ವಾಷಿಂಗ್ಟನ್: ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರವನ್ನು ಹೆಚ್ಚಿಸಿ ಪರದಾಡುವಂತಾಗಿರುವ ಅಮೆರಿಕದ ಆರ್ಥಿಕತೆ ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ನಿರೀಕ್ಷೆಗೂ ಮೀರಿ 3.2%ರ ಬೆಳವಣಿಗೆಯನ್ನು (US Economy) ದಾಖಲಿಸಿದೆ.
ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕತೆಯ ಪ್ರಗತಿಗೆ ಸರಕು ಮತ್ತು ಸೇವೆಗಳ ಪೂರೈಕೆಯಲ್ಲಿ ಹೆಚ್ಚಳ ಕಾರಣ ಎನ್ನಲಾಗಿದೆ. ಜನವರಿ-ಜೂನ್ ಅವಧಿಯಲ್ಲಿ ಇದು ಕುಸಿದಿತ್ತು.
ಹೀಗಿದ್ದರೂ, ಈಗಲೂ ಹಲವು ಆರ್ಥಿಕ ತಜ್ಞರ ಪ್ರಕಾರ ಮುಂದಿನ ವರ್ಷ ಅಮೆರಿಕದ ಆರ್ಥಿಕತೆ ಹಿಂಜರಿತಕ್ಕೆ ಸಿಲುಕಲಿದೆ. 1980ರಿಂದೀಚೆಗಿನ ಅಧಿಕ ಹಣದುಬ್ಬರವನ್ನು ತಗ್ಗಿಸಲು ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಹೆಚ್ಚಿಸಿದೆ. ಇದರ ಪರಿಣಾಮ ಜಿಡಿಪಿ ಪ್ರಗತಿ ಮುಗ್ಗರಿಸಿ ಆರ್ಥಿಕ ಹಿಂಜರಿತ ಆಗಬಹುದು ಎಂದು ನಿರೀಕ್ಷಿಸಲಾಗಿದೆ.