Site icon Vistara News

ಮುಂಬಯಿ-ಅಬುದಾಭಿ ನಡುವೆ ಅ.1ರಿಂದ ವಿಸ್ತಾರ ಏರ್‌ಲೈನ್‌ ಪ್ರತಿ ದಿನ ವಿಮಾನ ಹಾರಾಟ

vistara

ನವ ದೆಹಲಿ: ವಿಸ್ತಾರ ಏರ್‌ಲೈನ್ ಅಕ್ಟೋಬರ್‌ ೧ರಿಂದ ಮುಂಬಯಿ ಮತ್ತು ಅಬುದಾಭಿ ನಡುವೆ ಪ್ರತಿ ದಿನ ತಡೆ ರಹಿತ ವಿಮಾನ ಹಾರಾಟವನ್ನು ಆರಂಭಿಸಲಿದೆ.

ವಿಸ್ತಾರ ಏರ್‌ಲೈನ್ ಟಾಟಾ ಗ್ರೂಪ್‌ ಮತ್ತು ಸಿಂಗಾಪುರ ಏರ್‌ಲೈನ್ ನಡುವಣ ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ. ಮುಂಬಯಿ-ಅಬುದಾಭಿ ನಡುವೆ ಹಾರಾಟಕ್ಕೆ ಎ೩೨೦ ನಿಯೊ ವಿಮಾನವನ್ನು ವಿಸ್ತಾರ ಏರ್‌ಲೈನ್‌ ಬಳಸಲಿದೆ.

ಯುಎಇನಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸಲು ನಮಗೆ ಸಂತಸವೆನಿಸುತ್ತದೆ. ಮುಂಬಯಿ ಮತ್ತು ಅಬುದಾಭಿ ನಡುವೆ ವಿಮಾನ ಹಾರಾಟದಿಂದ ಪ್ರವಾಸೋದ್ಯಮ, ವಾಣಿಜ್ಯ, ವ್ಯಾಪಾರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಸ್ತಾರ ಸಿಇಒ ವಿನೋದ್‌ ಕಣ್ಣನ್‌ ತಿಳಿಸಿದ್ದಾರೆ.

ವಿಸ್ತಾರ ೫೩ ವಿಮಾನಗಳನ್ನು ಒಳಗೊಂಡಿದೆ. ೪೧ ಏರ್‌ಬಸ್‌ ಎ೩೨೦, ೫ ಏರ್‌ಬಸ್‌ ಎ೩೨೧ ನಿಯೊ, ೫ ಬೋಯಿಂಗ್‌ ೭೩೭-೮೦೦ ಎನ್‌ಜಿ ಮತ್ತು ೨ ಬೋಯಿಂಗ್‌ ೭೮೭-೯ ಡ್ರೀಮ್‌ಲೈನರ್ಸ್‌ ಅನ್ನು ಒಳಗೊಂಡಿದೆ.

ಟಿಕೆಟ್‌ ದರ ಎಕಾನಮಿ ದರ್ಜೆಗೆ ೧೭,೭೪೯ ರೂ, ಪ್ರೀಮಿಯಂ ಎಕಾನಮಿ-೨೨,೯೪೯ ರೂ, ಬಿಸಿನೆಸ್‌ ಕ್ಲಾಸ್-‌೪೫,೯೪೯ ರೂ.

Exit mobile version