Site icon Vistara News

Vehicle sales : 2022-23ರಲ್ಲಿ 38.9 ಲಕ್ಷ ವಾಹನ ಮಾರಾಟ, 26% ಹೆಚ್ಚಳ

automobile sales

#image_title

ನವ ದೆಹಲಿ: ಭಾರತದಲ್ಲಿ 2022-23ರಲ್ಲಿ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ (Passenger vehicles) 26.7% ಏರಿಕೆಯಾಗಿದೆ ಎಂದು ಆಟೊಮೊಬೈಲ್‌ ವಲಯದ ಪ್ರಾತಿನಿಧಿಕ ಸಂಸ್ಥೆಯಾದ ಸೊಸೈಟಿ ಆಫ್‌ ಇಂಡಿಯನ್‌ ಆಟೊಮೊಬೈಲ್‌ ಮಾನ್ಯುಫಾಕ್ಚರರ್ಸ್‌ (SIAM) ತಿಳಿಸಿದೆ. 38,90,114 ವಾಹನಗಳು 2022-23ರಲ್ಲಿ ಮಾರಾಟವಾಗಿವೆ. 2021-22ರಲ್ಲಿ 30,69,523 ವಾಹನಗಳು ಮಾರಾಟವಾಗಿವೆ.

ಚಿಪ್‌ ಪೂರೈಕೆಯಲ್ಲಿ ಸುಧಾರಣೆ, ಅಧಿಕ ಆದಾಯ, ಬೇಡಿಕೆಯ ಪರಿಣಾಮ ವಾಹನ ಮಾರಾಟದಲ್ಲಿ ಪ್ರಗತಿ ದಾಖಲಾಗಿದೆ. ದೇಶೀಯ ಸಗಟು ಪ್ಯಾಸೆಂಜರ್‌ ವೆಹಿಕಲ್‌ ಮಾರಾಟ 4.7% ಬೆಳವಣಿಗೆ ದಾಖಲಿಸಿದೆ. (2,92,030)

ಕಳೆದ ಮಾರ್ಚ್‌ನಲ್ಲಿ 12,90,553 ದ್ವಿ ಚಕ್ರವಾಹನಗಳು ಮಾರಾಟವಾಗಿವೆ. ಫೆಬ್ರವರಿಯಲ್ಲಿ 11,98,825 ದ್ವಿ ಚಕ್ರ ವಾಹನಗಳು ಮಾರಾಟವಾಗಿತ್ತು. ಮಾರುತಿ ಸುಜುಕಿ, ಮಹೀಂದ್ರಾ & ಮಹೀಂದ್ರಾ ಮತ್ತು ಹೀರೊ ಮೋಟೊಕಾರ್ಪ್‌ ಇತ್ತೀಚೆಗೆ ದರವನ್ನು ಏರಿಸಿವೆ.

ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿರುವುದರಿಂದ 2022-23ರಲ್ಲಿ ವಾಹನಗಳ ಮಾರಾಟದಲ್ಲಿ ಗಣನೀಯ ಚೇತರಿಕೆ ಉಂಟಾಗಿತ್ತು. ಹೊಸ ಮಾದರಿಯ ವಾಹನಗಳೂ ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಯಾಗಿತ್ತು.

Exit mobile version