ಕ್ಯಾಲಿಫೋರ್ನಿಯಾ: ಇಂಟರ್‌ನೆಟ್ ಸರ್ಚ್ ಎಂಜಿನ್ ಗೂಗಲ್ 12,000 ಉದ್ಯೋಗಿಗಳನ್ನು ಈಗಾಗಲೇ ವಜಾಗೊಳಿಸಿದೆ. ಆದರೆ ಇದರಿಂದ ಕಂಪನಿಯ ಹೂಡಿಕೆದಾರರು (Tech Layoffs) ಸಮಾಧಾನಗೊಂಡಿಲ್ಲ. ಕೆಲ ಹೂಡಿಕೆದಾರರು 1.5 ಲಕ್ಷ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವಂತೆ ಸಿಇಒ ಸುಂದರ್ ಪಿಚೈ (Google Ceo Sundar Pichai) ಅವರನ್ನು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಗೂಗಲ್ ಕಂಪನಿಯ ಹೂಡಿಕೆದಾರರಲ್ಲೊಬ್ಬರಾದ ಕ್ರಿಸ್ಟೋಫರ್ ಹಾನ್ ಅವರು, ಕಂಪನಿಯ ವೆಚ್ಚಗಳಿಗೆ ತಕ್ಕಂತೆ 1.5 ಲಕ್ಷ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಸಲಹೆ ನೀಡಿದ್ದರು ಎಂದು ವರದಿಯಾಗಿದೆ. ಕ್ರಿಸ್ಟೋಫರ್ ಹಾನ್ ಅವರು ಗೂಗಲ್‌ನ ಮಾತೃಸಂಸ್ಥೆ ಅಲ್ಫಬೆಟ್‌ನ ಉದ್ಯೋಗಿಗಳಲ್ಲಿ 20% ಮಂದಿಯನ್ನು ಮನೆಗೆ ಕಳಿಸಬೇಕು ಎಂದು ಬಯಸಿದ್ದರು ಎಂದು ವರದಿಯಾಗಿದೆ. ಇತ್ತೀಚೆಗೆ 12,000 ಉದ್ಯೋಗ ಕಡಿತದ ಮೂಲಕ 6% ಜಾಬ್ ಕಟ್ ಆದಂತಾಗಿದೆ. ಹೀಗಿದ್ದರೂ, ಒಟ್ಟಾರೆ 1.5 ಲಕ್ಷ ಉದ್ಯೋಗ ಕಡಿತ ಆಗಬೇಕು ಎಂದು ಹೂಡಿಕೆದಾರರು ಬಯಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಗೂಗಲ್‌ನಲ್ಲಿ ಹೊಸಬರಿಗೆ ಉದ್ಯೋ ಕಡಿತ ಹೆಚ್ಚಿನ ಸಂಖ್ಯೆಯಲ್ಲಿ ತಟ್ಟಿದೆ. ವಾರ್ಷಿಕ 8 ಕೋಟಿ ರೂ.ಗೂ ಹೆಚ್ಚು ವೇತನ ಪಡೆಯುತ್ತಿದ್ದ ಕೆಲ ಹಿರಿಯ ಉದ್ಯೋಗಿಗಳೂ ಕೆಲಸ ಕಳೆದುಕೊಂಡಿದ್ದಾರೆ. ಅನೇಕ ಮಂದಿಯ ಜವಾಬ್ದಾರಿ ಮತ್ತು ವೇತನವನ್ನು ಕಡಿತಗೊಳಿಸಲಾಗಿದೆ.