Site icon Vistara News

Adani group: ಅದಾನಿ ಬಗ್ಗೆ ವೈಭವೀಕರಿಸಲು ಸಿಬ್ಬಂದಿ ಬಳಕೆ: ಹಿಂಡೆನ್‌ಬರ್ಗ್‌ ಬಳಿಕ ವಿಕಿಪೀಡಿಯಾ ಎಡಿಟರ್‌ ಆರೋಪ

wikipedia

ನವ ದೆಹಲಿ: ಕಳೆದ ಹಲವಾರು ವರ್ಷಗಳಿಂದ ಅದಾನಿ ಗ್ರೂಪ್‌, (Adani group) ಅದಾನಿ ಹಾಗೂ ಕುಟುಂಬದವರ ಬಗ್ಗೆ ವೈಭವೀಕರಿಸಲು ಕಂಪನಿಯ ಸಿಬ್ಬಂದಿಯನ್ನು ಬಳಸಲಾಗಿದೆ ಎಂದು ವಿಕಿಪೀಡಿಯಾ (wikipedia) ಎಡಿಟರ್‌ಗಳ ಬಳಗ ಆರೋಪಿಸಿದೆ. ವಿಕಿಪೀಡಿಯಾದಲ್ಲಿ ಇಂಥ ಲೇಖನಗಳನ್ನು, ಮಾಹಿತಿಗಳನ್ನು ಪ್ರಕಟಿಸಲು ಹಾಗೂ ತಿರುಚಲು ಯತ್ನಗಳು ನಡೆದಿತ್ತು. ಆಗ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ವಿಕಿಪೀಡಿಯಾ ಎಡಿಟರ್‌ಗಳು ಆರೋಪಿಸಿದ್ದಾರೆ.

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ಬಳಿಕ ಇದೀಗ ವಿಕಿಪೀಡಿಯಾದ ಎಡಿಟರ್‌ಗಳು ಅದಾನಿ ಗ್ರೂಪ್‌ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಜನವರಿ 24ರಂದು ಹಿಂಡೆನ್‌ಬರ್ಗ್‌ ವರದಿ ಪ್ರಕಟವಾದ ಬಳಿಕ ಅದಾನಿ ಷೇರುಗಳ ಮೌಲ್ಯದಲ್ಲಿ 11 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಅದಾನಿ ಗ್ರೂಪ್‌ ವಿಕಿಪೀಡಿಯಾದಲ್ಲಿ ಕಂಪನಿಯನ್ನು ವೈಭವೀಕರಿಸುವ ಲೇಖನಗಳನ್ನು ಪ್ರಕಟಿಸಲು ಯತ್ನಿಸಿದೆ. ಹೀಗಾಗಿ 40ಕ್ಕೂ ಹೆಚ್ಚು ಪದಗಳನ್ನು ನಿಷೇಧಿಸಲಾಗಿತ್ತು. ಹಣ ಪಡೆದು ಇಂಥ 9 ಲೇಖನಗಳನ್ನು ಪ್ರಕಟಿಸಲು ಅಥವಾ ತಿರುಚಲು ಯತ್ನಿಸಲಾಗಿತ್ತು. ಒಬ್ಬರು ಕಂಪನಿಯ ಐಪಿ ಅಡ್ರೆಸ್‌ ಬಳಸಿ ಅದಾನಿ ಗ್ರೂಪ್‌ ಕುರಿತ ಇಡೀ ಲೇಖನವನ್ನು ತಿರುಚಿ ಬರೆದಿದ್ದರು ಎಂದು ವಿಕಿಪೀಡಿಯಾ ಎಡಿಟರ್‌ಗಳ ಬಳಗ ತಿಳಿಸಿದೆ. ವಿಕಿಪೀಡಿಯಾ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊ ಮೂಲದ ಸಂಸ್ಥೆಯಾಗಿದೆ. ವಿಕಿಪೀಡಿಯ ಫೌಂಡೇಷನ್‌ ಈ ವೆಬ್‌ಸೈಟ್‌ ಅನ್ನು ನಡೆಸುತ್ತಿದೆ.

Exit mobile version