Site icon Vistara News

Budget 2023 : ಕೇಂದ್ರ ಬಜೆಟ್‌ ಅಧಿವೇಶನ ಮಂಗಳವಾರ ಆರಂಭ, ಆರ್ಥಿಕ ಸಮೀಕ್ಷೆ ಮಂಡನೆ

cash

ನವ ದೆಹಲಿ: ಫೆಬ್ರವರಿ 1ರಂದು ಬಹು ನಿರೀಕ್ಷಿತ 2023-24ರ ಸಾಲಿನ ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಇದಕ್ಕೂ ಮುನ್ನ ಸಂಸತ್ತಿನಲ್ಲಿ ಮಂಗಳವಾರ (ಜನವರಿ 31) ೨೦೨೩-೨೪ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ. ಇದರೊಂದಿಗೆ ಬಜೆಟ್‌ ಅಧಿವೇಶನ ಶುರುವಾಗಲಿದೆ. ಆದಾಯ ತೆರಿಗೆ ದರಗಳು ಮತ್ತು ಆದಾಯ ತೆರಿಗೆ ಶ್ರೇಣಿಗಳಲ್ಲಿ ಕೆಲ ಬದಲಾವಣೆಗಳು ಆಗಬಹುದು ಎಂಬ ನಿರೀಕ್ಷೆ ಜನ ಸಾಮಾನ್ಯರಲ್ಲಿದೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೊನೆಯ ಪೂರ್ಣಪ್ರಮಾಣದ ಬಜೆಟ್‌ ಇದಾಗಿರುವುದರಿಂದ ಜನಪ್ರಿಯ ಬಜೆಟ್‌ ಮಂಡನೆಯಾಗಬಹುದು ಎನ್ನುತ್ತಾರೆ ವಿಶ್ಲೇಷಕರು.

ವಿದ್ಯುತ್‌ ಬಿಲ್‌ಗೆ ಸಬ್ಸಿಡಿ, ಬೆಲೆ ಏರಿಕೆಯಿಂದ ರಿಲೀಫ್‌ ಅನ್ನು ಜನ ಸಾಮಾನ್ಯರು ಬಯಸುತ್ತಿದ್ದಾರೆ. ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ಬಿಸಿನೆಸ್‌ ಸಮುದಾಯ ಅನಿಶ್ಚಿತತೆ ಎದುರಿಸುತ್ತಿದೆ. ಹೀಗಾಗಿ ಉದ್ದಿಮೆ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯೂ ಇದೆ.

ವೇತನದಾರರು ಆದಾಯ ತೆರಿಗೆ ವಿನಾಯಿತಿಯ ಮಿತಿ ವಿಸ್ತರಣೆ, ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಈಗಿನ 50,000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಕೆ ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಸಣ್ಣ ತೆರಿಗೆದಾರರಿಗೆ ರಿಲೀಫ್‌ ನೀಡಬೇಕು ಎಂದು ಕೈಗಾರಿಕಾ ವಲಯದ ಸಂಘಟನೆ ಫಿಕ್ಕಿ ಒತ್ತಾಯಿಸಿದೆ.

Exit mobile version