Site icon Vistara News

Vistara Awards : 48 ಸಾಧಕ ಉದ್ಯಮಿಗಳಿಗೆ ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಅವಾರ್ಡ್‌ʼ

Vistara Awards Vistara Business Excellence Award for 48 accomplished entrepreneurs

ಬೆಂಗಳೂರು: ಉದ್ಯಮ ಲೋಕದಲ್ಲಿ ಸಾಧನೆ ಮಾಡಿದ ಯಶಸ್ವಿ ಉದ್ಯಮಿಗಳನ್ನು ಮತ್ತು ಹೊಸ ಆವಿಷ್ಕಾರಗಳ ಮೂಲಕ ಪ್ರೇರಕ ಶಕ್ತಿಗಳಾಗಿರುವ ಉದ್ಯಮಿಗಳನ್ನು ಗೌರವಿಸುವ ಉದ್ದೇಶದಿಂದ ʻವಿಸ್ತಾರ ನ್ಯೂಸ್‌ʼ ಆರಂಭಿಸಿದ ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಅವಾರ್ಡ್ಸ್‌ʼನ (Vistara Business Excellence Awards) ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಿತು.

Vistara Awards Vistara Business Excellence Award for 48 accomplished entrepreneurs

ಬೆಂಗಳೂರು ಮತ್ತು ರಾಜ್ಯದ ನಾನಾ ಜಿಲ್ಲೆಗಳ 48 ಮಂದಿ ಸಾಧಕ ಉದ್ಯಮಿಗಳನ್ನು ಪಂಚತಾರಾ ಹೋಟೆಲೊಂದರಲ್ಲಿ ನಡೆದ ಆಕರ್ಷಕ ಕಾರ್ಯಕ್ರಮದಲ್ಲಿ ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಪ್ರಶಸ್ತಿ-2024ʼ (Vistara Awards) ನೀಡಿ ಗೌರವಿಸಲಾಯಿತು. ಖ್ಯಾತ ಬಾಲಿವುಡ್‌ ನಟ, ನಿರ್ಮಾಪಕ, ಸಮಾಜ ಸೇವಕ ಸೋನು ಸೂದ್‌ (Sonu Sood) ಮತ್ತು ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿ ಸಪ್ತಮಿ ಗೌಡ (Saptami Gowda) ಪ್ರಶಸ್ತಿ ಪ್ರದಾನ ಮಾಡಿದರು.

Vistara Awards Vistara Business Excellence Award for 48 accomplished entrepreneurs

ಅಲ್ಪ ಅವಧಿಯಲ್ಲಿಯೇ ನಾಡಿನ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿವಾಹಿನಿ ಎನಿಸಿಕೊಂಡಿರುವ ʻವಿಸ್ತಾರ ನ್ಯೂಸ್‌ʼ, ಸುದ್ದಿ ಪ್ರಸಾರದ ಜತೆ ಜತೆಯಲ್ಲಿಯೇ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ವೈದ್ಯಕೀಯ, ಸಾರಿಗೆ, ಶಿಕ್ಷಣ, ಹೋಟೆಲ್‌ ಇಂಡಸ್ಟ್ರಿ, ಸಮಾಜಸೇವೆ, ರಿಯಲ್‌ ಎಸ್ಟೇಟ್‌, ಆಹಾರ ಉದ್ಯಮ, ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಛಲದಿಂದ ಸಾಧನೆ ಮಾಡಿ ತಮ್ಮ ಹೆಗ್ಗುರುತುಗಳನ್ನು ಮೂಡಿಸಿರುವ ಸಾಧಕರನ್ನು ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಪ್ರಶಸ್ತಿ-2024ʼ (Vistara Business Excellence Awards-2024) ನೀಡಿ ಗೌರವಿಸಿದೆ. ಈ ಕಾರ್ಯಕ್ರಮಕ್ಕೆ ʻಅಮೃತ್‌ನೋಣಿʼ, ʻಆದಿತ್ಯ ಬಿರ್ಲಾ – ಗ್ರಾಸಿಮ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ʼ, ʻಎಸ್‌ಎನ್‌ಎನ್‌ʼ, ʻಡಿಎಸ್‌ಮ್ಯಾಕ್ಸ್‌ʼ, ಧರ್ಮಸ್ಥಳದ ʻಸಿರಿʼ ಮತ್ತು ʻಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿʼ (ಕೆಎಂಎಫ್‌) ಸಹಕಾರ ನೀಡಿದ್ದವು.

Vistara Awards Vistara Business Excellence Award for 48 accomplished entrepreneurs

ಪ್ರಶಸ್ತಿ ನೀಡಲು ಹೆಮ್ಮೆಯಾಗುತ್ತಿದೆ ಎಂದ ಸೂದ್‌

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಖ್ಯಾತ ನಟ ಸೋನು ಸೂದ್‌, ʻʻಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಇಲ್ಲಿಯ ಉದ್ಯಮಿಗಳೇ ಕಾರಣ. ಇವರಿಗೆ ಪ್ರೋತ್ಸಾಹ ನೀಡಲು ʻವಿಸ್ತಾರ ನ್ಯೂಸ್‌ʼ ಈ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯʼʼ ಎಂದರಲ್ಲದೆ, ಇಂದು ಪ್ರಶಸ್ತಿ ಸ್ವೀಕರಿಸಿದ ಪ್ರತಿಯೊಬ್ಬರೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಕೊಡುಗೆ ಅಪಾರ. ಹೀಗಾಗಿಯೇ ಈ ಪ್ರಶಸ್ತಿ ಪ್ರದಾನ ಮಾಡಲು ತಮಗೆ ಹೆಮ್ಮೆ ಎನಿಸುತ್ತದೆ ಎಂದರು.

