ನ್ಯೂಯಾರ್ಕ್: ಅಮೆರಿಕದಲ್ಲಿ ಹಣದುಬ್ಬರ ಇಳಿಕೆಯಾಗುವ (US Stocks) ಲಕ್ಷಣ ತೋರಿಸಿದ್ದು, ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಜಿಗಿದಿವೆ. ಹೂಡಿಕೆದಾರರು ಉತ್ಸಾಹದಲ್ಲಿ ಷೇರುಗಳನ್ನು ಖರೀದಿಸಿದ್ದಾರೆ.
ಹಣದುಬ್ಬರ ಇಳಿಕೆಯಾಗಿರುವುದರಿಂದ ಉತ್ಪಾದನೆ ಮತ್ತು ಕಾರ್ಪೊರೇಟ್ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಉಂಟಾಗಿದೆ. ಡವ್ ಜಾನ್ಸ್ ಇಂಡಸ್ಟ್ರಿಯಲ್ ಅವರೇಜ್ ಸೂಚ್ಯಂಕ 0.2% ಏರಿಕೆ ದಾಖಲಿಸಿತು. 33,592 ಅಂಕಗಳಿಗೆ ಜಿಗಿಯಿತು.
ಎಸ್ &ಪಿ 500 ಸೂಚ್ಯಣಕ 0.9% ಏರಿಕೆ ದಾಖಲಿಸಿತು. 3,991ಕ್ಕೆ ಸ್ಥಿರವಾಯಿತು. ನಾಸ್ ಡಾಕ್ ಕಂಪೋಸಿಟ್ ಇಂಡೆಕ್ಸ್ 1.5% ಹೆಚ್ಚಳ ಕಂಡಿತು. 11,358ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ವಾಲ್ ಮಾರ್ಟ್ ತ್ರೈಮಾಸಿಕ ಆದಾಯ ಹೆಚ್ಚಳವಾಗಿರುವುದು ಕೂಡ ಷೇರು ಪೇಟೆಯನ್ನು ಉಲ್ಲಸಿತಗೊಳಿಸಿತು.
ಅಮೆರಿಕದ ಷೇರು ಸೂಚ್ಯಂಕಗಳ ಏರಿಳಿತ ಭಾರತ ಸೇರಿದಂತೆ ಜಾಗತಿಕ ಷೇರು ಸೂಚ್ಯಂಕಗಳ ಚಲನವಲನಗಳ ಮೇಲೆಯೂ ಪ್ರಭಾವ ಬೀರುತ್ತವೆ.