Site icon Vistara News

Viral News: 1 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.40 ತೆರಿಗೆ! 1992ರ ಇನ್‌ಕಮ್ ಟ್ಯಾಕ್ಸ್ ಸ್ಲ್ಯಾಬ್ ವೈರಲ್

Viral News, 1992 income Tax slab information goes viral on social media

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ (Union Budget 2023) ಮಂಡಿಸಿದ್ದಾರೆ. ಈ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಜನಸಾಮಾನ್ಯರು, ಮಧ್ಯಮ ವರ್ಗದವರು, ವೇತನದಾರರು ತಮಗೆ ಯಾವ ರೀತಿಯ ಲಾಭವಾಗಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ವ್ಯಾಪಾರೋದ್ಯಮಿಗಳು, ಕೈಗಾರಿಕೋದ್ಯಮಿಗಳು ಕೂಡ ತಮ್ಮದೇ ಆದ ಯೋಜನೆಗಳನ್ನು ಹಾಕುತ್ತಿದ್ದಾರೆ. ಇದರ ಮಧ್ಯೆಯೇ, ಅತ್ತ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ 1992ರ ಬಜೆಟ್‌ನಲ್ಲಿ ಘೋಷಿಸಲಾದ ಹೊಸ ಆದಾಯ ತೆರಿಗೆ ಸ್ಲ್ಯಾಬ್ ಮಾಹಿತಿಯು (Income tax slabs in budget 1992) ಸಖತ್ ವೈರಲ್ ಆಗಿದೆ(Viral News).

ಏನಿದೆ ಪೋಸ್ಟ್‌ನಲ್ಲಿ?

1992ರಲ್ಲಿ ಬಜೆಟ್‌ ವೇಳೆ ಅಂದಿನ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಿಸಿ ಹೊಸ ತೆರಿಗೆಗಳನ್ನು ವಿಧಿಸಿತ್ತು. ಅದರ ಮಾಹಿತಿಯನ್ನು ಒಳಗೊಂಡ ಇಂಡಿಯನ್ ಎಕ್ಸ್‌ಪ್ರೆಸ್ ಪೇಪರ್ ಕಟಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಅಂದಿನ ಆದಾಯ ಮಾಹಿತಿಯು ನಿಮ್ಮನ್ನು ದಂಗು ಬಡಿಸುತ್ತಿದೆ. ಅಂದಿನ ಆದಾಯಕ್ಕೂ ಇಂದಿನ ಆದಾಯಕ್ಕೂ ಸೋಷಿಯಲ್ ಮೀಡಿಯಾ ಬಳಕೆದಾರರು ಹೋಲಿಕೆ ಮಾಡಿ, ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ: Union Budget 2023: ಮಧ್ಯಮ ವರ್ಗಕ್ಕೆ ಬಂಪರ್‌, ವಾರ್ಷಿಕ 7 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ

ಅಂದು ಮಂಡಿಸಲಾದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 28 ಸಾವಿರ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆಯನ್ನು ವಿಧಿಸಿರಲಿಲ್ಲ. ಬಳಿಕ 28001 ರೂ.ನಿಂದ 50 ಸಾವಿರ ರೂ.ವರೆಗಿನ ಆದಾಯಕ್ಕೆ ಶೇ.20, 50001 ರೂ.ನಿಂದ 1 ಲಕ್ಷ ರೂ. ವರೆಗಿನ ಆದಾಯಕ್ಕೆ ಶೇ.30 ಮತ್ತು ಒಂದು ಲಕ್ಷ ರೂ.ಗಿಂತ ಮೇಲ್ಪಟ್ಟ ಆದಾಯಕ್ಕೆ ಶೇ.40 ತೆರಿಗೆಯನ್ನು ವಿಧಿಸಿತ್ತು. ಅಂದಿನ ಆದಾಯ ತೆರಿಗೆ ಮತ್ತು 2023ರ ಆದಾಯ ತೆರಿಗೆ ಸ್ಲ್ಯಾಬ್ ಕಂಪೇರ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಜತೆಗೆ ಈ ಮಾಹಿತಿಯು ಸಖತ್ ವೈರಲ್ ಕೂಡಾ ಆಗಿದೆ.

Exit mobile version