ಬೆಂಗಳೂರು: ಚೆನ್ನೈ-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈಸ್ಪೀಡ್ ರೈಲಿನ (Vande Bharat) ಪ್ರಾಯೋಗಿಕ ಸಂಚಾರ ಆರಂಭವಾಗಿದೆ.
ಚೆನ್ನೈನ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಸೋಮವಾರ ಬೆಳಗ್ಗೆ ಚೆನ್ನೈನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಶುರುವಾಯಿತು. ವಂದೇ ಭಾರತ್ ಸೇವೆಯ ಐದನೇ ಮಾರ್ಗ ಇದಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 75-77 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, 504 ಕಿ.ಮೀ ದೂರವನ್ನು 6 ಗಂಟೆ ಮೂವತ್ತು ನಿಮಿಷಗಳಲ್ಲಿ ತಲುಪಲಿದೆ.
ನವೆಂಬರ್ 11ರಂದು ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಸೇವೆ ಉದ್ಘಾಟನೆಯಾಗಲಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ ಇದು ಸಂಚರಿಸಲಿದೆ. ಪ್ರವಾಸೋದ್ಯಮ ವೃದ್ಧಿಗೆ ನೆರವಾಗುವ ನಿರೀಕ್ಷೆ ಇದೆ.
ವೇಳಾಪಟ್ಟಿ ಇಂತಿದೆ: ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50 ಕ್ಕೆ ಹೊರಡಲಿದೆ. ಮೈಸೂರಿಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಟೇಷನ್‌ನಲ್ಲಿ ನಿಲ್ಲಲಿದೆ. ಮೈಸೂರಿನಿಂದ ಮಧ್ಯಾಹ್ಮ 1.05ಕ್ಕೆ ಹೊರಟು ಬೆಂಗಳೂರಿಗೆ 2.25ಕ್ಕೆ ಹಾಗೂ ಚೆನ್ನೈಗೆ 7.35ಕ್ಕೆ ತಲುಪಲಿದೆ.