Site icon Vistara News

Urban cooperative banks : ನಗರ ಸಹಕಾರಿ ಬ್ಯಾಂಕ್‌ಗಳ ಸುಧಾರಣೆಗೆ ಆರ್‌ಬಿಐ ಹೊಸ ನಿಯಮ ಜಾರಿ, ಪರಿಣಾಮವೇನು?

cash

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೋಮವಾರ ನಗರ ಸಹಕಾರಿ ಬ್ಯಾಂಕ್‌ಗಳ ಸುಧಾರಣೆಗೆ ಮಹತ್ವದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ( Urban cooperative banks ) ನಗರ ಸಹಕಾರಿ ಬ್ಯಾಂಕ್‌ಗಳ ಸ್ಟ್ಯಾಂಡರ್ಡ್‌ ಅಸೆಟ್‌ಗಳಿಗೆ ಪ್ರಾವಿಶನಿಂಗ್‌ ಕುರಿತ ಹೊಸ ನಿಯಮಾಳಿಗಳನ್ನು (ಮುನ್ನೇರ್ಪಾಟು) ಜಾರಿಗೊಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರ್‌ಬಿಐ, ನಗರ ಸಹಕಾರಿ ಬ್ಯಾಂಕ್‌ಗಳನ್ನು ನಿಯಂತ್ರಕ ಉದ್ದೇಶಗಳಿಗೆ 1,2,3 ಮತ್ತು 4 ಎಂದು ನಾಲ್ಕು ಸ್ತರಗಳಲ್ಲಿ ವರ್ಗೀಕರಿಸಿತ್ತು. ಇದಕ್ಕೂ ಮುನ್ನ 1 ಮತ್ತು 2 ಸ್ತರಗಳು ಮಾತ್ರ ಇತ್ತು.

ಇದೀಗ ಎರಡನೇ ಹಂತದಲ್ಲಿ ನಗರ ಸಹಕಾರಿ ಬ್ಯಾಂಕ್‌ಗಳ ಪ್ರಾವಿಶನ್‌ ನಿಯಮಗಳನ್ನು ಸುಧಾರಿಸಿದೆ. ಹಾಗಾದರೆ ಸ್ಟ್ಯಾಂಡರ್ಡ್‌ ಅಸೆಟ್‌ಗಳಲ್ಲಿ ಯಾವುದು ಬರುತ್ತದೆ? ಪ್ರಾವಿಶನಿಂಗ್‌ ಎಂದರೇನು? ನೋಡೋಣ.

ಬ್ಯಾಂಕ್‌ಗಳಲ್ಲಿ ಪ್ರಾವಿಶನಿಂಗ್‌ ಎಂದರೆ ಸಾಲ ಮರು ಪಾವತಿಯಾಗುವುದು ಕಷ್ಟವಾಗುತ್ತಿದ್ದು, ಬ್ಯಾಂಕಿಗೆ ನಷ್ಟವಾಗಬಹುದು ಎಂದಿದ್ದರೆ, ಅಂಥ ಸಂಭವನೀಯ ನಷ್ಟಕ್ಕೆ ಪ್ರತಿಯಾಗಿ ನಿರ್ದಿಷ್ಟ ಮೊತ್ತವನ್ನು ಲಾಭದಿಂದ ತೆಗೆದು ಪ್ರತ್ಯೇಕವಾಗಿ ಇಡುವುದು. ಇದನ್ನು ಪ್ರಾವಿಶನಿಂಗ್‌ ( ಮುನ್ನೇರ್ಪಾಟು) ಎನ್ನುತ್ತಾರೆ. ಇದರಿಂದ ಬ್ಯಾಂಕಿನ ಬ್ಯಾಲೆನ್ಸ್‌ ಶೀಟ್‌ ಸ್ವಚ್ಛವಾಗುತ್ತದೆ. ಬ್ಯಾಂಕಿನ ಆರ್ಥಿಕ ಆರೋಗ್ಯ ಚೆನ್ನಾಗಿರುತ್ತದೆ. ತೆರಿಗೆ ಸಂಬಂಧಿಸಿಯೂ ಬ್ಯಾಂಕಿಗೆ ಅನುಕೂಲವಾಗತ್ತದೆ.

ಕೃಷಿ ಮತ್ತು ಸಣ್ಣ ಉದ್ದಿಮೆಗೆ ನೀಡುವ ಸಾಲಗಳು ಸ್ಟ್ಯಾಂಡರ್ಡ್‌ ಅಸೆಟ್‌ ವರ್ಗಕ್ಕೆ ಬರುತ್ತದೆ. ಇದಕ್ಕೆ ಫಂಡ್‌ನ 0.25% ಮೊತ್ತವನ್ನು ಪ್ರಾವಿಶನಿಂಗ್‌ ಇಡಲು ಆರ್‌ಬಿಐ ನಗರ ಸಹಕಾರಿ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಕಮರ್ಶಿಯಲ್‌ ರಿಯಲ್‌ ಎಸ್ಟೇಟ್‌ (commercial real estate) ವಲಯಕ್ಕೆ ನೀಡುವ ಮುಂಗಡದಲ್ಲಿ ಫಂಡ್‌ನ 1% ಮೊತ್ತವನ್ನು ಪ್ರಾವಿಶನ್‌ ಇಡಲು ಸೂಚಿಸಲಾಗಿದೆ. ಕಮರ್ಶಿಯಲ್‌ ರಿಯಲ್‌ ಎಸ್ಟೇಟ್-ರೆಸಿಡೆನ್ಷಿಯಲ್‌ ಹೌಸಿಂಗ್‌ ಸೆಕ್ಟರ್‌ ಆಗಿದ್ದರೆ ಅನುಕ್ರಮವಾಗಿ 0.75% ಮತ್ತು 0.4% ಪ್ರಾವಿಶನ್‌ಗೆ ಸೂಚಿಸಲಾಗಿದೆ.

ಆರ್‌ಬಿಐ 100 ಕೋಟಿ ರೂ. ತನಕ ಠೇವಣಿ ಇರುವ ನಗರ ಸಹಕಾರಿ ಬ್ಯಾಂಕ್‌ಗಳನ್ನು ಮೊದಲನೇ ಸ್ತರದ (Tier 1) ನಗರ ಸಹಕಾರಿ ಬ್ಯಾಂಕ್‌ಗಳೆಂದು ವರ್ಗೀಕರಿಸಿದೆ. ಎರಡನೇ ಸ್ತರದಲ್ಲಿ 100-1000 ಕೋಟಿ ರೂ. ಠೇವಣಿ, ಮೂರನೇ ಸ್ತರದಲ್ಲಿ 1000-10000 ಕೋಟಿ ರೂ, ಹಾಗೂ ನಾಲ್ಕನೇ ಸ್ತರದಲ್ಲಿ 10,000 ಕೋಟಿ ರೂ.ಗಿಂತ ಮೇಲ್ಪಟ್ಟ ಠೇವಣಿಗಳು ಇರುವ ಬ್ಯಾಂಕ್‌ಗಳನ್ನು ವರ್ಗೀಕರಿಸಲಾಗಿದೆ.

Exit mobile version