Site icon Vistara News

Home Loan : 50 ಲಕ್ಷ ಗೃಹ ಸಾಲದ ಬಡ್ಡಿಯಲ್ಲಿ 30 ಲಕ್ಷ ಉಳಿಸಬೇಕೇ? ಆರ್​​ಬಿಐನ ಈ ಹೊಸ ನಿಯಮಗಳನ್ನು ಪಾಲಿಸಿ

Home Loan

ಬೆಂಗಳೂರು: ಗೃಹ ಸಾಲದ (Home Loan) ಬಡ್ಡಿದರವು ಹೆಚ್ಚಾದಾಗ ಇಎಂಐಗಳಿಂದ ಸಾಲಗಾರರನ್ನು ರಕ್ಷಿಸಲು ಬ್ಯಾಂಕುಗಳು ಸಾಮಾನ್ಯವಾಗಿ ಸಾಲದ ಅವಧಿಯನ್ನು ಹೆಚ್ಚಿಸುತ್ತವೆ. ಆ ಕ್ಷಣಕ್ಕೆ ಇದು ಸಾಲಗಾರರಿಗೆ ಪೂರಕ ಎಂದು ಎನಿಸಿದರೂ ದೀರ್ಘ ಅವಧಿಯಲ್ಲಿ ಅದರ ಬಡ್ಡಿಯನ್ನು ಕಟ್ಟಲೇಬೇಕಾಗುತ್ತದೆ. ಈ ಸಮಸ್ಯೆಯಿಂದ ಸಾಲಗಾರರನ್ನು ಕಾಪಾಡಲು ರಿಸರ್ವ್​ ಬ್ಯಾಂಕ್​ ಇಂಡಿಯಾ (ಆರ್​ಬಿಐ) ಕೆಲವೊಂದು ಅನುಕೂಲಗಳನ್ನು ಮಾಡಿಕೊಟ್ಟಿದೆ. ಇಎಂಐ ಹೆಚ್ಚಿಸುವುದು, ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಮರುಹೊಂದಿಸುವ ಆಯ್ಕೆಗಳನ್ನು ಒಟ್ಟಿಗೆ ಬಳಸುವುದಕ್ಕೆ ಅವಕಾಶ ನೀಡಿದೆ. ಹಾಗಾದರೆ ಈ ನಿಯಮ ಹೇಗೆ ಸಾಲಗಾರರಿಗೆ ಹೇಗೆ ಅನುಕೂಲಕರ ಹಾಗೂ ಅದನ್ನು ಹೇಗೆ ಬಳಸಬಹುದು ಇದರಲ್ಲಿ ಹೊಸತೇನಿದೆ ಮತ್ತು ಇದು ಗೃಹ ಸಾಲಗಾರರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನೋಡೋಣ.

ಇಎಂಐಗಳ ಹೆಚ್ಚಳ ಅಥವಾ ಅವಧಿ ವಿಸ್ತರಣೆ- ಸಾಮಾನ್ಯ ಮಾನದಂಡ ಯಾವುದು?

ಬಡ್ಡಿ ಹೆಚ್ಚಾದಾಗ, ಬ್ಯಾಂಕ್​ಗಳು ಸಾಮಾನ್ಯವಾಗಿ ಇಎಂಐ ಹೆಚ್ಚಿಸುವ ಬದಲು ಸಾಲದ ಅವಧಿಯನ್ನು ವಿಸ್ತರಿಸಲು ಬಯಸುವೆ. ಇಲ್ಲಿಯವರೆಗೆ ದರ ಏರಿಕೆಯ ಸಂದರ್ಭದಲ್ಲಿ ಬ್ಯಾಂಕ್​​ಗಳಿಗೆ ಅವಧಿ ವಿಸ್ತರಣೆ ಬಿಟ್ಟರೆ ಬೇರೆ ಅವಕಾಶ ಇಲಿಲ್ಲ. ಬ್ಯಾಂಕ್​ಗಳು ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಬದಲು ಅವಧಿ ವಿಸ್ತರಣೆ ನಿರ್ಧಾರಗಳನ್ನು ಜಾರಿಗೆ ತರುತ್ತವೆ. ಸಾಲಗಾರರು ಇದರಿಂದ ತಕ್ಷಣ ಇಎಂಐ ಹೆಚ್ಚಳದ ತೊಂದರೆ ಅನುಭವಿಸುವುದಿಲ್ಲ. ಆದರೆ ಸಾಲಗಾರರಿಗೆ ವಿಸ್ತರಣೆ ಅವಧಿಯ ಬಡ್ಡಿ ಹೊರೆಯಾಗುತ್ತದೆ ಎಂಬುದು ಸತ್ಯ. ಇದಕ್ಕೆ ಉತ್ತಮ ಪರಿಹಾರವೇ ಇಎಂಐ ಹೆಚ್ಚಳ ಮಾಡುವುದು. ಇದು ಆರ್​ಬಿಐ ಮಾಡಿರುವ ಹೊಸ ಅನುಕೂಲ . ಸಾಲ ಕೊಟ್ಟ ಬ್ಯಾಂಕ್​ಗಳ ಬಳಿಗೆ ತೆರಳಿ ಅವಧಿ ವಿಸ್ತರಣೆ ಮಾಡುವ ಬದಲು ಇಎಂಐ ಹೆಚ್ಚಿಸುವಂತೆ ಕೋರಿಕೊಳ್ಳಬಹುದು.

