೀಲನಕ್ಷೆ ಮತ್ತು ಕಾರ್ಯತಂತ್ರವನ್ನು ಹೆಣೆಯಲಾಗಿದೆ. ಭೂತಾನ್, ಸಿಂಗಾಪುರ, ನೇಪಾಳ, ಯುಎಇ ಜತೆಗೆ ಕೋ-ಬ್ರಾಂಡಿಂಗ್ ಇಲ್ಲದೆಯೇ ರುಪೇ ಕಾರ್ಡ್ ಬಳಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ದೇಶಗಳಿಗೆ ಹೋದಾಗ ಸಲೀಸಾಗಿ ರುಪೇ ಕಾರ್ಡ್ ಮೂಲಕ ಹಣ ವರ್ಗಾಯಿಸಬಹುದು. ಶಾಪಿಂಗ್ ಮಾಡಬಹುದು. ಭವಿಷ್ಯದ ದಿನಗಳಲ್ಲಿ ಎನ್‌ಪಿಸಿಐ ಇಂಟರ್‌ನ್ಯಾಶನಲ್ ಪೇಮೆಂಟ್ಸ್ ಲಿಮಿಟೆಡ್ (NPCI International payments limited) ಜೆತೆಗ ಪಾಲುದಾರಿಕೆಯಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಅನ್ನು ವಿದೇಶದಲ್ಲಿ ವ್ಯಾಪಕವಾಗಿ ಬಳಸಲು ಹಾದಿ ಸುಗಮಗೊಳಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ಇದನ್ನೂ ಓದಿ : Single window | 2491 ಕೋಟಿ ರೂ. ಬಂಡವಾಳ ಹೂಡಿಕೆಯ 55 ಯೋಜನೆಗಳಿಗೆ ಅನುಮತಿ: ಸಿಗುವ ಜಾಬ್ ಎಷ್ಟು ಗೊತ್ತಾ?