ನವ ದೆಹಲಿ: ಹೊಸ ಮನೆ ಕಟ್ಟುವವರಿಗೆ 2022-23ರ ಅವಧಿಯ ಬಜೆಟ್ನಲ್ಲಿ (Union Budget 2023) ಶುಭ ಸುದ್ದಿ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗಾಗಿ 79 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದು ಶೇಕಡಾ 66 ಹೆಚ್ಚಳ ಎಂಬುದಾಗಿ ಹೇಳಿದ್ದಾರೆ.
2022-23ನೇ ಬಜೆಟ್ನಲ್ಲಿ ನಿರ್ಮಲಾ ಸೀತರಾಮನ್ ಅವರು ಎಲ್ಲರಿಗೂ ಮನೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ 48 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದರು. ಇದೇ ವೇಳೆ ಅವರು ಇದುವರೆಗೆ 80 ಲಕ್ಷ ಮಂದಿಗೆ ಯೋಜನೆಯ ಲಾಭ ಲಭಿಸಿದೆ ಎಂದು ಹೇಳಿದರು.
ಇದನ್ನೂ ಓದಿ : Union Budget 2023: ನಿರ್ಮಲಾ ಸೀತಾರಾಮನ್ ತಂಡದಲ್ಲಿ ಇರುವವರು ಇವರೇ ನೋಡಿ
ಕೇಂದ್ರ ಸರಕಾರ ನೀಡಿರುವ 2022ರ ಸೆಪ್ಟೆಂಬರ್ 29ರಂದು ನೀಡಿದ ಮಾಹಿತಿ ಪ್ರಕಾರ 2 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.