ಗೃಹ ಸಾಲದ ಬಗ್ಗೆ ಆರ್​ಬಿಐನ ಹೊಸ ಆದೇಶ ಏನು?

ಆಗಸ್ಟ್ 18, 2023 ರಂದು ಬಿಡುಗಡೆಯಾದ ಅಧಿಸೂಚನೆಯಲ್ಲಿ, ಆರ್​ಬಿಐ ಸಾಲಗಾರರಿಗೆ ಇಎಂಐ ಹೆಚ್ಚಿಸಲು ಅಥವಾ ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಮರುಹೊಂದಿಸುವ ಸಮಯದಲ್ಲಿ ಎರಡೂ ಆಯ್ಕೆಗಳನ್ನು ಒಟ್ಟಿಗೆ ಬಳಸಲು ಅವಕಾಶ ನೀಡುವಂತೆ ಬ್ಯಾಂಕ್​​ಗಳಿಗೆ ಹೇಳಿದೆ. ‘

1) ಇಎಂಐ / ಅವಧಿ ಅಥವಾ ಎರಡರಲ್ಲೂ ಬದಲಾವಣೆಗೆ ಕಾರಣವಾಗುವ ಬೆಂಚ್​ಮಾರ್ಕ್​ ದರಗಳಲ್ಲಿನ ಬದಲಾವಣೆಯ ಸಂಭಾವ್ಯ ಪರಿಣಾಮದ ಕುರಿತು ಬ್ಯಾಂಕ್​ಗಳು ಸಾಲಗಾರರಿಗೆ ಮಾಹಿತಿ ನೀಡಬೇಕು.

2) ಬಡ್ಡಿ ಮರುಹೊಂದಿಸುವ ಸಮಯದಲ್ಲಿ, ಸಾಲಗಾರರಿಗೆ ಸ್ಥಿರ ಬಡ್ಡಿ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ನೀಡಬೇಕು. ಫ್ಲೋಟಿಂಗ್ ಬಡ್ಡಿಯಿಂದ ಫಿಕ್ಸೆಡ್ ಗೆ ಬದಲಾಯಿಸಲು ಅನ್ವಯವಾಗುವ ಎಲ್ಲಾ ಶುಲ್ಕಗಳ ವಿವರಗಳನ್ನು ಸಾಲ ಮಂಜೂರಾತಿ ಪತ್ರದಲ್ಲಿ ಬಹಿರಂಗಪಡಿಸಬೇಕು.

3) ಸಾಲಗಾರರಿಗೆ ಸಾಲದ ಅವಧಿಯನ್ನು ವಿಸ್ತರಿಸುವ ಅಥವಾ ಇಎಂಐಗಳಲ್ಲಿ ಹೆಚ್ಚಳ ಅಥವಾ ಎರಡನ್ನೂ ಹೆಚ್ಚಿಸುವ ಆಯ್ಕೆಯನ್ನು ನೀಡಬೇಕು.

4) ಅವಧಿಯ ವಿಸ್ತರಣೆಯು ನೆಗೆಟಿವ್ ಅಮೋರ್ಟೈಸೇಶನ್​ ಕಾರಣವಾಗಬಾರದು ಎಂದು ಬ್ಯಾಂಕ್​ಗಳು ಖಚಿತಪಡಿಸಿಕೊಳ್ಳಬೇಕು. ಅಂದರೆ ಮಾಸಿಕ ಸಾಲ ಪಾವತಿಗಳು ಸಾಲದ ಸಂಚಿತ ಬಡ್ಡಿದರವನ್ನು (Accruing intrest rate ) ಸರಿದೂಗಿಸಲೇಬೇಕು.