Vistara Awards Vistara Business Excellence Award for 48 accomplished entrepreneurs

ಸ್ಟಾರ್‌ ನಟಿ ಸಪ್ತಮಿ ಗೌಡ ಮಾತನಾಡಿ, ನಮ್ಮ ನಡುವಿನ ಸಾಧಕರನ್ನು ಈ ರೀತಿ ಗೌರವಿಸುತ್ತಿರುವುದು ಪ್ರಶಂಸನೀಯ ಕಾರ್ಯ. ʻವಿಸ್ತಾರ ನ್ಯೂಸ್‌ʼ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Vistara Awards Vistara Business Excellence Award for 48 accomplished entrepreneurs

ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ನಟ ಸೋನು ಸೂದ್‌ ಮತ್ತು ನಟಿ ಸಪ್ತಮಿ ಗೌಡ ಅವರನ್ನು ʻವಿಸ್ತಾರ ನ್ಯೂಸ್‌ʼನ ಪರವಾಗಿ ಗೌರವಿಸಲಾಯಿತು. ವಿಸ್ತಾರ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್.‌ವಿ. ಧರ್ಮೇಶ್‌ ಹಾಗೂ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ಕಿರಣ್‌ ಕುಮಾರ್‌ ಡಿ.ಕೆ. ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ ರಾಘವೇಂದ್ರ ಆಚಾರ್ಯ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ರೇಡಿಯೊ ಜಾಕಿ ಆರ್.ಜೆ ನೇತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು.

Vistara Awards Vistara Business Excellence Award for 48 accomplished entrepreneurs

ನಮ್ಮ ಮತ ನಮ್ಮ ಹಕ್ಕು ಎಂದು ಕನ್ನಡದಲ್ಲೇ ಸಾರಿದ ಸೂದ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಪ್ರಶಸ್ತಿ-2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ʻʻರಜೆ ಇದೆ ಎಂದು ಮನೆಯಲ್ಲಿಯೇ ಇರಬೇಡಿ, ಹೋಗಿ ಮತದಾನ ಮಾಡಿ, ಸೂಕ್ತ ನಾಯಕನನ್ನು ಆಯ್ಕೆ ಮಾಡಿʼʼ ಎಂದು ಮನವಿ ಮಾಡಿದ ನಟ ಸೋನು ಸೂದ್‌, ʻʻಬದುಕಲು ನಮ್ಮ ದೇಶ ಅತ್ಯುತ್ತಮ ತಾಣವಾಗಬೇಕಾದರೆ ನಾವೆಲ್ಲರೂ ಮತದಾನ ಮಾಡಲೇಬೇಕುʼʼ ಎಂದರು.

Vistara Awards Vistara Business Excellence Award for 48 accomplished entrepreneurs

ಇದನ್ನೂ ಓದಿ: Vistara Awards : ಬೆಸ್ಟ್‌ ಟೀಚರ್‌ ಪ್ರಶಸ್ತಿ ನೀಡಿದ ವಿಸ್ತಾರವೇ ಬೆಸ್ಟ್‌; ಮನದುಂಬಿ ಹಾರೈಸಿದ ಹೊರಟ್ಟಿ

ʻʻನಮ್ಮ ಈ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಇಂಪಾರ್ಟೆಂಟ್‌. ಇದು ನಮಗೆ ಈ ದೇಶವೇ ಕೊಟ್ಟ ಹಕ್ಕು ಈ ಹಕ್ಕನ್ನು ಚಲಾಯಿಸೋಣʼʼ ಎಂದ ನಟಿ ಸಪ್ತಮಿ ಗೌಡ, ಈಗ ಮತದಾನ ಮಾಡುವುದು ಸುಲಭವಾಗಿದೆ. ನಮ್ಮ ಮತ ಎಲ್ಲಿದೆ, ಯಾವ ಬೂತ್‌ ಎಂಬ ಮಾಹಿತಿ ಬೆರಳ ತುದಿಯಲ್ಲಿಯೇ ಸಿಗುತ್ತದೆ. ನಾವೆಲ್ಲರೂ ಮತದಾನ ಮಾಡಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ ಎಂದರು.

Vistara Awards Vistara Business Excellence Award for 48 accomplished entrepreneurs

ನಟ ಸೋನು ಸೂದ್‌, ʻನಮ್ಮ ಮತ, ನಮ್ಮ ಹಕ್ಕುʼ ಎಂದು ಕನ್ನಡದಲ್ಲಿಯೇ ಸ್ಪಷ್ಟವಾಗಿ ಹೇಳುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.

Exit mobile version