Site icon Vistara News

Vodafone layoff : ವೊಡಾಫೋನ್‌ 11,000, ಅಮೆಜಾನ್‌ನಲ್ಲಿ 500 ಉದ್ಯೋಗ ಕಡಿತ, ಕಾರಣವೇನು?

Vodafone layoff 11,000 job cuts in Vodafone 500 in Amazon what is the reason

ಲಂಡನ್:‌ ಬ್ರಿಟಿಷ್‌ ಮೊಬೈಲ್‌ ಫೋನ್‌ ದಿಗ್ಗಜ ವೊಡಾಫೋನ್‌ ( Vodafone layoff) ಮುಂದಿನ 3 ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ. ಕಂಪನಿಯ ವಹಿವಾಟು ಗಣನೀಯ ಕುಸಿದಿರುವುದರಿಂದ ಸಾಮೂಹಿಕ ಉದ್ಯೋಗ ಕಡಿತ ಅನಿವಾರ್ಯ ಎಂದು ನೂತನ ಸಿಇಒ ಮಾರ್ಗೆರಿಟಾ ಡೆಲ್ಲಾ ತಿಳಿಸಿದ್ದಾರೆ.

ವೊಡಾಫೋನ್‌ ಕಳೆದ ವರ್ಷ 104,000 ಉದ್ಯೋಗಿಗಳನ್ನು ಹೊಂದಿತ್ತು. ಇದರ 10% ಎಂದರೆ 11,000 ಹುದ್ದೆ ಆಗುತ್ತದೆ. ಉತ್ತಮ ಆದಾಯ ಮತ್ತು ಲಾಭವನ್ನು ಉಳಿಸಿಕೊಳ್ಳಲು ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ವೊಡಾಫೋನ್‌ ಸಿಇಒ ಮಾರ್ಗೆರಿಟಾ ಡೆಲಾ ತಿಳಿಸಿದ್ದಾರೆ.

ಇದನ್ನೂ ಓದಿ: Amazon layoffs : ಅಮೆಜಾನ್‌ನಲ್ಲಿ ಉದ್ಯೋಗ ಕಡಿತ ಆರಂಭ, ಜಾಹೀರಾತು ವಿಭಾಗಕ್ಕೆ ಎಫೆಕ್ಟ್

ನಾವು ನಮ್ಮ ಸಂಘಟನೆಯನ್ನು ಸರಳಗೊಳಿಸುತ್ತಿದ್ದೇವೆ, ಜತೆಗೆ ವೆಚ್ಚ ನಿಯಂತ್ರಣವೂ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಲ್ಲೂ ಕಳೆದ ವರ್ಷ ಸಹಸ್ರಾರು ಉದ್ಯೋಗ ಕಡಿತ ಸಂಭವಿಸಿದೆ.

ಅಮೆಜಾನ್‌ನಲ್ಲಿ 500 ಜಾಬ್‌ ಕಟ್:

ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ (Amazon layoff) 500 ಉದ್ಯೋಗಗಳನ್ನು ಕಡಿತಗೊಳಿಸಿದೆ. ವೆಬ್‌ ಸರ್ವೀಸ್‌, ಮಾನವ ಸಂಪನ್ಮೂಲ, ಸಪೋರ್ಟ್‌ ವಿಭಾಗದಲ್ಲಿ ಉದ್ಯೋಗ ಕಡಿತ ಮಾಡಿದೆ. ಕಳೆದ ಮಾರ್ಚ್‌ನಲ್ಲಿ ಅಮೆಜಾನ್‌ 9000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ತಿಳಿಸಿತ್ತು. ಅದರ ಭಾಗವಾಗಿ ಈ ಪ್ರಕ್ರಿಯೆ ನಡೆಯಲಿದೆ.

Exit mobile version