ಈ ಮೇಲಿನ ಹೊಸ ನಿಯಮಗಳ ಪ್ರಕಾರ ಸಾಲಗಾರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬ್ಯಾಂಕುಗಳು ಸಾಲದ ಕೆಲವು ಅಂಶಗಳ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಗೃಹ ಸಾಲ ಪಡೆದವರಿಗೆ ಈ ವಿಚಾರದಲ್ಲಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವಕಾಶ ಲಭಿಸಿದೆ.

ಇಲ್ಲಿಯವರೆಗೆ ವಸೂಲಿ ಮಾಡಲಾದ ಒಟ್ಟು ಬಡ್ಡಿ ಮತ್ತು ಅಸಲು, ಉಳಿದ ಸಾಲದ ವಾರ್ಷಿಕ ಬಡ್ಡಿದರ, ಇಎಂಐ ಮೊತ್ತ ಮತ್ತು ಪ್ರತಿ ತ್ರೈಮಾಸಿಕದ ನಂತರ ಉಳಿದಿರುವ ಇಎಂಐಗಳ ಸಂಖ್ಯೆಯನ್ನು ವಿವರಿಸುವ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಸಾಲದ ಹೇಳಿಕೆಯನ್ನು ಹಂಚಿಕೊಳ್ಳುವಂತೆ ಆರ್​ಬಿಐಗಳಿಗೆ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಹೊಸ ನಿಯಮ: ಇದು ನಿಮಗೆ ಹೇಗೆ ಸಹಾಯ ಮಾಡುತ್ತದೆ?

ಬಡ್ಡಿ ದರವನ್ನು ಹೆಚ್ಚಿಸಿದಾಗ ಸಾಲಗಾರರಿಗೆ ಆಯ್ಕೆ ಸಿಗುತ್ತದೆ. ಸಾಲಗಾರರಿಗೆ ತಮ್ಮ ಸಾಲದ ಅವಧಿಯನ್ನು ವಿಸ್ತರಿಸಲು, ಇಎಂಐ ಹೆಚ್ಚಿಸಲು ಅಥವಾ ಎರಡೂ ಆಯ್ಕೆಗಳ ಹೋಗಲು ಬಯಸುತ್ತವೆಯೇ ಎಂದು ನಿರ್ಧರಿಸಲು ಬ್ಯಾಂಕುಗಳು ಅವಕಾಶವನ್ನು ನೀಡಬೇಕಾಗುತ್ತದೆ.

ಇಲ್ಲೊಂದು ಉದಾಹರಣೆಯಿದೆ

ನೀವು 2020ರಲ್ಲಿ 20 ವರ್ಷಗಳವರೆಗೆ (240 ತಿಂಗಳುಗಳು) 7% ಬಡ್ಡಿದರದಲ್ಲಿ 50 ಲಕ್ಷ ರೂ.ಗಳ ಗೃಹ ಸಾಲವನ್ನು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ. ಸಾಲ ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಮಾಸಿಕ ಇಎಂಐ 38,765 ರೂ. ಒಟ್ಟಾರೆ ಬಡ್ಡಿ 43.04 ಲಕ್ಷ ರೂಪಾಯಿ. ಮೂರು ವರ್ಷಗಳ ನಂತರ ಬಡ್ಡಿದರವನ್ನು 9.25% ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಭಾವಿಸೋಣ. ಹೊಸ ಆರ್​ಬಿಐ ಆದೇಶದ ಪ್ರಕಾರ, ಬಡ್ಡಿದರವನ್ನು ಮರುಹೊಂದಿಸುವಾಗ ಬ್ಯಾಂಕುಗಳು ನಿಮ್ಮ ಇಎಂಐ ಅಥವಾ ಅವಧಿಯನ್ನು ಹೆಚ್ಚಿಸಲು ಅಥವಾ ಎರಡರ ಸಂಯೋಜನೆಯನ್ನು ಬಳಸಲು ನಿಮಗೆ ಆಯ್ಕೆ ನೀಡಬೇಕಾಗುತ್ತದೆ.

