ಬೆಂಗಳೂರು: ಚೆನ್ನೈನಿಂದ ಇಂದು ಬೆಳಗ್ಗೆ ಪ್ರಾಯೋಗಿಕ ಸಂಚಾರದ ಪ್ರಯುಕ್ತ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈಸ್ಪೀಡ್ ರೈಲು ಮೈಸೂರಿಗೆ ತಲುಪಿದೆ.
ದಕ್ಷಿಣ ಭಾರತದ ಮೊಟ್ಟ ಮೊದಲ ಹೈ ಸ್ಪೀಡ್ ರೈಲು ಇದಾಗಿದೆ. ರೈಲ್ವೆ ಇಲಾಖೆ ಈ ಕುರಿತ ವಿಡಿಯೊವನ್ನು ಟ್ವೀಟ್ ಮಾಡಿದೆ. ನವೆಂಬರ್ 11ರಂದು ಈ ಹೈಸ್ಪೀಡ್ ರೈಲು ಸಂಚಾರ ಈ ಮಾರ್ಗದಲ್ಲಿ ಉದ್ಘಾಟನೆಯಾಗಲಿದೆ.
ನವೆಂಬರ್ 11ರಂದು ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಸೇವೆ ಉದ್ಘಾಟನೆಯಾಗಲಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ ಇದು ಸಂಚರಿಸಲಿದೆ. ಪ್ರವಾಸೋದ್ಯಮ ವೃದ್ಧಿಗೆ ನೆರವಾಗುವ ನಿರೀಕ್ಷೆ ಇದೆ.
ವೇಳಾಪಟ್ಟಿ ಇಂತಿದೆ: ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50 ಕ್ಕೆ ಹೊರಡಲಿದೆ. ಮೈಸೂರಿಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಟೇಷನ್‌ನಲ್ಲಿ ನಿಲ್ಲಲಿದೆ. ಮೈಸೂರಿನಿಂದ ಮಧ್ಯಾಹ್ಮ 1.05ಕ್ಕೆ ಹೊರಟು ಬೆಂಗಳೂರಿಗೆ 2.25ಕ್ಕೆ ಹಾಗೂ ಚೆನ್ನೈಗೆ 7.35ಕ್ಕೆ ತಲುಪಲಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ವಂದೇ ಎಕ್ಸ್‌ಪ್ರೆಸ್ ರೈಲಿನ ಆಗಮನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.