ನವ ದೆಹಲಿ: ಭಾರತದಲ್ಲಿ 2025ರ ಮಾರ್ಚ್ ಬಳಿಕ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಯುಎಸ್‌ಬಿ ಟೈಪ್ ಸಿ ( USB Type-C Charger) ಚಾರ್ಜರ್ ಕಡ್ಡಾಯವಾಗಲಿದೆ.
ಈ ಸಂಬಂಧ ಡಿವೈಸ್ ಉತ್ಪಾದಕರುಗಳಿಗೆ ಗಡುವು ನೀಡಲಾಗಿದೆ. ಸರ್ಕಾರ ಸಾಮಾನ್ಯ ಚಾರ್ಜರ್ ನಿರ್ದೇಶನ ನೀತಿಯನ್ನು ಬಿಡುಗಡೆಗೊಳಿಸಿದೆ. ಅಂತಾರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ಬದಲಾಗಬೇಕಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
2025ರ ಮಾರ್ಚ್ ಗಡುವು ಸ್ಮಾರ್ಟ್ ಫೋನ್‌ಗಳಿಗೆ ಅನ್ವಯವಾಗಲಿದೆ. ಲ್ಯಾಪ್ ಟಾಪ್ ಉತ್ಪಾದಕರಿಗೆ 2026ರ ಮಾರ್ಚ್ ಗಡುವು ಇದೆ.
ಮೊಬೈಲ್, ಟಾಬ್ಲೆಟ್ಸ್, ಸ್ಮಾರ್ಟ್‌ವಾಚಸ್, ವೈರ್‌ಲೆಸ್ ಹೆಡ್‌ಫೋನ್ಗೆ ಏಕರೂಪದ ಚಾರ್ಜರ್ ಜಾರಿಗೊಳಿಸಲು ಚಿಂತನೆ ನಡೆದಿದೆ.