ನಿಮ್ಮ 20 ವರ್ಷಗಳ ಸಾಲವನ್ನು ಉಳಿದ 17 ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ನೀವು ಬಯಸಿದರೆ (3 ವರ್ಷಗಳು ಕಳೆದಿವೆ ಎಂದು ಪರಿಗಣಿಸಿ), ನಿಮ್ಮ ಇಎಂಐ ತಿಂಗಳಿಗೆ 44,978 ರೂ.ಗೆ ಏರುತ್ತದೆ. ಸಾಲದ ಅವಧಿಯ ಕೊನೆಯಲ್ಲಿ ನೀವು ಒಟ್ಟು 55.7 ಲಕ್ಷ ರೂ.ಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇಎಂಐ ಹೆಚ್ಚಾದರೆ ಮತ್ತು ಸಾಲದ ಅವಧಿ ಒಂದೇ ಆಗಿದ್ದರೆ ಈ ರೀತಿ ಆಗುತ್ತದೆ

ಗೃಹ ಸಾಲ ( ಲಕ್ಷ ರೂಪಾಯಿಗಳಲ್ಲಿ)25 5075 1
240 ತಿಂಗಳಿಗೆ ಶೇ 7 ಬಡ್ಡಿಯಂತೆ ಇಎಂಐ(ರೂಪಾಯಿಗಳಲ್ಲಿ)19,382 ರೂ.38,765 ರೂ.58,147 ರೂ.77,530 ರೂ.
ಶೇ7 ರಂತೆ ಪಾವತಿಸುವ ಒಟ್ಟು ಬಡ್ಡಿ 21.52 ಲಕ್ಷ43.04ಲಕ್ಷ64.55 ಲಕ್ಷ86.07 ಲಕ್ಷ
36 ತಿಂಗಳಿಗೆ ಪಾವತಿ ಮಾಡಿದ ಬಡ್ಡಿ (ಲಕ್ಷ ರೂಪಾಯಿ)5.06 ಲಕ್ಷ10.12 ಲಕ್ಷ15.18 ಲಕ್ಷ20.24 ಲಕ್ಷ
3ವರ್ಷಗಳ ಬಳಿಕ ಉಳಿಕೆ ಸಾಲ (ಲಕ್ಷಗಳಲ್ಲಿ)23.08 ಲಕ್ಷ6.16 ಲಕ್ಷ69.25 ಲಕ್ಷ92.33 ಲಕ್ಷ
17 ವರ್ಷಕ್ಕೆ ಶೇ. 9.25ರಂತೆ ಇಎಂಐ22,485 ರೂ44,978 ರೂ67,466 ರೂ89,956 ರೂ
ಶೇ. 9.25ರಂತೆ ಪಾವತಿಸಬೇಕಾದ ಬಡ್ಡಿ 22.79 ಲಕ್ಷ45.58
ಲಕ್ಷ
68.38
ಲಕ್ಷ
91.17
ಲಕ್ಷ
ಇಎಂಐ ಹೆಚ್ಚಿಸಿದರೆ ಪಾವತಿಸಬೇಕಾದ ಒಟ್ಡು ಬಡ್ಡಿ27.85 ಲಕ್ಷ55.7 ಲಕ್ಷ83.56 ಲಕ್ಷ1.11 ಕೋಟಿ.

ಇಎಂಐ ಹೆಚ್ಚಿಸದೇ ಲೋನ್​ ಪಾವತಿ ಅವಧಿ ಹೆಚ್ಚಿಸಿದರೆ

ಗೃಹ ಸಾಲ25 ಲಕ್ಷ50 ಲಕ್ಷ75 ಲಕ್ಷ1 ಕೋಟಿ
ಪೂರ್ಣ ಅವಧಿಗೆ ಇಎಂಐ19,382 ರೂ.38,765 ರೂ.58147 ರೂ.77,530 ರೂ.
ಇಎಂಐ ಹೆಚ್ಚಿಸದಿದ್ದರೆ ವಿಸ್ತರಣೆಯಾಗುವ ಅವಧಿ321 ತಿಂಗಳು321 ತಿಂಗಳು321 ತಿಂಗಳು321 ತಿಂಗಳು
ಪಾವತಿಸಬೇಕಾದ ಪರಿಷ್ಕೃತ ಬಡ್ಡಿ39.3 ಲಕ್ಷ78.4 ಲಕ್ಷ1.17 ಕೋಟಿ1.56 ಕೋಟಿ
ಒಟ್ಟು ಪಾವತಿ ಮಾಡುವ ಬಡ್ಡಿ44.36 ಲಕ್ಷ88.52 ಲಕ್ಷ1.32 ಕೋಟಿ1.7 ಕೋಟಿ
ಇಎಂಐ ಹೆಚ್ಚಿಸಿದರೆ ಆಗುವ ಲಾಭ16.5 ಲಕ್ಷ ರೂ.33 ಲಕ್ಷ ರೂ.49.5 ಲಕ್ಷ ರೂ.66 ಲಕ್ಷ ರೂ.

ಸಾಲದ ಇಎಂಐ ಅನ್ನು 38,765 ರೂ.ಗೆ ಉಳಿಸಿಕೊಳ್ಳಲು ಆರಿಸಿಕೊಂಡರೆ ಸಾಲ ಪ್ರಾರಂಭವಾದಾಗ ಇದ್ದಂತೆಯೇ – ಸಾಲವು 321 ತಿಂಗಳುಗಳು ಅಥವಾ 26 ವರ್ಷಗಳು ಮತ್ತು 10 ತಿಂಗಳುಗಳವರೆಗೆ ಮುಂದುವರಿಯುತ್ತದೆ. ಸಾಲದ ಅವಧಿಯ ಕೊನೆಯಲ್ಲಿ ನಿಮ್ಮ ಒಟ್ಟಾರೆ ಬಡ್ಡಿ ಪಾವತಿ 88.52 ಲಕ್ಷ ರೂ. ನೀವು ಹೆಚ್ಚಿನ ಇಎಂಐ ಬದಲಿಗೆ ಹೆಚ್ಚಿನ ಅವಧಿಯನ್ನು ಆರಿಸಿಕೊಂಡರೆ ನೀವು 33 ಲಕ್ಷ ರೂ.ಗಳ ಹೆಚ್ಚುವರಿ ಬಡ್ಡಿದರ ಪಾವತಿಸಬೇಕಾಗುತ್ತದೆ.

ನೀವು ಹೋಮ್ ಲೋನ್ ಇಎಂಐ ಹೆಚ್ಚಿಸಬೇಕೇ ಅಥವಾ ಅವಧಿಯನ್ನು ವಿಸ್ತರಿಸಬೇಕೇ?

ಬಡ್ಡಿದರವು ಹೆಚ್ಚಾದಾಗ ಇಎಂಐ ಅಥವಾ ಸಾಲದ ಅವಧಿಯನ್ನು ಹೆಚ್ಚಿಸುವುದು ಉತ್ತಮ ಆಯ್ಕೆಯೇ ಎಂದು ಗೃಹ ಸಾಲಗಾರ ಮೊದಲು ನಿರ್ಧರಿಸಬೇಕು. ಇಎಂಐಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ಮರುಪಾವತಿ ಸಾಮರ್ಥ್ಯದೊಳಗೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅವಧಿ ಹೆಚ್ಚಿಸಲು ತೀರ್ಮಾನಿಸಿದರೆ ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿ ಪಾವತಿಸಲು ಸಾಧ್ಯವೇ ಎಂದು ತಿಳಿದುಕೊಳ್ಳಬೇಕು.

ಇದನ್ನೂ ಓದಿ : Money Guide : ಸೆಪ್ಟೆಂಬರ್​ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್​ ಖಾತೆ ನಿಷ್ಕ್ರಿಯ ಖಚಿತ

ನಿಮ್ಮ ದೈನಂದಿನ ವೆಚ್ಚಗಳ ಮೇಲೆ ಪರಿಣಾಮ ಬೀರದೆ ಸಾಧ್ಯವಾದಷ್ಟು ಪೂರ್ವಪಾವತಿ ಮಾಡಲು ಪ್ರಯತ್ನಿಸಿ. ಪೂರ್ವಪಾವತಿ ಹೆಚ್ಚಾದಷ್ಟೂ, ಬ್ಯಾಲೆನ್ಸ್ ಮೊತ್ತ ಕಡಿಮೆಯಾಗುತ್ತದೆ ಹಾಗೂ ಬಡ್ಡಿ ಶುಲ್ಕಗಳು ನಿಯಂತ್ರಣದಲ್ಲಿರುತ್ತವೆ.

ಬೋಸನ್​ ಮೊತ್ತವನ್ನು ಬಳಸಿ

ಸಾಲಗಾರರು ಸಾಧ್ಯವಾದಷ್ಟು ಸಾಲಗಳನ್ನು ಪೂರ್ವಪಾವತಿ ಮಾಡಲು ವಾರ್ಷಿಕ ಬೋನಸ್ ಅಥವಾ ಅನಿರೀಕ್ಷಿತ ಲಾಭಗಳನ್ನು ಬಳಸಬೇಕು. ಸಾಲದ ಪೂರ್ವಪಾವತಿ ಮಾಡುವ ಮೊದಲು ತಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಣಯಿಸಬೇಕು. ಆದಾಯ ಹೆಚ್ಚಾದರೆ, ಇಎಂಐ ಮೊತ್ತದಲ್ಲಿ ಹೆಚ್ಚಳವನ್ನು ಆರಿಸಿಕೊಳ್ಳಿ, ಏಕೆಂದರೆ ಇದು ಸಾಲ ಮರುಪಾವತಿಯನ್ನು ವೇಗಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

Exit mobile version